ರಾಷ್ಟ್ರೀಯ

ಜೆಎನ್ ಯು ವಿವಾದ ಚರ್ಚೆಯಲ್ಲಿ ದುರ್ಗಾಮಾತೆಯನ್ನು ಉಲ್ಲೇಖಿಸಿದ ವಿಷಯ; ಸ್ಮೃತಿ ಇರಾನಿ ಸದನದ ಕ್ಷಮೆಯಾಚಿಸಲಿ: ಪ್ರತಿಪಕ್ಷಗಳ ಪಟ್ಟು

Pinterest LinkedIn Tumblr

Smriti Irani and Rahul Gandhi

ನವದೆಹಲಿ: ರಾಜ್ಯಸಭೆಯಲ್ಲಿ ಶುಕ್ರವಾರ ಮತ್ತೆ ಜೆಎನ್ ಯು ವಿವಾದ ಪ್ರತಿಧ್ವನಿಸಿದೆ. ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ರೋಹಿತ್ ವೇಮುಲು ಆತ್ಮಹತ್ಯೆ ಪ್ರಕರಣಗಳನ್ನು ಸದನದಲ್ಲಿ ಚರ್ಚೆ ಮಾಡುತ್ತಿರುವ ಸಂದರ್ಭದಲ್ಲಿ ದುರ್ಗಾ ದೇವಿಗೆ ವಿವಾದವನ್ನು ಉಲ್ಲೇಖಿಸಿದ್ದಕ್ಕಾಗಿ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಕಲಾಪ ಮುಂದುವರಿಯಲು ಬಿಡುವುದಿಲ್ಲ ಎಂದು ವಿರೋಧ ಪಕ್ಷಗಳು ಎಚ್ಚರಿಕೆ ನೀಡಿವೆ.

ಜೆಎನ್ ಯು ವಿದ್ಯಾರ್ಥಿಗಳ ದೇಶದ್ರೋಹ ಆರೋಪ ಮತ್ತು ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣವನ್ನು ಪ್ರಸ್ತಾಪಿಸುವ ಮೂಲಕ ಪ್ರತಿಪಕ್ಷಗಳನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ. ಜೆಎನ್ ಯು ವಿದ್ಯಾರ್ಥಿಗಳ ವಿರುದ್ಧ ಮಾಡಿರುವ ಆರೋಪಗಳ ಸಮರ್ಥನೆ, ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಅಕ್ರಮವಾಗಿ ಹಂಚಿಕೆ ಮಾಡಲಾದ ಭಿತ್ತಿಪತ್ರಗಳನ್ನು ಶಿಕ್ಷಣ ಸಚಿವರು ಓದಿದ್ದು, ಅದನ್ನು ದುರ್ಗಾ ಮಾತೆಗೆ ಅವಮಾನ ಮಾಡುವ ರೀತಿಯಲ್ಲಿ ಉಲ್ಲೇಖಿಸಲಾಯಿತು. ಇದು ಜೆಎನ್ ಯು ವಿದ್ಯಾರ್ಥಿಗಳ ಒಂದು ವರ್ಗದವರ ನೀತಿಭ್ರಷ್ಠತೆಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಸಚಿವೆ ಇರಾನಿಯವರು ಸದನದಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಸಚಿವೆಯ ಆರೋಪಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಸದನದಲ್ಲಿ ಹೇಳಿಕೆ ನೀಡುವ ಸಾಧ್ಯತೆಯಿದೆ.

Write A Comment