ಮನೋರಂಜನೆ

ಕೈಯಿಲ್ಲ, ಆದ್ರೂ ಬೌಲ್ ಮಾಡ್ತಾನೆ, ಬ್ಯಾಟ್ ಹಿಡಿಯುತ್ತಾನೆ! ಕಾಶ್ಮೀರದ ಪ್ಯಾರಾ ಕ್ರಿಕೆಟ್ ತಂಡದ ನಾಯಕ

Pinterest LinkedIn Tumblr

ಶ್ರೀನಗರ: ಕ್ರಿಕೆಟ್ ಆಡಲು ಕೈ ಇರಲೇಬೇಕು. ಆದರೆ ಜಮ್ಮು ಕಾಶ್ಮೀರ ಕ್ರಿಕೆಟರ್ ಒಬ್ಬರು ಕೈ ಇಲ್ಲದಿದ್ದರೂ ಈಗ ತಂಡ ನಾಯಕರಾಗಿದ್ದಾರೆ.

ಸಾಧನೆಗೆ ಅಂಗವೈಕಲ್ಯ ಅಡ್ಡಿ ಅಗುವುದಿಲ್ಲ ಎನ್ನುವುದಕ್ಕೆ ಕಾಶ್ಮೀರದ ಅಮೀರ್ ಹುಸೈನ್ ಒಂದು ಉತ್ತಮ ಉದಾಹರಣೆ. 26 ವರ್ಷದ ಅಮೀರ್ ಹುಸೈನ್ 1997ರಲ್ಲಿ ನಡೆದ ಅಪಘಾತದಲ್ಲಿ 2 ಕೈಗಳನ್ನು ಕಳೆದುಕೊಂಡಿದ್ದರು. 2 ಕೈಗಳನ್ನು ಕಳೆದುಕೊಂಡಿದ್ದರೂ ಈಗ ಇವರು ಕಾಶ್ಮೀರದ ಪ್ಯಾರಾ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆ ಆಗಿದ್ದಾರೆ.

ಕಾಲಿನ ಮೂಲಕವೇ ಬೌಲ್ ಮಾಡುವ ಇವರು, ತಲೆ ಮತ್ತು ಭುಜದಲ್ಲಿ ಬ್ಯಾಟ್ ಹಿಡಿಯುತ್ತಾರೆ. ಕಾಲಿನ ಮೂಲಕ ಸೂಪರ್ ಆಗಿ ಫೀಲ್ಡಿಂಗ್ ಮಾಡುತ್ತಾರೆ.

ಎರಡು ಕೈಗಳು ಹೋದರೂ ತಂದೆ ಮಾತ್ರ ಮಗನ ಉತ್ಸಾಹಕ್ಕೆ ಅಡ್ಡಿ ಆಗಲಿಲ್ಲ. ಮಗನ ಚಿಕಿತ್ಸೆಗಾಗಿ ತನ್ನ ಎಲ್ಲ ಆಸ್ತಿಯನ್ನು ತಂದೆ ಅಮೀರ್ ಮಾರಿದ ಕಾರಣ ಹುಸೈನ್ ಈಗ ತಂಡದ ನಾಯಕರಾಗುವ ಮಟ್ಟಕ್ಕೆ ಬೆಳೆದಿದ್ದಾರೆ.

ಈ ಸಾಧನೆಗೆ ಬಗ್ಗೆ ಏನು ಹೇಳುತ್ತೀರಿ ಎಂದಿ ಕೇಳಿದ್ದಕ್ಕೆ,”ನಾನು ಭರವಸೆಯನ್ನು ಕಳೆದುಕೊಂಡಿಲ್ಲ. ನಾನು ಸೋತಿಲ್ಲ. ಮುಂದೆ ಹೋಗಿಯೇ ಹೋಗುತ್ತೇನೆ. ಇದು ನನ್ನ ಆಸೆ” ಎಂದು ಅಮೀರ್ ಹುಸೈನ್ ಹೇಳುತ್ತಾರೆ.

Write A Comment