ಕರ್ನಾಟಕ

ಮೂವರು ಯುವಕರ ಬರ್ಬರ ಕೊಲೆ

Pinterest LinkedIn Tumblr

attack

ಬೆಂಗಳೂರು,ಏ.೧೫-ನಗರದ ಮೂರು ಕಡೆಗಳಲ್ಲಿ ಸಂಭವಿಸಿದ ದುಷ್ಕೃತ್ಯಗಳಲ್ಲಿ ಮೂವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.

ಅನೈತಿಕ ಸಂಬಂಧಕ್ಕೆ ಯುವಕನೊಬ್ಬ ಬಲಿಯಾದರೆ,ಕ್ಲುಲಕ ಕಾರಣಕ್ಕೆ ಸ್ನೇಹಿತರ ನಡುವಿನ ಜಗಳಕ್ಕೆ ಯುವಕನೊಬ್ಬ ಪ್ರಾಣ ಕಳೆದುಕೊಂಡರೆ ಮತ್ತೊಂದೆಡೆ ಯುಕನೊಬ್ಬನನ್ನು ದುಷ್ಕರ್ಮಿಗಳು ಚಾಕುವಿನಿಂದ ಮನಸೋಇಚ್ಛೆ ಇರಿದು ಕೊಲೆ ಮಾಡಲಾಗಿದೆ.

ಕಾಟನ್‌ಪೇಟೆಯ ಫ್ಲವರ್ ಗಾರ್ಡನ್ ಕೊಳಗೇರಿಯ ವೆಂಕಟೇಶ್(೩೫) ಶ್ರೀನಗರದ ಮಹೇಶ(೨೫) ಹಾಗೂ ರಾಜಾನುಕುಂಟೆಯ ಬಳಿ ಸುಮಾರು ೩೫ ವರ್ಷದ ಕೊಲಿ ಕೆಲಸದ ಯುವಕ ಬರ್ಬರವಾಗಿ ಕೊಲೆಯಾಗಿದ್ದಾರೆ.

ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಫ್ಲವರ್ ಗಾರ್ಡನ್ ಕೊಳಗೇರಿಯ ಮನೆಯ ಮುಂಭಾಗ ಮಲಗಿದ್ದ ವೆಂಕಟೇಶನ ತಲೆ ಹೊಟ್ಟೆ ಬೆನ್ನು ಇನ್ನಿತರ ಭಾಗಗಳಿಗೆ ಪಕ್ಕದ ಮನೆಯ ದಿನಕರನ್ ಎಂಬಾತ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಸಿಟಿ ಮಾರ್ಕೆಟ್‌ನಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ ವೆಂಕಟೇಶ್‌ಗೆ ವಿವಾಹವಾಗಿರಲಿಲ್ಲ ಆರೋಪಿ ದಿನಕರನ್ ಪತ್ನಿಯ ಜೊತೆ ಆಕ್ರಮ ಸಂಬಂಧ ಇಟ್ಟುಕೊಂಡಿದ್ದ ಹಲವು ಬಾರಿ ಬುದ್ಧಿ ಹೇಳಿದ್ದರೂ ವೆಂಕಟೇಶ್ ಸರಿಯಾಗಿರಲಿಲ್ಲ ಇದರಿಂದ ರೊಚ್ಚಿಗೆದ್ದ ದಿನಕರನ್ ರಾತ್ರಿ ೨ರ ವೇಳೆ ಮನೆಯ ಮುಂಭಾಗ ಮಲಗಿದ್ದ ವೆಂಕಟೇಶ್‌ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಸ್ಥಳಕ್ಕಾಗಮಿಸಿದ ಕಾಟನ್ ಪೇಟ್ ಪೊಲೀಸರು ವೆಂಕಟೇಶ್ ಶವವನ್ನು ವಿಕ್ಟೋರಿಯಾ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿ ಪರಾರಿಯಾಗಿರುವ ದಿನಕರನ್‌ಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಕೆಂಪೇಗೌಡನಗರದ ಹಳೆ ಈಜುಕೊಳದ ಉದ್ಯಾನವದ ಬಳಿ ರಾತ್ರಿ ಕುಡಿದ ಮತ್ತಿನಲ್ಲಿ ಸ್ನೇಹಿತರ ಜಗಳ ವಿಕೋಪಕ್ಕೆ ತಿರುಗಿ ಮಹೇಶ್(೨೩)ನನ್ನು ನಾಲ್ವರು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಶ್ರೀನಗರದ ಮಹೇಶ್ ಕಂಬಿ ಕಟ್ಟುವ ಕೆಲಸ(ಬಾರ್‌ಬೆಂಡರ್)ಮಾಡುತ್ತಿದ್ದು ಆಟೋಚಾಲಕ ಮಹದೇವ ಸೇರಿ ನಾಲ್ವರು ಸ್ನೇಹಿತರ ಜೊತೆ ಕ್ಷುಲಕ ಕಾರಣಕ್ಕೆ ಆಗಾಗ ಜಗಳ ನಡೆಯುತ್ತಿತ್ತು.

ಜಗಳ ಮಾಡಿಕೊಳ್ಳುವುದು ಬೇಡ ಎಲ್ಲರೂ ದ್ವೇಷಬಿಟ್ಟು ಸ್ನೇಹಿತರಾಗಿ ಬಾಳೋಣ ಎಂದು ಮದ್ಯ ಸೇವಿಸಿದ ಐವರು ಮಾತನಾಡಿ ದ್ವೇಷ ಬಗೆಹರಿಸಿಕೊಳ್ಳಲು ರಾತ್ರಿ ೧೦ರ ವೇಳೆ ಐವರು ಹಳೆ ಈಜುಕೊಳದ ಉದ್ಯಾನವದ ಬಳಿಗೆ ಬಂದಿದ್ದಾರೆ ಅಲ್ಲಿ ಮಾತನಾಡುತ್ತಿದ್ದಾಗ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಮಹೇಶನ ಬೆನ್ನು ಹೊಟೆ ಇನ್ನಿತರ ಭಾಗಗಳಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹೇಶನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ ೩ರ ವೇಳೆ ಮೃತಪಟ್ಟಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಕೆಂಪೇಗೌಡನಗರ ಪೊಲೀಸರು ಮಹದೇವನನ್ನು ಬಂಧಿಸಿ ಉಳಿದ ಮೂವರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ನಗರದ ಹೊರವಲಯದ ರಾಜಾನುಕುಂಟೆಯಲ್ಲಿ ಸುಮಾರು ೩೫ ವರ್ಷ ವಯಸ್ಸಿನ ಯುವಕನೊಬ್ಬನನ್ನು ಚಾಕುವಿನಿಂದ ಇರಿದ ಬರ್ಬರವಾಗಿ ಕೊಲೆಗೈದಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಬೇರೆಲ್ಲೂ ಯುವಕನ ಹಣೆ ಕೆನ್ನೆ ದೇಹದ ಹಲವು ಭಾಗಗಳಿಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹವನ್ನು ಕಾಕೋಳ ಕೆರೆ ಬಳಿಯ ರಸ್ತೆ ಯಲ್ಲಿ ಎಸೆದುಹೋಗಿದ್ದಾರೆ. ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment