ರಾಷ್ಟ್ರೀಯ

ಹೈದರಾಬಾದ್‍ನಲ್ಲಿ ಮೇಲಿನಿಂದ ದೊಪ್ಪನೆ ಬಿತ್ತು ಏರ್‍ಇಂಡಿಯಾ ವಿಮಾನ: ವಿಡಿಯೋ ನೋಡಿ

Pinterest LinkedIn Tumblr

ಹೈದರಾಬಾದ್: ಏರ್ ಇಂಡಿಯಾ ವಿಮಾನ ಇನ್ನೇನು ಟ್ರಕ್ ಮೇಲೆ ಕುಳಿತುಕೊಳ್ಳಬೇಕಿತ್ತು. ಆದರೆ ವಿಮಾನವನ್ನು ಮೇಲಕ್ಕೆ ಎತ್ತಿದ್ದ ಕ್ರೇನ್ ಭಾರವನ್ನು ತಾಳಲಾರದೇ ತುಂಡಾದ ಕಾರಣ ವಿಮಾನ ಮೇಲಿನಿಂದ ದೊಪ್ಪನೆ ಬಿದ್ದಿದೆ. ಅದೃಷ್ಟವಶಾತ್ ವಿಮಾನ ಬೀಳುವ ಸ್ಥಳದಲ್ಲಿ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 6.30ರ ವೇಳೆ ಚಾಲನೆಯಲ್ಲಿ ಇಲ್ಲದ ಏರ್‍ಬಸ್ ಎ320 ವಿಮಾನವನ್ನು 200 ಟನ್ ತೂಕದ ಕ್ರೇನ್ ಮೂಲಕ ಮೇಲಕ್ಕೆ ಎತ್ತುವ ಪ್ರಯತ್ನವನ್ನು ಸಿಬ್ಬಂದಿ ಮಾಡುತ್ತಿದ್ದರು. ಈ ವೇಳೆ ಕ್ರೇನ್ ಮಧ್ಯದಲ್ಲೇ ತುಂಡಾಗಿದ್ದು ವಿಮಾನ ಸಮೀಪದ ಕಂಪೌಡ್ ಮೇಲೆ ಬಿದ್ದಿದೆ.

ಹೈದರಬಾದ್ ವಿಮಾನ ನಿಲ್ದಾಣದಿಂದ 2 ಕಿ. ಮೀ ದೂರದಲ್ಲಿರುವ ತರಬೇತಿ ನೀಡುವ ಸ್ಥಳಕ್ಕೆ ಈ 70 ಟನ್ ತೂಕದ ವಿಮಾನವನ್ನು ಟ್ರಕ್‍ನಲ್ಲಿ ರಸ್ತೆ ಮೇಲೆ ಸಾಗಿಸಲು ಸಿಬ್ಬಂದಿ ಮುಂದಾಗಿದ್ದ ವೇಳೆ ಈ ಘಟನೆ ನಡೆದಿದೆ.

ಈ ರೀತಿಯ ಆಪರೇಷನ್ ದೇಶದಲ್ಲಿ ಇದೇ ಮೊದಲು ನಡೆದಿದ್ದು, ಏರ್ ಇಂಡಿಯಾ ತನ್ನ ಪೈಲೆಟ್, ಎಂಜಿನಿಯರ್ ಮತ್ತು ಭದ್ರತಾ ಸಿಬ್ಬಂದಿಗೆ ತರಬೇತಿ ನೀಡಲು ಈ ವಿಮಾನವನ್ನು ಬಳಸಲು ಮುಂದಾಗಿತ್ತು.

Write A Comment