ಕನ್ನಡ ವಾರ್ತೆಗಳು

ಮಾ.4: ರಾಷ್ಟ್ರೀಯ ಮತ್ಸ್ಯಮೇಳ – ಮಂಗಳೂರಿನಲ್ಲಿ “ರನ್ ಫಾರ್ ಫಿಶ್”.

Pinterest LinkedIn Tumblr

Run_for_fish_1

ಮ೦ಗಳೂರು ಫೆ.28: ಮೀನುಗಾರಿಕೆ ಮಹಾವಿದ್ಯಾಲಯ, ಮಂಗಳೂರು, ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯ, ಬೀದರ್, ಮತ್ತು ಮೀನುಗಾರಿಕೆ ಇಲಾಖೆ, ಕರ್ನಾಟಕ ಸರಕಾರ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತ್ಸ್ಯ ಮೇಳ 2016 ನ್ನು ಮಾ. 4ರಿಂದ ನಗರದ ಟಿ.ಎಂ.ಎ ಪೈ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರ ಪೂರ್ವಭಾವಿಯಾಗಿ ಉತ್ತಮ ಆರೋಗ್ಯಕ್ಕಾಗಿ ಮೀನು ಸೇವನೆಯ ಬಗ್ಗೆ ಸಾರ್ವಜನಿಕವಾಗಿ ಅರಿವು ಮೂಡಿಸಲು ಮೀನಿಗಾಗಿ ಓಟ ಎಂಬ ಘೋಷವಾಕ್ಯದೊಂದಿಗೆ ಭಾನುವಾರ ಮಂಗಳೂರಿನಲ್ಲಿ ಮ್ಯಾರಾಥಾನ್ ಓಟ (ರನ್ ಫಾರ್ ಫಿಶ್) ನಡೆಯಿತು.

Run_for_fish_2 Run_for_fish_3 Run_for_fish_4 Run_for_fish_5 Run_for_fish_6 Run_for_fish_7 Run_for_fish_9

ಕಾರ್ಪೋರೇಷನ್ ಬ್ಯಾಂಕ್ ಜನರಲ್ ಮ್ಯಾನೇಜರ್ ಲಕ್ಷ್ಮಿನಾಥ ರೆಡ್ಡಿ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿದರು.ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಕೆ.ಎಂ.ಶಂಕರ್ ಮತ್ತು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಮ್ಯಾನೇಜಿಂಗ್ ಡೈರೆಕ್ಟರ್ ವಿ.ಕೆ ಶೆಟ್ಟಿ ಯವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.ಮೀನುಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಈ ಓಟದಲ್ಲಿ ಭಾಗವಹಿಸಿದ್ದರು.

ಈ ಮ್ಯಾರಥಾನ್ ಓಟವು ಕಾರ್ಪೋರೇಷನ್ ಬ್ಯಾಂಕ್‌ನ ಮುಖ್ಯ ಕಛೇರಿ ಪಾಂಡೇಶ್ವರದಿಂದ ಹೊರಟು, ಜ್ಯೋತಿ – ಪಂಪ್‌ವೆಲ್ ಮೂಲಕ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಸಮಾಪನೆಗೊಂಡಿತು.

Write A Comment