ಮನೋರಂಜನೆ

ಹೃತಿಕ್ ವಿರುದ್ಧ ಕಂಗನಾ ದೂರು ! ಬಾಲಿವುಡ್ ನಟನ ಬಂಧಿಸುವಂತೆ ಮನವಿ

Pinterest LinkedIn Tumblr

Kangana_Hrithik_legalnotic

ನವದೆಹಲಿ: ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ನಟ ಹೃತಿಕ್ ರೋಷನ್ ನಡುವಿನ ಕಾನೂನು ಸಮರ ತೀವ್ರ ಸ್ವರೂಪ ಪಡೆದುಕೊಂಡಿದ್ದು, 42 ವರ್ಷದ ನಟ ತನ್ನ ಖಾಸಗಿ ಚಿತ್ರಗಳನ್ನು ವಿತರಿಸುತ್ತಿದ್ದಾರೆ ಎಂದು ಆರೋಪಿಸಿ ಕ್ವೀನ್ ಚಿತ್ರದ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸಿಎನ್ಎನ್ ಐಬಿಎನ್ ವರದಿಯ ಪ್ರಕಾರ, ಹೃತಿಕ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಕಂಗನಾ, ಆರೋಪಿ ನಟನನ್ನು ಕೂಡಲೇ ಬಂಧಿಸುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ ವಕೀಲರು, ನನ್ನ ಕಕ್ಷಿದಾರರ ಒಳ್ಳೆತನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಹೃತಿಕ್ ರೋಷನ್ ಅವರು ತಮ್ಮ ಖಾಸಗಿ ಫೋಟೋಗಳನ್ನು ವಿತರಿಸುತ್ತಿದ್ದಾರೆ ಎಂದು ಮುಂಬೈ ಪೊಲೀಸ್ ಆಯುಕ್ತರಿಗೆ ನೀಡಿದ ದೂರಿನಲ್ಲಿ ಕಂಗನಾ ಆರೋಪಿಸಿದ್ದಾರೆ.

ಇತ್ತೀಚಿಗಷ್ಟೇ ತಮ್ಮ ಅಫೇರ್ ಬಗ್ಗೆ ಪರಸ್ಪರ ಲೀಗಲ್ ನೋಟಿಸ್‌ ಕೊಟ್ಟುಕೊಂಡಿದ್ದ ಬಾಲಿವುಡ್ ತಾರೆಯರು, ತನಗೆ ಹೃತಿಕ್ ಜತೆ ಅಫೇರ್ ಇದ್ದದ್ದು ನಿಜ ಎಂದು ಸಂದರ್ಶನದಲ್ಲಿ ಹೇಳಿದ್ದ ಕಂಗನಾ ತಮ್ಮ ಹೇಳಿಕೆ ವಾಪಸ್ ಪಡೆಯುವಂತೆ ಹೃತಿಕ್ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಕಂಗನಾ ಸಹ ಲೀಗಲ್ ನೋಟಿಸ್ ಕಳುಹಿಸಿದ್ದರು.

Write A Comment