ಅಂತರಾಷ್ಟ್ರೀಯ

ಕಳ್ಳನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸುವ ಮೂಲಕ ಅಮೆರಿಕದಲ್ಲಿ ಸುದ್ದಿ ಆಗಿದ್ದಾರೆ ಭಾರತ ಮೂಲದ ಮಹಿಳೆ….ಇಲ್ಲಿದೆ ನೋಡಿ ವೀಡಿಯೋ

Pinterest LinkedIn Tumblr

https://youtu.be/_YswFbLCEOY

ನ್ಯೂಯಾರ್ಕ್: ಭಾರತ ಮೂಲದ ಮಹಿಳೆಯೊಬ್ಬರು ಕಳ್ಳನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸುವ ಮೂಲಕ ಅಮೆರಿಕದಲ್ಲಿ ಸುದ್ದಿ ಆಗಿದ್ದಾರೆ.

ಭೂಮಿಕಾ ಪಟೇಲ್ ಎಂಬವರು ಜಾರ್ಜಿಯಾದ ಬುರ್ಕೆ ಕಂಟ್ರಿ ಎಂಬಲ್ಲಿ ಅಂಗಡಿ ಒಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದು, ಮಂಗಳವಾರ 17 ವರ್ಷದ ಯುವಕನೊಬ್ಬ ಖರೀದಿ ನೆಪದಲ್ಲಿ ಅಂಗಡಿ ಪ್ರವೇಶಿಸಿದ್ದಾನೆ.

ಪ್ರವೇಶಿಸಿದ ಬಳಿಕ ಕ್ಯಾಶಿಯರ್ ಕೌಂಟರ್‍ನಲ್ಲಿ ಪಿಸ್ತೂಲ್ ತೆಗೆದು ಶೂಟ್ ಮಾಡುತ್ತೇನೆ. ಬೇಗನೆ ಹಣ ನೀಡು ಎಂದು ಗದರಿಸಿದ್ದಾನೆ. ಈ ವೇಳೆ ಭೂಮಿಕಾ ಪಟೇಲ್ ಹಣ ಕೊಡಲ್ಲ ಬೇಕಾದ್ರೆ ಶೂಟ್ ಮಾಡು ಎಂದು ಹೇಳಿದ್ದಾರೆ. ಈ ವೇಳೆ ತಮ್ಮ ಸಮಯ ಪ್ರಜ್ಞೆಯಿಂದ ಆತನ ಶರ್ಟ್ ಹಿಡಿದು ಕಿ ಬೋರ್ಡ್‍ನಲ್ಲೇ ಚೆನ್ನಾಗಿ ಹೊಡೆದಿದ್ದಾರೆ. ಈ ವೇಳೆ ಆತ ಹೇಗೋ ತಪ್ಪಿಸಿ ಓಡಿ ಹೋಗಿದ್ದಾನೆ. ಆದರೆ ಭೂಮಿಕಾ ಅಂಗಡಿಯಲ್ಲಿದ್ದ ಸುತ್ತಿಗೆಯನ್ನು ತೆಗೆದು ಆತನ ಹಿಂದೆ ಓಡಿದ್ದಾರೆ.

ಈ ಘಟನೆಯ ಬಳಿಕ ಸಿಸಿಟಿವಿಯ ಆಧಾರಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಭೂಮಿಕಾ ಅವರ ಸಮಯ ಪ್ರಜ್ಞೆಯನ್ನು ಅಮೆರಿಕದ ಮಾಧ್ಯಮಗಳು ಹೊಗಳಿವೆ.

Write A Comment