ಮನೋರಂಜನೆ

ಶಾರೂಖ್‌ -ಸಲ್ಮಾನ್‌ ನಡುವೆ ಮತ್ತೆ ಶುರುವಾಗಿದೆ ಶೀತಲ ಸಮರ!

Pinterest LinkedIn Tumblr

Shahrukh Khan & Salman Khan

ಬಾಲಿವುಡ್‌ನ ಕಿಂಗ್ ಖಾನ್‌ ಶಾರೂಖ್‌ ಮತ್ತು ಬ್ಯಾಡ್‌ ಬಾಯ್‌ ಸಲ್ಮಾನ್‌ ನಡುವೆ ಕೆಲ ದಿನಗಳ ಹಿಂದೆ ಗಾಢವಾದ ಸ್ನೇಹ ಆವರಿಸಿತ್ತು. ಇವರಿಬ್ಬರು ಆತ್ಮೀಯವಾಗಿ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಇವರ ಮಧ್ಯೆ ಶೀತಲಸಮರ ಶುರುವಾಗಿದೆ.

ಕೆಲ ಬಾಲಿವುಡ್‌ ಪಂಡಿತರು ಈ ತರಹದ ಮಾಹಿತಿಯನ್ನು ನೀಡಿದ್ದಾರೆ. ಇವರಿಬ್ಬರೂ ಜೊತೆಯಲ್ಲಿ ಕಾಣಿಸಿಕೊಂಡರು ಒಳಗಡೆ ಮುಸುಕಿನ ಗುದ್ದಾಟ ನಡೆಯುತ್ತಿರುತ್ತಂತೆ. ಇದಕ್ಕೆ ಪ್ರಮುಖ ಕಾರಣ ಇವರಿಬ್ಬರ ಸಿನಿಮಾಗಳು ಎನ್ನಲಾಗುತ್ತಿದೆ.

ಸಲ್ಮಾನ್‌ ಖಾನ್‌ ಅಭಿನಯದ ‘ಸುಲ್ತಾನ್‌‌’ ಮತ್ತು ಶಾರೂಖ್‌ ಅಭಿನಯದ ‘ರಾಯೀಸ್‌’ ಚಿತ್ರಗಳು ಈದ್‌ ಹಬ್ಬದಂದು ಬರುತ್ತಿರುವುದೇ ಇದಕ್ಕೆ ಮುಖ್ಯ ಕಾರಣವಂತೆ. ಈ ಸ್ಟಾರ್‌ ನಟರು ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಅದೇ ರೀತಿ ಇವರಿಬ್ಬರ ಚಿತ್ರಗಳು ಏಕಕಾಲದಲ್ಲಿ ಬಿಡುಗಡೆಯಾದರೆ ಬಾಕ್ಸ್‌ ಆಫೀಸ್‌ನಲ್ಲೂ ಪೈಪೋಟಿ ಎದುರಾಗುವುದಂತೂ ಖಂಡಿತ. ಸದ್ಯಕ್ಕೆ ಇವರಿಬ್ಬರು ತಮ್ಮ ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರೇಕ್ಷಕ ಮಹಾಶಯ ಈ ಇಬ್ಬರಲ್ಲಿ ಯಾರಿಗೆ ಮಣೆ ಹಾಕುತ್ತಾನೋ ಕಾದು ನೋಡಬೇಕಿದೆ.

Write A Comment