ಅಂತರಾಷ್ಟ್ರೀಯ

ಹಾವು ಕಚ್ಚಿ 45 ನಿಮಿಷ ಹಾಡುತ್ತಲೇ ವೇದಿಕೆಯ ಮೇಲೆ ಸಾವನ್ನಪ್ಪಿದ ಪಾಪ್ ಸಿಂಗರ್‍

Pinterest LinkedIn Tumblr

https://youtu.be/LeOe41g9xC0

ಕರಾವಂಗ್: ಸರ್ಪದಿಂದ ಕಡಿತಕ್ಕೊಳಗಾದರೂ ಕೂಡ ಬರೋಬ್ಬರಿ 45 ನಿಮಿಷ ಪಾಪ್ ಸಿಂಗರ್‍ವೊಬ್ಬಳು ಹಾಡಿ ವೇದಿಕೆಯ ಮೇಲೆ ಸಾವನ್ನಪ್ಪಿದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಇಂಡೋನೇಷ್ಯಾದ ವೆಸ್ಟ್ ಜಾವ ಕಾರವಾಂಗ್ ಹಳ್ಳಿಯಲ್ಲಿ ಸರ್ಪವನ್ನು ಹಿಡಿದು ಹಾಡುತ್ತಿದ್ದ ವೇಳೆ 29 ವರ್ಷದ ಗಾಯಕಿ ಐರ್ಮಾ ಸಾವನ್ನಪ್ಪಿದ್ದಾಳೆ. ಪ್ರತಿ ಬಾರಿ ಈಕೆ ಕಾರ್ಯಕ್ರಮ ನೀಡಬೇಕಾದ್ರೂ ಹಾವಿನ ಜೊತೆಯೇ ಹಾಡುತ್ತಿದ್ದ ಈಕೆಗೆ ಭಾನುವಾರ ನೀಡುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿದ್ದ ವೇಳೆ ಹಾವು ಕಚ್ಚಿದೆ. ಆದ್ರೆ ಹಾವು ಕಚ್ಚಿದ್ರೂ 45 ನಿಮಿಷ ಹಾಡಿ ನಂತರ ಮೃತಪಟ್ಟಿದ್ದಾಳೆ.

ಕಾರ್ಯಕ್ರಮದಲ್ಲಿ ಎರಡನೇ ಹಾಡನ್ನು ಹಾಡುತ್ತಿರಬೇಕಾದ್ರೆ ರಿಯಾಂತಿ ಎಂಬ ಹೆಸರಿನ ಹಾವಿನ ಬಾಲವನ್ನು ಐರ್ಮಾ ತುಳಿದಿದ್ದಾಳೆ. ಹೀಗಾಗಿ ಹಾವು ಆಕೆಯ ತೊಡೆಗೆ ಕಚ್ಚಿದೆ. ಆದ್ರೂ ಹಾಡುವುದನ್ನು ಬಿಡದ ಆಕೆ 45 ನಿಮಿಷ ಹಾಡನ್ನು ಹಾಡಿ ಪ್ರೇಕ್ಷರನ್ನು ರಂಜಿಸಿದ್ದಾಳೆ. ಆ ನಂತರ ವಾಂತಿ ಮಾಡಿಕೊಂಡಿದ್ದಾಳೆ. ಇದಾದ ಕ್ಷಣಾರ್ಧದಲ್ಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಐರ್ಮಾ ವೇದಿಕೆಯ ಮೇಲೆಯೇ ಪ್ರಾಣ ಬಿಟ್ಟಿದ್ದಾಳೆ.

ಈ ಸಂಬಂಧ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಇಂಡೋನೇಷ್ಯಾದಲ್ಲಿ ಹಾವುಗಳನ್ನು ಹಿಡಿದು ವೇದಿಕೆ ಮೇಲೆ ಕಾರ್ಯಕ್ರಮ ನೀಡುವುದು ಸಹಜವೆನ್ನಲಾಗಿದೆ.

Write A Comment