ಅಂತರಾಷ್ಟ್ರೀಯ

ತಲೆ ಕಡಿಯುವ ಪಾಠ ಮಾಡುತ್ತಿದ್ದ ಇಸಿಸ್ ಮುಖಂಡ ಒಂದೇ ಬುಲೆಟ್ ಗೆ ಫಿನಿಷ್; 4000 ಅಡಿಗಳ ದೂರದಲ್ಲಿದ್ದಾತನ ತಲೆಗೆ ಸಿಡಿದ ಗುಂಡು, ಬಿಟೀಷ್ ಸ್ನೈಪರ್ ತಂಡದ ಯೋಧನಿಂದ ಅದ್ಭುತ ಗುರಿ

Pinterest LinkedIn Tumblr

https://youtu.be/Xtk_5atPyrg

ರಾಖಾ: ಇಸಿಸ್ ಕಪಿಮುಷ್ಠಿಯಲ್ಲಿರುವ ರಾಖಾ ನಗರದಲ್ಲಿ ಉಗ್ರರಿಗೆ ತಲೆಕಡಿಯುವ ಪಾಠಮಾಡುತ್ತಿದ್ದ ಉಗ್ರ ಮುಖಂಡನೋರ್ವನನ್ನು ಬ್ರಿಟೀಷ್ ಸೇನೆಯ ಸ್ನೈಪರ್ ತಂಡದ ಯೋಧನೋರ್ವ ಸುಮಾರು 4 ಸಾವಿರ ಅಡಿ ದೂರದಿಂದ ಗುಂಡು ಹಾರಿಸಿ ಕೊಂದು ಹಾಕಿದ ಘಟನೆ ಇದೀಗ ವೈರಲ್ ಆಗಿದೆ.

ಉಗ್ರರಿಗೆ ತಲೆ ಕಡಿಯುವ ಕುರಿತು ಪಾಠ ಮಾಡುತ್ತಿದ್ದ ಉಗ್ರ ಮುಖಂಡ ಆಗತಾನೆ ಊಟ ಮಾಡಿ ನಿಂತಿದ್ದ ವೇಳೆ ಯೋಧ ಸಿಡಿಸಿದ ಗುಂಡು ಆತನ ತಲೆಯನ್ನು ಚೂರುಚೂರು ಮಾಡಿದೆ. ಮೂಲಗಳ ಪ್ರಕಾರ ಈ ರೀತಿ ಸಾವಿಗೀಡಾಗದ ಉಗ್ರ ಮುಖಂಡನ ಹೆಸರು ತಿಳಿಯದೇ ಇದ್ದರೂ ಆತ ಇಸಿಸ್ ಉಗ್ರರಿಗೆ ತಲೆ ಕಡಿಯುವ ಬಗ್ಗೆ ಪಾಠ ಮಾಡುತ್ತಿದ್ದ ಎಂಬ ಮಾಹಿತಿ ಮಾತ್ರ ಲಭ್ಯವಾಗಿದೆ. ಈ ವಿಚಾರವನ್ನು ಸ್ವತಃ ಬ್ರಿಟೀಷ್ ಸೇನೆ ಒಪ್ಪಿಕೊಂಡಿದ್ದು ತಮ್ಮ ಸೇನೆಯ ಸ್ನೈಪರ್ ತಂಡದ ಯೋಧ ಇಸಿಸ್ ಉಗ್ರ ಮುಖಂಡನನ್ನು ಹೊಡೆದುರುಳಿಸಿದೆ ಎಂದು ಹೇಳಿದೆ.

ಇಸಿಸ್ ಉಗ್ರರ ಹಿಡಿತದಲ್ಲಿರುವ ರಾಖಾ ನಗರದ ಸುತ್ತಮುತ್ತ ವಿಶ್ವದ ನಾನಾ ರಾಷ್ಟ್ರಗಳ ಸೇನೆಗಳು ಸುತ್ತುವರೆದಿದ್ದು, ಆಯಾಕಟ್ಟಿನ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಈ ರೀತಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಬ್ರಿಟನ್ ಸೇನೆಯ ಸ್ನೈಪರ್ ಯೋಧನಿಗೆ ಇಸಿಸ್ ಉಗ್ರ ಮುಖಂಡನ ಗುರಿ ಸಿಕ್ಕಿದ್ದು, ಕ್ಷಣಮಾತ್ರವೂ ಯೋಚನೆ ಮಾಡದೇ ತನ್ನ ಬಳಿಯಿದ್ದ ಇಸ್ರೇಲ್ ನಿರ್ಮಿತ .338 ಕ್ಯಾಲಿಬರ್ ಡ್ಯಾನ್ ರಿಫ್ಲ್ ಅತ್ಯಾಧುನಿಕ ರೈಫಲ್ ನಿಂದ ಗುಂಡು ಹಾರಿಸಿದ್ದಾನೆ.

ಸುಮಾರು 4 ಸಾವಿರ ಅಡಿಗಳಷ್ಟು ದೂರದಲ್ಲಿದ್ದ ಉಗ್ರ ಮುಖಂಡ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿಯೇ ಆತನ ತಲೆ ಛಿದ್ರವಾಗಿದೆ. ಇನ್ನು ಈ ಬಗ್ಗೆ ಹೆಮ್ಮೆಯಿಂದಲೇ ಹೇಳುವ ಬ್ರಿಟೀಷ್ ಸ್ನೈಪರ್ ಯೋಧ ಸಾಮಾನ್ಯ ಕಾರ್ಯಾಚರಣೆ ನಿಮಿತ್ತ ನಾವು ಪಹರೆ ಕಾಯುತ್ತಿದ್ದಾಗ ಅಚಾನಕ್ಕಾಗಿ ಉಗ್ರ ಮುಖಂಡನ ಗುರಿ ಸಿಕ್ಕಿತು. ಸುಮಾರು 1 ನಿಮಿಷ ಆತ ಅಲ್ಲಿಯೇ ನಿಂತಿದ್ದ. ಆತ ಕದಲ ಬಹುದು ಎಂದು ಒಂದಷ್ಟು ಕ್ಷಣ ನಾನು ಕಾದೆ. ಆದರೆ ಆತ ಕದಲಿಲ್ಲ. ಹೀಗಾಗಿ ಇದೇ ಸರಿಯಾದ ಸಮಯ ಎಂದು ಹೇಳಿ ಗುಂಡು ಹಾರಿಸಿದೆ. 4 ಸಾವಿರ ಅಡಿಗಳಷ್ಟು ದೂರದಲ್ಲಿ ಗುರಿ ಇತ್ತಾದರೂ, ಅಸಾಧ್ಯವಾಗೇನು ಇಲ್ಲ ಎಂದು ಧೈರ್ಯ ಮಾಡಿ ಗುರಿ ಇಟ್ಟೆ. ಅದೃಷ್ಟವಶಾತ್ ಗುರಿ ಯಶಸ್ವಿಯಾಯಿತು. ಆತ ಎಲ್ಲಿ ಬದುಕಿದ್ದಾನೆಯೋ ಎಂದು ನೋಡಿದೆ. ಆದ ಸಾವನ್ನಪ್ಪಿದ್ದ ಆತನ ಸುತ್ತ ಹತ್ತಾರು ಉಗ್ರರು ಸುತ್ತವರೆದಿದ್ದರು ಎಂದು ಹೇಳಿದ್ದಾರೆ.

Write A Comment