ಅಂತರಾಷ್ಟ್ರೀಯ

ಅಮೆರಿಕಾ ಮದ್ಯ ಕಂಪನಿಯಿಂದ ಮಲ್ಯಗೆ ರು.1.7 ಕೋಟಿ ವೇತನ

Pinterest LinkedIn Tumblr

vijay-mallya

ಲಂಡನ್/ವಾಷಿಂಗ್ಟನ್: ಅಮೆರಿಕಾದ ಕ್ಯಾಲಿಫೋರ್ನಿಯಾ ಮೂಲದ ಮೆಂಡೊಸಿನೋ ಬ್ರೇವಿಂಗ್ ಕಂಪನಿ(ಎಂಬಿಸಿ)ಯಿಂದ ಉದ್ಯಮಿ ವಿಜಯ್ ಮಲ್ಯ ಸುಮಾರು ರು.1.7 ಕೋಟಿ ವೇತನ ಪಡೆದಿದ್ದಾರೆ ಎಂದು ವರದಿಗಳು ಹೇಳಿವೆ.

ಭಾರತದ ಬ್ಯಾಂಕ್ ಗಳಿಗೆ 9,000 ಕೋಟಿ ಸಾಲ ಪಾವತಿಸದೇ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರಿಗೆ ಮೆಂಡೊಸಿನೋ ಬ್ರೇವಿಂಗ್ ಕಂಪನಿ ತಮ್ಮ ಉತ್ಪನ್ನವನ್ನು ಪ್ರಚಾರ ಪಡಿಸಲು 2015ರಲ್ಲಿ ಒಟ್ಟು ವೇತನ ಪ್ಯಾಕೇಜ್ ನ ಅರ್ಧದಷ್ಟು ಮೊತ್ತವನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.

ಎಂಬಿಸಿ ಕಂಪನಿ ಆರ್ಥಿಕ ನಷ್ಟದಿಂದ ಬಳಲುತ್ತಿದ್ದು, ಸುಮಾರು 1.7ಕೋಟಿ ವೇತನ ಪಡೆದುಕೊಂಡಿರುವ ಮಲ್ಯ ಅವರಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.

ಮಲ್ಯ ಅವರು ಎಂಬಿಸಿ ಕಂಪನಿಯ ನಿರ್ದೇಶಕ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಲಂಡನ್ ಹೊರತುಪಡಿಸಿ ವಿಶ್ವದ ಬೇರೆ ದೇಶಗಳಲ್ಲಿ ಕಂಪನಿಯ ಮದ್ಯ ಉತ್ಪನ್ನವನ್ನು ಪ್ರಚಾರ ಪಡಿಸುವ ಹೊಣೆಯನ್ನು ಮಲ್ಯ ಹೊತ್ತಿದ್ದರು. ಈ ಕಂಪನಿ ವಿವಿಧ ರಾಷ್ಟ್ರಗಳಲ್ಲಿ ಕಿಂಗ್ ಫಿಷರ್ ಪ್ರೀಮಿಯಂ ಬ್ರಾಂಡ್ ನ ಬಿಯರ್ ಗಳ ಉತ್ಪಾದನೆ ಮತ್ತು ಮಾರಾಟದ ಪರವಾನಗಿಯನ್ನು ಹೊಂದಿದೆ.

Write A Comment