ಮನೋರಂಜನೆ

ಚಿತ್ರದ ಪ್ರಮೋಷನ್‍ಗಾಗಿ ಡೋಲಾ ರೆ ಸಾಂಗ್‍ಗೆ ಸ್ಟೆಪ್ ಹಾಕಿದ ಐಶ್ವರ್ಯಾ ರೈ

Pinterest LinkedIn Tumblr

aish

ಮುಂಬೈ: ಬಾಲಿವುಡ್ ನೀಲಿ ಕಣ್ಣಿನ ಸುಂದರಿ ಐಶ್ವರ್ಯಾ ರೈ ಬಚ್ಚನ್ ಸರ್ಬಜಿತ್ ಚಿತ್ರದ ಪ್ರಮೋಷನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಿತ್ರದ ಪ್ರಮೋಷನ್‍ಗಾಗಿ ಖಾಸಗಿ ವಾಹಿನಿಯಲ್ಲಿ ಬರು ಸರಿಗಮಪ ಶೋನಲ್ಲಿ ಭಾಗವಹಿಸಿದ್ದ ಐಶ್ವರ್ಯಾ ಡೋಲಾ ರೆ ಹಾಡಿಗೆ ಕುಣಿದಿದ್ದಾರೆ.

14 ವರ್ಷದ ಹಿಂದೆ ತೆರೆಕಂಡ ದೇವದಾಸ್ ಚಿತ್ರದ ಸೂಪರ್ ಹಿಟ್ ಸಾಂಗ್ ಡೋಲಾ ರೆ ಹಾಡಿಗೆ ಐಶ್ವರ್ಯಾ ಸ್ಟೆಪ್ ಹಾಕಿದ್ದಾರೆ. ಹಿಂದಿನ ಜೋಶ್‍ನಲ್ಲೇ ಸ್ಟೆಪ್ ಹಾಕಿದ ಐಶ್ವರ್ಯಾಗೆ ಮಿಕಾ ಸಿಂಗ್, ರಣ್‍ದೀಪ್ ಹೂಡಾ ಸೇರಿದಂತೆ ಹಲವು ಸಿಂಗರ್ಸ್ ಸಾಥ್ ನೀಡಿದ್ರು.

ಸರ್ಬಜಿತ್ ಮೇ 20 ರಂದು ತೆರೆಗೆ ಬರುತ್ತಿದ್ದು, ಐಶ್ವರ್ಯಾ ಲೀಡ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಚಿತ್ರದಲ್ಲಿ ರಣ್‍ದೀಪ್ ಹೂಡಾ ಕೂಡ ಮುಖ್ಯಪಾತ್ರಧಾರಿಯಾಗಿದ್ದಾರೆ. ಚಿತ್ರವನ್ನು ಓಮಂಗ್ ಕುಮಾರ್ ನಿರ್ದೇಶನ ಮಾಡಿದ್ದು, ಜನರಿಗೆ ಚಿತ್ರ ಹಿಡಿಸುತ್ತೆ ಎನ್ನುವ ವಿಶ್ವಾಸದಲ್ಲಿದ್ದಾರೆ.

Write A Comment