ಮುಂಬೈ

ಮಹಿಳಾ ಪೊಲೀಸ್‌ ಮೇಲೆ ಮಾಜಿ ಶಿವಸೇನೆ ಕಾರ್ಯಕರ್ತನಿಂದ ಹಲ್ಲೆ, ದೃಶ್ಯ ಸಿಸಿಟಿವಿಯಲ್ಲಿ ಸೆರೆ..ಈ ವೀಡಿಯೋ ನೋಡಿ…

Pinterest LinkedIn Tumblr

https://youtu.be/l9XvwLgQniA

ಥಾಣೆ: ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುತ್ತಿದ್ದ ಮಾಜಿ ಶಿವಸೇನೆ ಕಾರ್ಯಕರ್ತನನ್ನ ತಡೆದ ಮಹಿಳಾ ಟ್ರಾಫಿಕ್‌ ಪೊಲೀಸ್‌ ಮೇಲೆ ಹಲ್ಲೆ ಮಾಡಿರುವ ಘಟನೆ ಥಾಣೆಯ ನಿತಿನ್ ಜಂಕ್ಷನ್ ನಲ್ಲಿ ನಡೆದಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಿತಿನ್‌ ಜಂಕ್ಷನ್‌ ಸಮೀಪ ಕಳೆದ ಗುರುವಾರ ಆರೋಪಿ ಶಶಿಕಾಂತ್‌ ಕಾಲ್ಗುಡೆ(44) ಮೊಬೈಲ್‌ನಲ್ಲಿ ಮಾತನಾಡುತ್ತಾ ತಮ್ಮ ಕಾರನ್ನು ಚಲಾಯಿಸಿದ್ದಾರೆ. ಈ ಸಂದರ್ಭ ಈಸ್ಟರ್ನ್ ಎಕ್ಸ್‌ಪ್ರೆಸ್‌ ಹೈವೇ ಫ್ಲೈ ಓವರ್ ಅಡಿಯಲ್ಲಿ ನಿಂತಿದ್ದ ಮಹಿಳಾ ಕಾನ್‌ಸ್ಟೆಬಲ್‌ ವಾಹನ ನಿಲ್ಲಿಸುವಂತೆ ಸೂಚಿಸಿದರು. ಕಾನ್ ಸ್ಟೆಬಲ್ ಸೂಚನೆಯನ್ನು ಕಡೆಗಣಿಸಿದ ಕಾಲ್ಗುಡೆ ತನ್ನ ಕಾರನ್ನು ವೇಗವಾಗಿ ಚಲಾಯಿಸಲು ಮುಂದಾಗಿದ್ದಾನೆ. ಆದರೆ ಮಹಿಳಾ ಪೊಲೀಸ್‌ ಎದುರು ಬಂದಿದ್ದರಿಂದ ಕಾಲ್ಗುಡೆ ತನ್ನ ಎಸ್‌ಯುವಿಯನ್ನು ನಿಲ್ಲಿಸಿದ್ದಾನೆ.

ಕಾಲ್ಗುಡೆ ಯನ್ನು ಕಾನ್‌ಸ್ಟೆಬಲ್‌ ಡ್ರೈವಿಂಗ್‌ ಲೈಸೆನ್ಸ್‌ ಮತ್ತು ಇತರ ದಾಖಲೆಗಳನ್ನು ಕೇಳಿದಾಗ ಆಕೆಗೆ ನಿಂದಿಸಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯವಾದಿ ಪ್ರತೀಕ್ ಪವಾರ್ ಆತನನ್ನು ತಡೆದು ನೌಪಾಡಾ ಪೊಲೀಸ್ ಠಾಣೆಗೆ ಕರೆತಂದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಪೊಲೀಸರು ಕಿರುಕುಳ ಮತ್ತು ಹಲ್ಲೆ ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.

Write A Comment