ಮನೋರಂಜನೆ

ಮೋಡಿ ಮಾಡ್ತಿದೆ ಮರುಧನಾಯಗಂ ಚಿತ್ರದ ಹಾಡು

Pinterest LinkedIn Tumblr

ಬೆಂಗಳೂರು: ಕಮಲ್‍ಹಾಸನ್ ನಟನೆಯ ಮರುಧನಾಯಗಂ ಚಿತ್ರದ ಸಾಂಗ್ ರಿಲೀಸಾಗಿದೆ. ಹಾಡಿನಲ್ಲಿ ಡೇರ್ ಅಂಡ್ ಡೇವಿಲ್ ಕಮಲ್‍ರನ್ನು ಕಾಣಬಹುದು.

ಈ ಚಿತ್ರ ಮರಧನಾಯಗಂ ಎಂಬ ತಮಿಳು ಹೋರಾಟಗಾರನ ಕುರಿತ ಕಥಾಂಶವನ್ನು ಹೊಂದಿದ್ದು, ಹಾಡಿನಲ್ಲಿನ ಕಮಲ್ ಲುಕ್, ಗೆಟಪ್ ಹಾಗೂ ಹಾಡಿನ ಸನ್ನಿವೇಶಗಳನ್ನು ನೋಡಿದ್ರೆ ಹಾಲಿವುಡ್‍ನ ಅಪೊಕಾಲಿಪ್ಸ್ ಚಿತ್ರವನ್ನು ನೆನಪಿಸುತ್ತದೆ. ಅಂದಹಾಗೆ ಮರುಧನಾಯಗಂ ಚಿತ್ರ 1997ರಲ್ಲೇ ಸೆಟ್ಟೇರಿತ್ತು. ಆದ್ರೆ ಆರ್ಥಿಕ ಸಮಸ್ಯೆಯಿಂದ ಪೂರ್ಣವಾಗಿರಲಿಲ್ಲ.

ಚಿತ್ರದ ಬಜೆಟ್ ಆಗಿನ ಕಾಲಕ್ಕೆ ನೂರು ಕೋಟಿ ಎಂದು ಹೇಳಲಾಗಿತ್ತು. ಈಗ ಅದು 400 ಕೋಟಿ ವರೆಗೆ ಬಜೆಟ್ ಬೇಡುತ್ತಿದ್ದು, ಒಂದಷ್ಟು ಪ್ರತಿಷ್ಟಿತ ಬ್ಯಾನರ್‍ಗಳು ಚಿತ್ರವನ್ನು ಮುಂದುವರೆಸಲು ಕಮಲ್‍ಗೆ ಕೈ ಜೋಡಿಸಲು ಮುಂದಾಗಿವೆ. ಚಿತ್ರ ಮತ್ತೆ ಶುರುವಾಗೋ ಮುನ್ಸೂಚನೆ ನೀಡಿದ್ದು, ಅದಕ್ಕೆ ಸಾಕ್ಷಿಯಾಗಿ ಈಗ ಚಿತ್ರದ ಹಾಡು ಬಿಡುಗಡೆಯಾಗಿದೆ. ಈ ಹಾಡಿನ ಚಿತ್ರೀಕರಣ ಸಖತ್ ರಿಚ್ ಆಗಿದ್ದು, 1997ರಲ್ಲೇ ಇಷ್ಟೊಂದು ಅದ್ಭುತವಾಗಿ ಚಿತ್ರಿಸಿದ್ದಾರಾ ಕಮಲ್ ಅನ್ನುವಂತಿದೆ. ಹಾಗೆ ಚಿತ್ರದ ಮೇಲೆ ಇನ್ನಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.

ಆ ಹಾಡಿನ ಝಲಕ್ ಇಲ್ಲಿದೆ ನೋಡಿ….

Write A Comment