ಮನೋರಂಜನೆ

ಸನ್ನಿ ಲಿಯೋನ್ ಗೆ ಬೆಂಗಳೂರೆಂದರೆ ಇಷ್ಟವಂತೆ!

Pinterest LinkedIn Tumblr

Sunny-Leone

ಬೆ೦ಗಳೂರು: ಬಾಲಿವುಡ್ ನ ಒನ್ ನೈಟ್ ಸ್ಟ್ಯಾಂಡ್ ಚಿತ್ರದ ಪ್ರಚಾರಾರ್ಥ ಬೆಂಗಳೂರಿಗೆ ಆಗಮಿಸಿರುವ ಮಾದಕ ನಟಿ ಸನ್ನಿ ಲಿಯೋನ್ ಗೆ ಬೆಂಗಳೂರು ಅಂದರೆ ಬಹು ಇಷ್ಟವಂತೆ. ಬೆಂಗಳೂರಿನ ವಾತಾವರಣ ನನಗೆ ಬಹು ಹಿಡಿಸಿದ್ದು, ಇಲ್ಲಿಗೆ ಬಂದರೆ ಮನಸ್ಸು ಹಗುರವಾಗುತ್ತದೆ ಎಂದು ಹೇಳಿದ್ದಾರೆ.

ಜಾಸ್ಮಿನ್ ಮೊಸೆಸ್ ಡಿಸೋಜಾ ನಿದೇ೯ಶನದ ಒನ್ ನೈಟ್ ಸ್ಟ್ಯಾ೦ಡ್ ಚಿತ್ರ ಏಪ್ರಿಲ್ 22ಕ್ಕೆ ತೆರೆ ಕಾಣಲಿದ್ದು ಚಿತ್ರದ ಪ್ರಚಾರಾಥ೯ ದೊಮ್ಮಲೂರಿನ ಖಾಸಗಿ ಹೋಟೆಲ್‍ಗೆ ಆಗಮಿಸಿದ್ದ ಸನ್ನಿ, ಉದ್ಯಾನನಗರಿಯನ್ನು ಮನಸಾರೆ ಕೊ೦ಡಾಡಿದರು. ಅಲ್ಲದೆ ಶನಿವಾರ ಈ ನಟಿಯ 5ನೇ ವಿವಾಹ ವಾಷಿ೯ಕೋತ್ಸವವೂ ಇದ್ದುದರಿ೦ದ ಡಬಲ್ ಖುಷಿಯಲ್ಲಿದ್ದರು.

ಇ೦ಡೋ-ಕೆನಡಿಯನ್ ಮೂಲದ ಸನ್ನಿ ಲಿಯೋನ್ ಬೆ೦ಗಳೂರಿನಲ್ಲೇ ನನ್ನ ಮದುವೆಯ 5ನೇ ವಾಷಿ೯ಕೋತ್ಸವ ಆಚರಿಸಿಕೊಳ್ಳುತ್ತಿರುವುದು ನನಗೆ ಮತ್ತಷ್ಟು ಸ೦ತಸ ತ೦ದಿದೆ ಎ೦ದರು.

Write A Comment