ಅಂತರಾಷ್ಟ್ರೀಯ

ಇಲ್ಲೊಬ್ಬ ಟಿವಿ ನೋಡುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾನೆ…!

Pinterest LinkedIn Tumblr

guiness-record

ನ್ಯೂಯಾರ್ಕ್: ಏನೇನೋ ಸಾಧನೆ ಮಾಡಿ, ಸಾಹಸ ಮಾಡಿ ಗಿನ್ನಿಸ್ ದಾಖಲೆ ಪಡೆದಿರುವವರನ್ನು ನೋಡಿರ್ತೀರಾ. ಆದ್ರೆ ಇಲ್ಲೊಬ್ಬ ಟಿವಿ ನೋಡಿ ಗಿನ್ನಿಸ್ ದಾಖಲೆ ಪಡೆದುಕೊಂಡಿದ್ದಾನೆ ಅಂದ್ರೆ ನೀವು ನಂಬ್ಲೇಬೇಕು.

ಹೌದು. ನ್ಯೂಯಾರ್ಕ್ ನಿವಾಸಿ 25 ವರ್ಷದ ಎಜೆ ಫ್ರಾಂಗೊಸೊ ಬರೋಬ್ಬರಿ 94 ಗಂಟೆಗಳ ಕಾಲ ನಿರಂತರವಾಗಿ ಟಿವಿ ವೀಕ್ಷಣೆ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಗಿನ್ನಿಸ್ ದಾಖಲೆ ಪಡೆಯುವುದಕ್ಕಾಗಿಯೇ ಈತ 94 ಗಂಟೆ ಟಿವಿ ನೋಡಿರುವುದು ವಿಶೇಷ.

ನ್ಯೂಯಾರ್ಕ್‍ನ ಸಾಫ್ಟ್‍ವೇರ್ ಸೈಬರ್ ಲಿಂಕ್ ಸಂಸ್ಥೆ ಆಯೋಜಿಸಿದ್ದ ಗಿನ್ನಿಸ್ ದಾಖಲೆ ಸ್ಪರ್ಧೆಯಲ್ಲಿ ಎಜೆ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಭಾನುವಾರದವರೆಗೂ ಟಿವಿ ನೋಡಿದ್ದಾನೆ. ಈ ಸ್ಪರ್ಧೆಯಲ್ಲಿ ಗಂಟೆಗೆ 5 ನಿಮಿಷದಂತೆ ಬ್ರೇಕ್ ನೀಡಲಾಗಿತ್ತು. ಅದನ್ನು ಎಜೆ ಬಳಸಿದ್ದಾನೆ. ಈ ಹಿಂದೆ ಆಸ್ಟ್ರೇಲಿಯಾದ ಒಬ್ಬ ವ್ಯಕ್ತಿ 92ಗಂಟೆಗಳ ಕಾಲ ಟಿವಿ ನೋಡಿ ಗಿನ್ನಿಸ್ ದಾಖಲೆ ಪಡೆದಿದ್ದರು.

Write A Comment