ಕನ್ನಡ ವಾರ್ತೆಗಳು

ತಾಂತ್ರಿಕ ದೋಷದಿಂದ ವಿವಿ ಪದವಿ ಫಲಿತಾಂಶ ಪ್ರಕಟಕ್ಕೆ ವಿಳಂಬ – ವಿದ್ಯಾರ್ಥಿಗಳು ಗೊಂದಲಪಡಬೇಕಿಲ್ಲ :ಎ.ಎಂ.ಖಾನ್

Pinterest LinkedIn Tumblr

VV_college_meet_1

ಮಂಗಳೂರು ,ಮಾ.05 : ಮಂಗಳೂರು ವಿವಿ ಪದವಿ ಫಲಿತಾಂಶದಲ್ಲಿ ಹಲವಾರು ಗೊಂದಲಗಳು ಉಂಟಾಗಿದ್ದು, ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಆತಂಕ ಗೊಂಡಿದ್ದಾರೆ. ಮಂಗಳೂರು ವಿವಿ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳ ಸೆಮಿಸ್ಟರ್ 1, 3, 5 ಪರೀಕ್ಷೆಗಳು ಮುಗಿದು ಎರಡು ತಿಂಗಳ ಹಿಂದೆಯೇ ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ, ಫಲಿತಾಂಶಗಳು ತಡವಾಗಿಯಾದರೂ ಫೆ. 21 ರಂದು ಬಿಬಿಎಂ, ಫೆ.23 ರಂದು ಬಿಕಾಂ, ಬಿಎಚ್ಆರ್ ಡಿ, ಫೆ.26 ರಂದು ಬಿಎ, ಬಿಎಸ್‌ಸಿ, ಮಾರ್ಚ್ 2ರಂದು ಬಾಕಿ ಉಳಿದ ವಿದ್ಯಾರ್ಥಿಗಳ ಫಲಿತಾಂಶ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದೆ.

ಪದವಿ ಪರೀಕ್ಷೆಗಳ ಮೌಲ್ಯ ಮಾಪನ ಇನ್ನೂ ಪೂರ್ಣಗೊಂಡಿಲ್ಲ. ಮೊದಲ ಹಂತದ ಮೌಲ್ಯಮಾಪನವಷ್ಟೆ ನಡೆದಿದೆ. ಎರಡನೇ ಹಂತದ ಮೌಲ್ಯಮಾಪನಕ್ಕಾಗಿ ವಿವಿ ಯಲ್ಲಿ ಸಿದ್ಧತೆ ನಡೆದಿದೆ.’ಫಲಿತಾಂಶದಿಂದ ವಿದ್ಯಾರ್ಥಿಗಳು ಗೊಂದಲಪಡಬೇಕಿಲ್ಲ, ಎರಡು ದಿನಗಳಲ್ಲಿ ಸ್ಪಷ್ಟ ಫಲಿತಾಂಶ ಪ್ರಕಟಿಸಲಾಗುವುದು’ ಎಂದು ಪರೀಕ್ಷಾಂಗ ಮೌಲ್ಯಮಾಪನ ರಿಜಿಸ್ಟಾರ್ ಎ.ಎಂ.ಖಾನ್ ಹೇಳಿದ್ದಾರೆ.

VV_college_meet_3 VV_college_meet_2

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ನೀಡಿರುವ ಫಲಿತಾಂಶಗಳು ತಾತ್ಕಾಲಿಕವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಸರಿಯಾದ ಫಲಿತಾಂಶ ಪ್ರಕಟಗೊಳ್ಳಲಿದೆ. ಇದರ ಬಗ್ಗೆ ವಿಧ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಗೊಂದಲ ಬೇಡ, ಆದರೂ ವಿದ್ಯಾರ್ಥಿಗಳಲ್ಲಿ ಗೊಂದಲವಿದ್ದಲ್ಲಿ 0824-2287277 , 2287327 ಹೆಲ್ಪ್ ಲೈನ್ ಗೆ ಕರೆ ಮಾಡಿ ತಮ್ಮ ಗೊಂದಲಗಳನ್ನು ಬಗೆಹರಿಸಬಹುದು.

ಪ್ರಶಾಂತ್ ನಾಯಕ್, ಮನೋಹರ್, ಪ್ರೊ.ಶಿವರಾಂ ಮೊದಲಾದವರು ಈ ಸಂಧರ್ಭ್ದಲ್ಲಿ ಉಪಸ್ಥಿತರಿದ್ದರು. ಉಪಸ್ಥಿತರಿದ್ದರು

Write A Comment