ಮನೋರಂಜನೆ

ಕೊಹ್ಲಿ, ಎಬಿಡಿ ಯಾರು? ಎ೦ದು ಕೇಳಿದ ಆಸೀಸ್ ಸ್ಪಿನ್ನರ್ ಜ೦ಪಾ

Pinterest LinkedIn Tumblr

zampa-richardson

ನವದೆಹಲಿ: ಸದ್ಯ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಯಾರು? ಎಂದು ಕೇಳುವ ಮೂಲಕ ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಜಂಪಾ ಉದ್ಧಟತನ ತೋರಿದ್ದಾರೆ.

ಸದ್ಯ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಆಡುತ್ತಿರುವ ಆಸೀಸ್ ವೇಗಿ ಕೇನ್ ರಿಚರ್ಡ್ ಸನ್ ಎಂಎಸ್ ಧೋನಿ ಸಾರಥ್ಯದ ಪುಣೆ ಸೂಪರ್ ಜೈ೦ಟ್ಸ್ ತಂಡದ ವಿರುದ್ಧ ವಿರಾಟ್ ಹಾಗೂ ಎಬಿಡಿ ಜೋಡಿ ಅಮೋಘ ಶತಕದ ಜತೆಯಾಟ ನೀಡಿ ಮಿಂಚಿದ್ದರು.

ಪಂದ್ಯ ಮುಗಿದ ಬಳಿಕ ಈ ಇಬ್ಬರ ಜತೆಯಾಟ ನೋಡಲು ನಿಜಕ್ಕೂ ಅದೃಷ್ಟ ಎಂದು ಕೇನ್ ತಮ್ಮ ಸಂತಸವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಆಡಂ ಜಂಪಾ ಕೂಡಲೆ ಅವರು ಯಾರು ಎಂದು ಕೇಳುವ ಮೂಲಕ ಈ ಆಟಗಾರರ ಕಾಲೆಳೆಯಲು ಪ್ರಯತ್ನ ಮಾಡಿದ್ದರು.

ತಕ್ಷಣ ರಿಚಡ್‍೯ಸನ್ ಇವರಿಬ್ಬರು ಯಾರೆಂದು ಗೊತ್ತಾಗಬೇಕಾದರೆ ಪುಣೆ ತಂಡದ ಇಶಾಂತ್ ಶರ್ಮರನ್ನು ಕೇಳು ಎಂದು ಟಾಂಗ್ ನೀಡಿದ್ದರು. ಈ ಮಧ್ಯೆ ವಿರಾಟ್ ಅಭಿಮಾನಿಗಳಿಂದ ಆಕ್ರೋಶದ ಟ್ವೀಟ್ ಗಳು ಬಂದ ಕೂಡಲೇ ಜಂಪಾ ತಮ್ಮ ಸಂದೇಶವನ್ನು ಡಿಲೀಟ್ ಮಾಡಿದ್ದಾನೆ. ಈ ಪಂದ್ಯದಲ್ಲಿ ಇಶಾಂತ್ ಶರ್ಮಾ 4 ಓವರ್ ಗಳಲ್ಲಿ ಬರೋಬ್ಬರಿ 47 ರನ್ ಹೊಡೆಸಿಕೊಂಡಿದ್ದರು.

Write A Comment