ರಾಷ್ಟ್ರೀಯ

ನಾಳೆಯ ಬಜೆಟ್‌ ನನಗೂ ಪರೀಕ್ಷೆ ಇದ್ದಂತೆ: ಮೋದಿ

Pinterest LinkedIn Tumblr

mo

ನವದೆಹಲಿ (ಪಿಟಿಐ): ನಾಳೆ ನನಗೂ ಪರೀಕ್ಷೆ ಇದೆ ಎನ್ನುವ ಮೂಲಕ ವಿದ್ಯಾರ್ಥಿಗಳ ಪರೀಕ್ಷೆ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಬೆಳಕು ಚಲ್ಲಿದ್ದಾರೆ.

ಇಂದು ನಡೆದ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ನಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿಗಳ ಪರೀಕ್ಷೆ ಕುರಿತಂತೆ ಮೋದಿ ಮಾತನಾಡಿದರು.

ಪೋಷಕರು ಮಕ್ಕಳ ಪರೀಕ್ಷೆ ಬಗ್ಗೆ ಕಾಳಜಿ ವಹಿಸಬೇಕು, ಮಕ್ಕಳು ಒತ್ತಡ ರಹಿತರಾಗಿ ಪರೀಕ್ಷೆಯನ್ನು ಎದುರಿಸಬೇಕು ಎಂದು ಅವರು ಕಿವಿ ಮಾತು ಹೇಳಿದರು.

ನಾಳೆಯ ಬಜೆಟ್‌ ಮಂಡನೆ ನನಗೂ ಪರೀಕ್ಷೆ ಇದ್ದಂತೆ ಎಂದು ಮೋದಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ಸಚಿನ್‌ ಹಾಗೂ ಚೆಸ್‌ ಆಟಗಾರ ವಿಶ್ವನಾಥನ್‌ ಆನಂದ್‌ ಮೋದಿಗೆ ಸಾಥ್‌ ನೀಡಿದರು.

Write A Comment