ರಾಷ್ಟ್ರೀಯ

ಪೆಟ್ರೋಲ್ ದರ ಲೀಟರ್ ಗೆ 74 ಪೈಸೆ, ಡೀಸೆಲ್ 1.30 ರುಪಾಯಿ ಇಳಿಕೆ

Pinterest LinkedIn Tumblr

petrol30

ನವದೆಹಲಿ: ಇತ್ತೀಚಿಗಷ್ಟೇ ಏರಿಕೆಯಾಗಿದ್ದ ತೈಲ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್ ಗೆ 74 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 1.30 ರುಪಾಯಿ ಇಳಿಕೆಯಾಗಿದೆ.

ಇಂದು ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಗೆ ಬರಲಿದ್ದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿಕೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ತೈಲ ಬೆಲೆ ಇಳಿಸಲಾಗಿದೆ.

ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ದರ ಪ್ರತಿ ಲೀಟರ್ ಗೆ ರು.61.87 ಇದ್ದು, ಮಂಗಳವಾರ ಮಧ್ಯರಾತ್ರಿಯಿಂದ ರು.61.13ಕ್ಕೆ ಹಾಗೂ ಡೀಸೆಲ್ ದರ ರು.49.31 ಇದ್ದು, ರು.48.01ಕ್ಕೆ ಇಳಿಯಲಿದೆ.

Write A Comment