ಅಂತರಾಷ್ಟ್ರೀಯ

ಫೈಟಿಂಗ್ ವೇಳೆ WWE ಮಾಜಿ ಕುಸ್ತಿಪಟು ಗ್ರೇಟ್ ಖಲಿಗೆ ಗಂಭೀರ ಗಾಯ; ಈ ವೀಡಿಯೋ ನೋಡಿ

Pinterest LinkedIn Tumblr

ಕಾಂಟಿನೆಂಟಲ್ ರೆಸ್ಲಿಂಗ್ ಎಂಟರ್‌ಟೇನ್‌ಮೆಂಟ್ ಶೋ ವೇಳೆ ಡಬ್ಲ್ಯುಡಬ್ಲ್ಯುಇನ ಮಾಜಿ ಕುಸ್ತಿಪಟು ‘ದಿ ಗ್ರೇಟ್ ಖಲಿ’ ಖ್ಯಾತಿಯ ದಿಲೀಪ್ ಸಿಂಗ್ ರಾಣಾ, ತಲೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉತ್ತರಾಖಂಡ್‌ನ ಹಲ್‌ದ್ವಾನಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ವಿದೇಶಿ ರೆಸ್ಲರ್‌ಗಳಾದ ಮೈಕ್ ನಾಕ್ಸ್ ಹಾಗೂ ಬ್ರಾಡಿ ಸ್ಟೀಲ್ ಜತೆ ಸ್ಪದಿ೯ಸುವ ವೇಳೆ ಈ ಘಟನೆ ನಡೆದಿದೆ.

ತಲೆ ಅಲ್ಲದೆ ಎದೆಗೂ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಗಾಯ ಗಂಭೀರವಾಗಿದ್ದರಿಂದ ಹಲ್‌ದ್ವಾನಿಯಲ್ಲಿನ ಆಸ್ಪತ್ರೆಯಿಂದ ಡೆಹ್ರಾಡೂನ್ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ. 2007 ರಲ್ಲಿ ಚೊಚ್ಚಲ ಬಾರಿ ವರ್ಲ್ಡ್ ಹೆವಿವೇಟ್ ಚಾಂಪಿಯನ್ ಆದ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

Write A Comment