ಕರ್ನಾಟಕ

ತುಮಕೂರು: ಜನರಲ್ಲಿ ಆತಂಕ ಮೂಡಿಸಿದ ಚಿರತೆ

Pinterest LinkedIn Tumblr

leopard

ತುಮಕೂರು: ತುಮಕೂರಿನಲ್ಲಿ ಭಾನುವಾರ ಚಿರತೆಯೊಂದು ಕಾಣಿಸಿಕೊಂಡು ಆತಂಕ ಮೂಡಿಸಿದೆ.

ತುಮಕೂರಿನ ಹನುಮಂತನಗರದ ನಿವಾಸಿ ಗಂಗಣ್ಣ ಎಂಬುವವರ ಮನೆಯ ಕಾಂಪೌಂಡ್ ನಲ್ಲಿ ಕಾಣಿಸಿಕೊಂಡ ಚಿರತೆ ಜನರಲ್ಲಿ ಆತಂಕ ಮೂಡಿಸಿದ್ದು, ಮನೆಯಲ್ಲಿದ್ದ ನಾಯಿಯನ್ನು ತಿನ್ನಲು ಈ ಚಿರತೆ ಬಂದಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಹಾಡಹಗಲೇ ಚಿರತೆ ಕಾಂಪೌಂಡ್ ಹಾರಿದ್ದು, ತಕ್ಷಣ ಮನೆಯವರು ಗೇಟ್ ಲಾಕ್ ಮಾಡಿದ್ದಾರೆ. ಇದರಿಂದ ಭಯಗೊಂಡ ಚಿರತೆ ಮನೆಯ ಮಹಡಿ ಮೇಲೆ ಅಡಗಿ ಕೂತಿದೆ ಎಂದುಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪ್ರಸ್ತುತ ಅರಣ್ಯಾಧಿಕಾರಿಗಳು ದೌಡಾಯಿಸಿದ್ದು, ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದಾರೆ.

ಹನುಮಂತನಗರದ ಸಮೀಪವೇ ಅರಣ್ಯ ಪ್ರದೇಶವಿರುವುದರಿಂದ ಅಲ್ಲಿಂದಲೇ ಚಿರತೆ ಬಂದಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಚಿರತೆ ಹಾದು ಹೋಗಿರುವ ದಾರಿಯಲ್ಲೇ ದೇವಸ್ಥಾನವಿದ್ದು, ಅಲ್ಲಿ ಮಕ್ಕಳು ಆಟವಾಡುತ್ತಿದ್ದರು. ಒಂದು ವೇಳೆ ಅಲ್ಲಿಯೇ ಚಿರತೆ ಕಾಣಿಸಿಕೊಂಡಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು ಎಂಬ ಆತಂಕ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

Write A Comment