ಅಂತರಾಷ್ಟ್ರೀಯ

ಪೊಲೀಸರನ್ನೇ ಬೆದರಿಸಿದ ಪುಟ್ಟ ಬಾಲಕ! ಈ ವೀಡಿಯೋ ನೋಡಿ…!

Pinterest LinkedIn Tumblr

https://youtu.be/FDxf9HNCSLY

ಬೀಜಿಂಗ್: ಸಾಮಾನ್ಯವಾಗಿ ಪೊಲೀಸರು ಕಳ್ಳರ, ಪುಂಡರ ಬೆವರಿಳಿಸ್ತಾರೆ. ಆದ್ರೆ ಪೊಲೀಸರೇ ಪುಟ್ಟ ಬಾಲಕನ ಕೈಯಲ್ಲಿ ಬೆವರಿಳಿಸಿಕೊಂಡಿರುವ ಅಪರೂಪದ ಸಂಗತಿ ಈಗ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾಯಿದೆ.

ಮಧ್ಯ ಚೀನಾದ ಮಾರ್ಕೆಟ್‍ವೊಂದರಲ್ಲಿ ಬಾಲಕನೊಬ್ಬ ಕೈಯಲ್ಲಿ ಮೆಟಲ್ ಪೈಪ್ ಹಿಡಿದುಕೊಂಡು ಪೊಲೀಸರನ್ನೇ ಹೆದರಿಸಿರುವ ಘಟನೆ ನಡೆದಿದೆ. ಪೊಲೀಸರ ಮೇಲೆ ಮಾತಿನ ಪ್ರಹಾರ ಶುರುಮಾಡಿಕೊಂಡಿದ್ದ ಬಾಲಕನನ್ನು ಕಂಡು ಪೊಲೀಸರು ದಂಗಾದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕೋಪ ಯಾಕೆ?: ಮಾರುಕಟ್ಟೆಯಲ್ಲಿ ಬಾಲಕನ ಪೋಷಕರು ಕಾನೂನು ಬಾಹಿರವಾಗಿ ಅಂಗಡಿಯೊಂದನ್ನು ತೆರೆದಿದ್ದರು. ಇದನ್ನು ತೆರವುಗೊಳಿಸಲು ಪೊಲೀಸರು ಬಂದಿದ್ದರು. ಇದರಿಂದ ಬಾಲಕನ ಕೋಪ ನೆತ್ತಿಗೇರಿತ್ತು ಎಂದು ಕಾಣುತ್ತೆ. ತನ್ನ ಶಕ್ತಿಯನ್ನ ಮೀರಿ ಪೊಲೀಸರಿಗೆ ಮಾತಿನ ಚಾಟಿ ಬೀಸಿದ್ದಾನೆ. ಮಗುವಿನ ಈ ಮಾತಿನ ಕಾಳಗ ನೋಡುಗರಿಗೆ ಹಾಸ್ಯವಾಗಿ ಕಂಡುಬಂದರೂ ಪೋಷಕರ ಪರ ನಿಂತ ಮಗುವಿನ ಧೈರ್ಯ ಮಾತ್ರ ಮೆಚ್ಚಲೇಬೇಕಾಗಿದೆ.

Write A Comment