
ದುಬೈ: ಅಬುದಾಬಿಯಲ್ಲಿ ಮಂಗಳವಾರದಿಂದ ಭಾರೀ ಮಳೆಯಾಗುತ್ತಿದ್ದು ಜನ ಸಂಚಾರ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದು, ಶಾಲಾ ಕಾಲೇಜುಗಳಿಗೆ ಮತ್ತು ಕಂಪೆನಿಗಳಿಗೆ ಇಂದು ರಜೆ ಘೋಷಣೆಯಾಗಿದೆ.
ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಬುದಾಬಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಅಬುದಾಬಿಯ ಪಾಲಿಕೆ ತುರ್ತು ಅನಿವಾರ್ಯ ಇದ್ದಲ್ಲಿ ಮಾತ್ರ ನಗರದಲ್ಲಿ ಕಾರಿನಲ್ಲಿ ಸಂಚರಿಸಿ ಎಂದು ಜನರಿಗೆ ಸೂಚನೆ ನೀಡಿದೆ.



ಅಬುದಾಬಿಯ ಬಟೀನ್ ವಿಮಾನ ನಿಲ್ದಾಣದಲ್ಲಿ ಏರ್ ಎಕ್ಸ್‍ಪೋ ನಡೆಯುತ್ತಿದ್ದು, ಈ ವೈಮಾನಿಕ ಕಾರ್ಯಕ್ರಮಕ್ಕೂ ಮಳೆ ಅಡ್ಡಿ ಪಡಿಸಿದೆ. ಗಾಳಿ ಮಳೆಯಿಂದಾಗಿ ನಗರದಲ್ಲಿ ಹಾಕಲಾಗಿದ್ದು ವಿದ್ಯುತ್ ದೀಪದ ಕಂಬ ಸಹ ಅಲುಗಾಡುತ್ತಿರುವ ದೃಶ್ಯ ಸೆರೆಯಾಗಿದೆ. ಮರುಭೂಮಿ ಪ್ರದೇಶಗಳಲ್ಲಿ ಈ ರೀತಿ ಭಾರೀ ಮಳೆ ಬರುವುದು ಅಪರೂಪ.