ಮಾಸ್ಕೋ: ಈಗಿನ ಕಾಲದಲ್ಲಿ ಕೆಲಸಗಾರರನ್ನು ಕೆಲಸದಿಂದ ತೆಗೆದು ಹಾಕೋದು ಕಷ್ಟಕರವಾಗಿದೆ. ಯಾಕಂದ್ರೆ ಇಲ್ಲೊಬ್ಬ ಏರ್ಪೋರ್ಟ್ ಸಿಬ್ಬಂದಿ ತನ್ನ ಕೆಲಸ ಹೋಗಿದ್ದಕ್ಕೆ ವಿಮಾನವನ್ನೇ ಒಡೆದು ಹಾಕಿದ್ದಾನೆ.
ಹೌದು. ರಷ್ಯಾದ ಮಾಸ್ಕೋದಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಯೋರ್ವ ತನ್ನನ್ನು ಮೇಲಾಧಿಕಾರಿಗಳು ಕೆಲಸದಿಂದ ತೆಗೆದುಹಾಕಿದ್ದಕ್ಕೆ ಸಿಟ್ಟಿಗೆದ್ದು, ಕ್ರೇನ್ ಬಳಸಿ ವಿಮಾನವನ್ನೇ ನುಜ್ಜುಗುಜ್ಜು ಮಾಡಿದ್ದಾನೆ.
ಕ್ರೇನ್ ಏರಿದ್ದ ಸಿಬ್ಬಂದಿ ವೈಎಕೆ-40 ಹೆಸರಿನ ರಷ್ಯಾದ ಯು ಟೈರ್ ಸಂಸ್ಥೆಯ ಮೂರು ಎಂಜಿನ್ನ ಸಣ್ಣ ವಿಮಾನದ ಮೂತಿಯನ್ನೇ ಒಡೆದು ಹಾಕಿದ್ದಾನೆ. ಬರೋಬ್ಬರಿ 5 ಮಿಲಿಯನ್ ರುಬೆಲ್ಸ್ ಮೌಲ್ಯದ( ಅಂದಾಜು 50 ಲಕ್ಷ ರೂ.) ವಿಮಾನ ಸಿಬ್ಬಂದಿ ಸಿಟ್ಟಿಗೆ ನಾಶವಾಗಿದೆ.