ಮನೋರಂಜನೆ

ರಾಜ್ಯಸಭೆ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಮಲಯಾಳಂ ನಟ ಸುರೇಶ್ ಗೋಪಿ

Pinterest LinkedIn Tumblr

Suresh-Gopi

ತಿರುವನಂತಪುರ: ಕೇಂದ್ರ ಬಿಜೆಪಿ ಸರ್ಕಾರ ಮಲಯಾಳಂ ಪ್ರಸಿದ್ದ ನಟ ಸುರೇಶ್ ಗೋಪಿ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ. ಕೇರಳ ಜನತೆಗೆ ಪ್ರಧಾನಿ ಮೋದಿ ನೀಡಿರುವ ಉಡುಗೊರೆ ಇದು ಎಂದು ಸುರೇಶ್ ಗೋಪಿ ಅಭಿಪ್ರಾಯ ಪಟ್ಟಿದ್ದಾರೆ. ಕಲಾ ವಿಭಾಗದಲ್ಲಿ ಸುರೇಶ್ ಗೋಪಿ ಸಲ್ಲಿಸಿರುವ ಅಮೂಲ್ಯ ಸೇವೆಗಾಗಿ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.

ಸಸ್ತಮಂಗಲಂ ನ ತಮ್ಮ ನಿವಾಸದಲ್ಲಿ ಮಾತನಾಡಿದ ಸುರೇಶ್ ಗೋಪಿ, ಇದು ಎಲ್ಲರೂ ಸಂತೋಷ ಪಡುವ ಸಮಯವಾಗಿದೆ ಎಂದು ಹೇಳಿದರು, ರಾಜ್ಯ ಸಭೆಗೆ ನಾಮ ನಿರ್ದೇಶನವಾಗುವ ವಿಷಯ ಮೊದಲೇ ನನಗೆ ತಿಳಿದಿತ್ತು. ಆದರೆ ರಾಷ್ಟ್ರಪತಿಗಳ ಅಧಿಕೃತ ಅಂಕಿತದ ನಂತರವಷ್ಟೇ ವಿಷಯ ಪ್ರಕಟಿಸಲು ನಿರ್ಧರಿಸಿದ್ದೇ ಎಂದು ಹೇಳಿದ್ದಾರೆ.

ಕೋಜಿಕೋಡ್ ನಲ್ಲಿ ಚುನವಾಣಾ ಪ್ರಚಾರ ಕೈಗೊಂಡಿರುವ ಅವರು, ಮುಂದಿನ ಲೋಕಸಭೆ ಚುನಾವಣೆವರೆಗೂ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ. ಇನ್ನು ಸುರೇಶ್ ಗೋಪಿ ಅವರನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲು ಆಹ್ವಾನ ಬಂದಿದ್ದು, ಕೆಲ ತಾಂತ್ರಿಕ ಕಾರಣಗಳಿಂದಾಗಿ ಈ ಪ್ರಸ್ತಾಪ ಹಾಗೆಯೇ ಉಳಿದಿದೆ.

Write A Comment