ಅಂತರಾಷ್ಟ್ರೀಯ

ಡ್ರೋನ್‍ ಕ್ಯಾಮೆರದಲ್ಲಿ ಸೆರೆಯಾಯ್ತು ಏಷ್ಯಾದ ಅತಿ ದೊಡ್ಡ ಸೇತುವೆ ಅಪರೂಪದ ಚಿತ್ರಣ

Pinterest LinkedIn Tumblr

https://youtu.be/rT2CXc4gT2Y

ಬೀಜಿಂಗ್: ಚೀನಾದಲ್ಲಿ ನಿರ್ಮಾಣವಾಗುತ್ತಿರುವ ಏಷ್ಯಾದ ದೊಡ್ಡ ಹಾಗೂ ಅತಿ ಉದ್ದದ ಸೇತುವೆ ಎಂಬ ಖ್ಯಾತಿಗೆ ಒಳಗಾಗಿರುವ ಲಾಂಗ್‍ಜಿಯಾಂಗ್ ಗ್ರ್ಯಾಂಡ್ ಸೇತುವೆ ಅಪರೂಪದ ಚಿತ್ರಣ ಡ್ರೋನ್ ಕ್ಯಾಮೆರದಲ್ಲಿ ಸೆರೆಯಾಗಿದೆ.

ಚೀನಾದ ಯುನಾನ್ ಪ್ರಾಂತ್ಯದಲ್ಲಿ ನಿರ್ಮಾಣವಾಗುತ್ತಿರುವ ಈ ಬೃಹತ್ ಸೇತುವೆಗೆ ಬರೋಬ್ಬರಿ 1.5 ಬಿಲಿಯನ್ ಯಾನ್(ಅಂದಾಜು 1536 ಕೋಟಿ ರೂ.) ವೆಚ್ಚ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದೆ. ಈ ಸೇತುವೆ ಸುಮಾರು 8000 ಅಡಿ ಉದ್ದವಿದ್ದು(2.5 ಕಿಮೀ) 920 ಅಡಿ ಎತ್ತರದಲ್ಲಿ ನಿರ್ಮಾಣವಾಗಿದೆ.

ಅರಣ್ಯ ಪ್ರದೇಶದ ನಡುವೆ ನಿರ್ಮಾಣವಾಗುತ್ತಿರುವ ಸೇತುವೆಯ ದೃಶ್ಯಗಳನ್ನು ಡ್ರೋನ್‍ನಲ್ಲಿ ಸೆರೆಹಿಡಿಯಲಾಗಿದ್ದು, ನೋಡುಗರ ಮೈನವರೇಳಿಸುತ್ತದೆ. ಸೇತುವೆ ಕೆಳಗೆ, ಕಾಡಿನ ಮಧ್ಯೆದಲ್ಲಿ ಲಾಂಗ್‍ಜಿಯಾಂಗ್ ನದಿ ಹರಿಯುತ್ತಿದ್ದು, ಈ ಸೇತುವೆ ಚೀನಾದ ನಗರಗಳಾದ ಬೋಶಂದ್ ಹಾಗೂ ತೆಂಗ್‍ಚೋಂಗ್ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.

Write A Comment