ಮನೋರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಕುಲ್

Pinterest LinkedIn Tumblr

Nakul Sruti Marraige

ಚೆನ್ನೈ: ತಮಿಳು ನಟ ನಕುಲ್‌ ಅವರು ಶ್ರುತಿ ಭಾಸ್ಕರ್‌ ಅವರೊಂದಿಗೆ ಭಾನುವಾರ ವಿವಾಹವಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದೊಂದು ಖಾಸಗಿ ಸಮಾರಂಭವಾಗಿದ್ದು, ಹತ್ತಿರ ಸಂಬಂಧಿಕರು ಹಾಗೂ ಅತ್ಮೀಯ ಗೆಳೆಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಆರತಕ್ಷತೆಯನ್ನು ಆಯೋಜಿಸಲಾಗುತ್ತಿದ್ದು, ಈ ಸಮಾರಂಭಕ್ಕೆ ಕಾಲಿವುಡ್ ನಲ್ಲಿನ ಎಲ್ಲರನ್ನೂ ಆಹ್ವಾನಿಸಲಾಗುತ್ತದೆ ಎಂದು ಹೇಳಿದ್ದಾರೆ.

5 ವರ್ಷಗಳಿಂದಲೂ ಶ್ರುತಿ ನನಗೆ ಪರಿಚಯ. ನನ್ನ ಎಲ್ಲಾ ಏಳು-ಬೀಳುಗಳಲ್ಲೂ ಜೊತೆ ಇದ್ದಳು. ಶ್ರುತಿಯನ್ನು ಪ್ರೀತಿ ಮಾಡಿದ ನಂತರ ನನ್ನ ಜೀವನವೇ ಬದಲಾಯಿತು. ಆಕೆಯ ಮುಂದೆ ನಾನು ನಾನಾಗಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ನಟ ನಕುಲ್‌ ಅವರನ್ನು ಮದುವೆಯಾಗಿರುವ ಶ್ರುತಿ ಭಾಸ್ಕರ್‌ ಚೆನ್ನೈನ ಎಸ್‌ಪಿಐ ಸಿನಿಮಾಸ್‌ನ ಮಾರುಕಟ್ಟೆ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ‘ಸ್ನೇಹಿತರೆ, ನಾನು ಮತ್ತು ಶ್ರುತಿ ಭಾಸ್ಕರ್‌ ಒಂದಾಗಿ ಜೀವನ ಸಾಗಿಸುವ ನಿಶ್ಚಯ ಮಾಡಿದ್ದೇವೆ. ನಮ್ಮಿಬ್ಬರಿಗೂ ನಿಮ್ಮೆಲ್ಲರ ಶುಭಾಶಯ ಮತ್ತು ಆಶೀರ್ವಾದ ಇರಲಿ’ ಎಂದು ನಕುಲ್‌ ಟ್ವೀಟ್‌ ಮಾಡಿದ್ದಾರೆ.

Write A Comment