ಮನೋರಂಜನೆ

ಪ್ರೀತಿಯ ನಾಯಿಯ ಜೊತೆ ಕೊಹ್ಲಿ ಸೆಲ್ಫೀ…

Pinterest LinkedIn Tumblr

kohli

ನವದೆಹಲಿ: ಸೆಲ್ಫೀ ಹೊಡೆಯುವ ಮಾತು ಬಂದ್ರೆ ಅದರಲ್ಲಿ ಕ್ರಿಕೆಟರ್ ವಿರಾಟ್ ಕೊಹ್ಲಿ ಮೀರಿಸುವವರು ಯಾರು ಇಲ್ಲ. ಈ ಹಿಂದೆ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಪುತ್ರಿ ಝೀವಾಳ ಜೊತೆಗೆ ಸೆಲ್ಫೀ ಕ್ಲಿಕ್ಲಿಸಿ ಭಾರೀ ಸುದ್ದಿಯಾಗಿದ್ರು, ಇದೀಗ ತಮ್ಮ ಪ್ರೀತಿಯ ನಾಯಿಯ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಫೇಸ್‍ಬುಕ್‍ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ.

ಹೌದು. ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗಿರುವ ಸೆಲ್ಫೀ ಕ್ರೇಜ್ ಎಲ್ಲರಿಗೂ ಗೊತ್ತೇ ಇದೆ. ಇದೀಗ ತಮ್ಮ ಪ್ರೀತಿಯ ನಾಯಿ ಬ್ರೂನೋ ಜೊತೆಗೆ ಕ್ಯೂಟ್ ಕ್ಯೂಟ್ ಸೆಲ್ಫೀಗಳನ್ನು ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ಹಿಟ್ ಆಗಿದೆ.

ಹಾಗಂತ ಕೊಹ್ಲಿ ಬ್ರೂನೋ ಜೊತೆಗೆ ಈ ಹಿಂದೆಯೂ ಸೆಲ್ಫೀ ತೆಗೆದುಕೊಂಡಿದ್ದಾರೆ. ಅಲ್ಲದೇ ಕಳೆದ ವರ್ಷ ದೀಪಾವಳಿಗೆ ಕೊಹ್ಲಿ ಹಾಗೂ ಬ್ರೂನೋ ಸೇರಿಕೊಂಡು ಸರಳ ದೀಪಾವಳಿ ಆಚರಣೆ ಮಾಡಿಯೆಂದು ವಿಡಿಯೋವೊಂದನ್ನ ಶೇರ್ ಮಾಡಿದ್ರು.

Write A Comment