ರಾಷ್ಟ್ರೀಯ

ದನ ಕೊಂದ ಅಪರಾಧಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ

Pinterest LinkedIn Tumblr

cow

ಜೈಪುರ: 4 ವರ್ಷದ ದನವನ್ನು ಕೊಂದ ಅಪರಾಧಿಗೆ ಜಿಲ್ಲಾ ನ್ಯಾಯಾಲಯ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡವನ್ನು ವಿಧಿಸಿ ರಾಜಸ್ತಾನದ ಜೈಸಲ್ಮೇರ್ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.

ನಾಲ್ಕು ವರ್ಷದ ಹಿಂದೆ ಜೈಸಲ್ಮೇರ್‍ನ ಕೊಟಡಿ ಎಂಬಲ್ಲಿ ಅಪರಾಧಿ ಸನ್ವಾಲ್ ಸಿಂಗ್ ಬೈಕನ್ನು ಏರಿ ದನವನ್ನು ಓಡಿಸಿಕೊಂಡು ಹೋಗಿದ್ದ. ಈ ವೇಳೆ ಉಸಿರಾಟದ ಸಮಸ್ಯೆಯಿಂದಾಗಿ ದನ ಮೃತಪಟ್ಟಿತ್ತು ಈತನ ಹುಚ್ಚಾಟದಿಂದಾಗಿ ಹಲವು ದನಗಳು ಗಂಭೀರವಾಗಿ ಗಾಯಗೊಂಡಿದ್ದವು.

ಈ ಹುಚ್ಚಾಟದ ವೇಳೆ ಸನ್ವಾಲ್ ಸಿಂಗ್‍ನನ್ನು ಕಿಸಾನ್ ರಾಮ್ ಎಂಬವರು ತಡೆಯಲು ಮುಂದಾಗಿದ್ದರು. ಆದರೆ ಅವರ ಮಾತುಗಳನ್ನು ನಿರ್ಲಕ್ಷಿಸಿ ಬೈಕನ್ನು ಓಡಿಸಿದ್ದ. ಕಾಚುರಾಂ ಎಂಬವರು ಈತನ ವಿರುದ್ಧ ಅಗಸ್ಟ್ 5, 2012ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

Write A Comment