ಅಂತರಾಷ್ಟ್ರೀಯ

ದುಷ್ಕರ್ಮಿಗಳು ನಾಯಿಗೆ ಪಟಾಕಿ ಸುತ್ತಿ ಬೆಂಕಿ ಇಟ್ಟ ವಿಡಿಯೋ ವೈರಲ್ ! ಅಡ್ಡಾದಿಡ್ಡಿ ಓಡಾಡಿ, ವಿಲ ವಿಲ ಓದ್ದಾಡಿ ಪ್ರಾಣ ಬಿಟ್ಟ ನಾಯಿ

Pinterest LinkedIn Tumblr

https://youtu.be/G3vLXXicB7Y

ಮನುಷ್ಯನ ಕ್ರೌರ್ಯ ಯಾವ ಮಟ್ಟಿಗಿದೆಯಂದರೆ ಪ್ರಾಣಿಗಳಿಗೆ ಬೆಂಕಿ ಹಚ್ಚಿ ಅದರಿಂದ ವಿಕೃತ ಸಂತೋಷ ಪಡುವ ಮನುಸ್ಸುಗಳಿಗೆ ಕಡಿಮೆ ಇಲ್ಲ.

ಅದೇ ರೀತಿ ಮೆಕ್ಸಿಕೋದ ಸ್ಯಾನ್ ಲೂಯಿಸ್ ಪೊಟೊಸಿ ಬಳಿ ದುಷ್ಕರ್ಮಿಗಳು ನಾಯಿಗೆ ಪಟಾಕಿ ಸುತ್ತಿ ಬೆಂಕಿ ಹಚ್ಚಿದ್ದಾರೆ. ಸ್ಫೋಟಗೊಂಡ ಪಟಾಕಿಗಳಿಂದ ನಾಯಿ ದೇಹಕ್ಕೆ ಬೆಂಕಿ ಆವರಿಸಿದೆ. ಸುಡುವ ಬೆಂಕಿಯಿಂದಾಗಿ ನಾಯಿ ಅಡ್ಡಾದಿಡ್ಡಿ ಓಡಾಡಿ, ವಿಲ ವಿಲ ಓದ್ದಾಡಿ ಪ್ರಾಣ ಬಿಟ್ಟಿದೆ. ಈ ವಿಡಿಯೋವನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಮನಕಲಕುವಂತಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರಾಣಿಗಳ ಮೇಲಿನ ದುರ್ವತನೆ ಆರೋಪ ಸಂಬಂಧ ಕಿಡಿಗೇಡಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ನೋಡಿ ಗಾಬರಿಗೊಂಡ ನಟ ಯುಜೆನಿಯೊ ಡೆರ್ಬೆಝ್ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ತನಿಖೆ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ನಟನಿಗೆ ಭರವಸೆ ನೀಡಿದ್ದಾರೆ.

Write A Comment