ಮನೋರಂಜನೆ

ಸೈಫ್‍ನ ಬಿಟ್ಟು ಅರ್ಜುನ್ ಜೊತೆ ಮದುವೆಯಾಗ್ತಾಳಂತೆ ಕರೀನಾ! ಶಾಕ್ … ಶಾಕ್ ….

Pinterest LinkedIn Tumblr

key and ka

ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಆನ್‍ಸ್ಕ್ರೀನ್ ಗಂಡ ನಟ ಅರ್ಜುನ್ ಕಪೂರ್ ತಮ್ಮ ಮುಂದಿನ ಚಿತ್ರ ಕಿ ಆಂಡ್ ಕಾ ಚಿತ್ರದ ಪ್ರಮೋಷನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ತಾನು ಸೈಫ್ ಅಲಿ ಖಾನ್ ಬಿಟ್ಟು ಅರ್ಜುನ್ ಜೊತೆ ಮದುವೆ ಆಗ್ತೇನೆ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ.

ಹೌದು. ಕಿ ಆಂಡ್ ಕಾ ಚಿತ್ರ ಇನ್ನೇನು ಕೆಲವೇ ತಿಂಗಳಿನಲ್ಲಿ ತೆರೆಮೇಲೆ ಬರಲಿದೆ. ಸದ್ಯ ಅರ್ಜುನ್ ಜೊತೆ ಚಿತ್ರದ ಪ್ರಮೋಷನ್ ಮಾಡುತ್ತಿರುವ ಕರೀನಾ, ಅರ್ಜುನ್ ಆನ್‍ಸ್ಕ್ರೀನ್‍ನಲ್ಲಿ ತಮಗಾಗಿ ಮಾಡಿರುವ ಶ್ರಮಕ್ಕೆ ಆತನನ್ನೇ ಮದುವೆಯಾಗುವ ಮನಸ್ಸಾಗಿದೆ ಎಂದು ಪ್ರಮೋಷನ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇದರಿಂದ ಯಾರಿಗೆ ಶಾಕ್ ಆಗಿದೆಯೋ ಗೊತ್ತಿಲ್ಲ. ಆದ್ರೆ ಸೈಫ್‍ಗಂತೂ ಇದೊಂದು ದೊಡ್ಡ ಮಟ್ಟದ ಶಾಕ್ ಎನ್ನಬಹುದು.

ಆರ್ ಬಾಲ್ಕಿ ನಿರ್ದೇಶನದ ಕಿ ಆಂಡ್ ಕಾ ಚಿತ್ರದಲ್ಲಿ ಕರೀನಾ ಉದ್ಯಮಿ ಮಹಿಳೆಯಾಗಿ ಕಾಣಿಸಿಕೊಂಡರೆ, ಇತ್ತ ಅರ್ಜುನ್ ಮನೆಯಲ್ಲಿ ಹೆಂಡತಿಯ ಸೇವೆ ಮಾಡುವ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ.

Write A Comment