ಮನೋರಂಜನೆ

ಕೊಹ್ಲಿ ಮತ್ತು ತೆಂಡೂಲ್ಕರ್ ಇವರಲ್ಲಿ ಯಾರು ಬೆಸ್ಟ್? ಪಾಕಿಸ್ತಾನ ನಾಯಕ ಶಾಹಿದ್ ಅಫ್ರೀದಿ ಕೊಟ್ಟ ಉತ್ತರ ಇಲ್ಲಿದೆ ನೋಡಿ…

Pinterest LinkedIn Tumblr

Sachin-and-Afridi

ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಇವರಲ್ಲಿ ಯಾರು ಬೆಸ್ಟ್? ಎಂದು ಕೇಳಿದ್ದಕ್ಕೆ ಪಾಕಿಸ್ತಾನ ನಾಯಕ ಶಾಹಿದ್ ಅಫ್ರೀದಿ, ನಾನು ಈ ಹಿಂದೆ ಕೂಡಾ ಈ ಬಗ್ಗೆ ಹೇಳಿದ್ದೆ. ಸಚಿನ್ ತೆಂಡೂಲ್ಕರ್ ಜತೆ ಯಾರನ್ನೂ ಹೋಲಿಕೆ ಮಾಡಲಾಗುವುದಿಲ್ಲ. ಭಾರತದ ಅಸಂಖ್ಯಾತ ಜನರಿಗೆ ಸಚಿನ್ ಒಬ್ಬ ರೋಲ್ ಮಾಡೆಲ್. ಆತನನ್ನು ಜಗತ್ತಿನಾದ್ಯಂತವಿರುವ ಜನರು ಫಾಲೋ ಮಾಡುತ್ತಾರೆ.

ವಿರಾಟ್ ಒಬ್ಬ ಚಾಂಪಿಯನ್ ಪ್ಲೇಯರ್. ಆತನ ಸಿಡುಕು ಬುದ್ಧಿಯೇ ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ. ವರುಷಗಳು ಕಳೆದಂತೆ ಆತ ಪ್ರಬುದ್ಧನಾಗುತ್ತಿದ್ದಾನೆ. ಇವರಿಬ್ಬರೂ ಒಳ್ಳೆಯ ಕ್ರಿಕೆಟಿಗರು. ಇವರಲ್ಲಿ ಒಬ್ಬರನ್ನು ಇನ್ನೊಬ್ಬರಿಂದ ಮೇಲೆತ್ತಿ ಹೇಳುವುದು ಅಸಾಧ್ಯ ಎಂದು ಉತ್ತರಿಸಿದ್ದಾರೆ.

ಏಷ್ಯಾ ಕಪ್ 2016ರಲ್ಲಿ ಶ್ರೀಲಂಕಾ ವಿರುದ್ಧ ಗೆಲವು ಸಾಧಿಸಿದ ನಂತರ ಮಾತನಾಡಿದ ಅಫ್ರೀದಿ, ನಮ್ಮಲ್ಲಿ ಒಳ್ಳೆಯ ಆಟಗಾರರಿದ್ದಾರೆ. ನಮಗೆ ನಮ್ಮ ಮೇಲಿನ ವಿಶ್ವಾಸವಷ್ಟೇ ಜಾಸ್ತಿ ಆಗ ಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Write A Comment