ಮನೋರಂಜನೆ

ಐಪಿಎಲ್ ಫ್ರಾಂಚೈಸಿಗಳಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ಪ್ರೀತಿ ಝಿಂಟಾ

Pinterest LinkedIn Tumblr

preethi zinta

ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಕಿ, ಬಾಲಿವುಡ್ ನಟಿ ಪ್ರೀತಿ ಝಿಂಟಾ ಆಯೋಜನೆ ವೇಳೆ ಪ್ರತಿ ಬಾರಿಯೂ ಒಂದಲ್ಲ ಒಂದು ವಿವಾದ ಸೃಷ್ಟಿಯಾಗುವುದರಿಂದ ಫ್ರಾಂಚೈಸಿಗಳು ತೊಂದರೆ ಎದುರಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು ನಿಜ ಆದರೆ ದೇಶದ ಎಲ್ಲ ಸಮಸ್ಯೆಗಳಿಗೂ ಶ್ರೀಮಂತ ಐಪಿಎಲ್ ಟಿ20 ಲೀಗ್​ ಅನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಪ್ರೀತಿ ಝಿಂಟಾ ಅಭಿಪ್ರಾಯಪಟ್ಟಿದ್ದಾರೆ.

ಕಬಡ್ಡಿ, ಫುಟ್ ಬಾಲ್, ಬ್ಯಾಡ್ಮಿಂಟನ್ ಲೀಗ್ ನಡೆಯುತ್ತಿರುವುದು ಐಪಿಎಲ್ ನಿರ್ಮಿಸಿಕೊಟ್ಟ ವೇದಿಕೆಯಾಗಿದೆ. ಈಗಿರುವಾಗ ಐಪಿಎಲ್ ಟೂರ್ನಿ ಆಯೋಜನೆಯ ವೇಳೆ ವಿವಾದಗಳಿಂದಾಗಿ ತಂಡದ ಬ್ರ್ಯಾಂಡ್​ಗಳನ್ನು ಸೃಷ್ಟಿಸಲು ಸಮಸ್ಯೆ ಆಗುತ್ತಿದೆ. ಪ್ರತಿ ಬಾರಿಯೂ ವಿವಾದ ಹಾಗೂ ಇಲ್ಲಸಲ್ಲದ ರೂಮರ್​ಗಳಿಂದ ತಂಡದ ವಾಣಿಜ್ಯ ವ್ಯವಹಾರಗಳಿಗೆ ಹೊಡೆತ ಬೀಳುತ್ತಿದೆ ಎಂದು ಪ್ರೀತಿ ಬೇಸರ ವ್ಯಕ್ತಪಡಿಸಿದ್ದಾರೆ.

2013ರಲ್ಲಿ ಲೀಗ್​ಗೆ ಸ್ಪಾಟ್ ಫಿಕ್ಸಿಂಗ್​ನಿಂದ ಸಮಸ್ಯೆ ಎದುರಾದರೆ, 2014ರಲ್ಲಿ ಲೋಕಸಭೆ ಚುನಾವಣೆಯಿಂದಾಗಿ ಅರ್ಧ ಟೂರ್ನಿ ಯುಎಇ ಯಲ್ಲಿ ನಡೆಯಿತು. 2015ರಲ್ಲಿ ಐಪಿಎಲ್ ಮುಗಿದ ಬೆನ್ನಲ್ಲೇ ರಾಜಸ್ಥಾನ ಹಾಗೂ ಚೆನ್ನೈ ತಂಡವನ್ನು 2 ವರ್ಷ ಅಮಾನತಿನಲ್ಲಿಟ್ಟರೆ, ಈಗ ಬರದ ವಿಷಯವಾಗಿ ವಿವಾದಕ್ಕೆ ಗುರಿಯಾಗಿದೆ.

Write A Comment