ರಾಷ್ಟ್ರೀಯ

ಮೆಟ್ರೋದಲ್ಲಿ ಕಂಠಪೂರ್ತಿ ಕುಡಿದ ಯುವತಿಯರ ರಂಪಾಟ ನೋಡಿ!

Pinterest LinkedIn Tumblr

https://youtu.be/JzYlPMxBjDM

ನವದೆಹಲಿ: ಕಂಠಪೂರ್ತಿ ಕುಡಿದು ಯುವತಿಯರ ಗುಂಪೊಂದು ಮೆಟ್ರೋದಲ್ಲಿ ವ್ಯಕ್ತಿಯೊಬ್ಬರನ್ನು ನಿಂದಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಹೌದು. ನಿನ್ನೆ ವಿಶ್ವಮಹಿಳಾ ದಿನಾಚರಣೆ ದೇಶವೇ ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುತ್ತಿದೆ. ಆದ್ರೆ ಈ ಮಾತನ್ನು ಕೆಲವು ಯುವತಿಯರು ತಪ್ಪಾಗಿ ಅರ್ಥೈಸಿದ್ದಾರೆ ಎಂದು ಕಾಣುತ್ತದೆ. ನಿನ್ನೆ ದೆಹಲಿಯ ಮೆಟ್ರೋದಲ್ಲಿ ಕುಡಿದು ಬಂದ ನಾಲ್ವರು ಯುವತಿಯರು ವ್ಯಕ್ತಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಸುಮ್ಮನೆ ನಿಂತಿದ್ದ ಪ್ರಯಾಣಿಕರನ್ನು ತರಾಟೆಗೆ ತೆಗೆದುಕೊಂಡ ಯುವತಿಯರು, ಒಬ್ಬರ ನಂತರ ಒಬ್ಬರಂತೆ ಆತನಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಆದ್ರೆ ಅಲ್ಲೇ ಇದ್ದ ಪ್ರಯಾಣಿಕರು ಇದನ್ನು ಪ್ರಶ್ನಿಸಿದೇ ತಮಗೆ ಸಂಬಂಧವಿಲ್ಲವೆಂಬಂತೆ ನಿಂತಿದ್ದು ಮಾತ್ರ ವಿಪರ್ಯಾಸ. ಈ ಘಟನಾ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ.

Write A Comment