ಅಂತರಾಷ್ಟ್ರೀಯ

ಚೀನಾದ ಪ್ರಬಲ ನೌಕಾಪಡೆಯನ್ನೇ ನಡುಗಿಸುತ್ತಿರುವ ಭಾರತದ “ಬ್ರಹ್ಮಾಸ್ತ್ರ”; ಭಾರತದ ಬತ್ತಳಿಕೆಯಲ್ಲಿದೆ “ಪೊಸೈಡನ್ 8ಐ” ಎಂಬ ವಿನಾಶಕಾರಿ ಕಣ್ಗಾವಲು ವಿಮಾನ

Pinterest LinkedIn Tumblr

ನವದೆಹಲಿ: ದಕ್ಷಿಣ ಹಿಂದೂ ಮಹಾಸಾಗರದ ಮೇಲೆ ಹಿಡಿತ ಸಾಧಿಸಬೇಕು ಎನ್ನುವ ಚೀನಾದ ಕನಸು ಇನ್ನು ಮುಂದೆ ನನಸಾಗಿಯೇ ಉಳಿಯಲಿದ್ದು, ಚೀನಾದ ಪ್ರಬಲ ನೌಕಾಪಡೆಯನ್ನು ಎದುರಿಸಲು ಭಾರತಕ್ಕೆ ಪ್ರಬಲ ಅಸ್ತ್ರವೊಂದು ದೊರೆತಿದೆ.

ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿರುವ ಚೀನಾ ಅಲ್ಲಿ ತನ್ನ ಪ್ರಬಲ ಮತ್ತು ಅತ್ಯಾಧುನಿಕ ಯುದ್ಧ ನೌಕೆಗಳನ್ನು ನಿಯೋಜಿಸುವ ಮೂಲಕ ದಕ್ಷಿಣ ಏಷ್ಯಾ ರಾಷ್ಟ್ರಗಳನ್ನು ಪ್ರಮುಖವಾಗಿ ಭಾರತವನ್ನು ಬೆದರಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಚೀನಾದ ಈ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಲು ಇದೀಗ ಭಾರತ ಸಜ್ಜಾಗಿ ನಿಂತಿದ್ದು, ಚೀನಾ ಪ್ರಬಲ ನೌಕಾಪಡೆಯನ್ನೇ ನಡುಗಿಸುವ ಬ್ರಹ್ಮಾಸ್ತ್ರವೊಂದನ್ನು ಭಾರತ ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ. ಆ ಬ್ರಹ್ಮಾಸ್ತ್ರದ ಹೆಸರೇ ಪೊಸೈಡನ್ 8ಐ.

ಮೂಲತಃ ಅಮೆರಿಕ ನೌಕಾಪಡೆಯ ಪ್ರಬಲ ಅಸ್ತ್ರವಾಗಿರುವ ಪೊಸೈಡನ್ 8ಐ ಇದೀಗ ಭಾರತದ ಬತ್ತಳಿಕೆಯನ್ನು ಸೇರಿದೆ. ಅಮೆರಿಕ ಸೇನೆ ಈ ಪೊಸೈಡನ್ 8ಐ ಕಣ್ಗಾವಲು ಯುದ್ಧ ವಿಮಾನವನ್ನು ಸಮುದ್ರದ ದೇವತೆ, ದಿ ಸಬ್ ಮೆರಿನ್ ಹಂಟರ್, ದಿ ಸಬ್ ಮೆರಿನ್ ಕಿಲ್ಲರ್ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ವಿಮಾನದಲ್ಲಿರುವ ಅತ್ಯಾಧುನಿಕ ತಾಂತ್ರಿಕತೆ ಮತ್ತು ಎಂತಹುದೇ ಪ್ರಬಲ ಸಬ್ ಮೆರಿನ್ ಗಳನ್ನು ಕ್ಷಣಾರ್ಧಲ್ಲಿ ಧ್ವಂಸ ಮಾಡಬಲ್ಲ ಸಾಮರ್ಥ್ಯ ಈ ಪೊಸೈಡನ್ 8ಐ ವಿಮಾನಕ್ಕಿದೆ.

ಈ ವಿಮಾನದ ವಿಶೇಷತೆ ಎಂದರೆ ವಿಮಾನದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ರಾಡಾರ್ ವ್ಯವಸ್ಥೆ ಶತ್ರುರಾಷ್ಟ್ರದ ಯಾವುದೇ ಸಬ್ ಮೆರಿನ್ ಗಳು ನಮ್ಮ ಗಡಿ ಪ್ರವೇಶ ಮಾಡುತ್ತಿದ್ದಂತೆಯೇ ವಿಮಾನದಲ್ಲಿರುವ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸುತ್ತದೆ. ಆ ಮೂಲಕ ಆ ರಹಸ್ಯ ಸಬ್ ಮೆರಿನ್ ಮೇಲೆ ಕಣ್ಣಿಟ್ಟು ಅಪಾಯಕಾರಿ ಹಂತ ದಾಟುತ್ತಿದ್ದಂತೆಯೇ ತನ್ನಲ್ಲಿರುವ ಶಸ್ತ್ರಗಳನ್ನು ಉಪಯೋಗಿಸಿ ಕ್ಷಣ ಮಾತ್ರದಲ್ಲಿ ಆ ಸಬ್ ಮೆರಿನ್ ಅನ್ನು ಸಮುದ್ರದಲ್ಲಿಯೇ ಉಡಾಯಿಸಿಬಿಡುತ್ತದೆ. ಈ ವಿಮಾನವು ಬಹುಪಯೋಗಿ ವಿಮಾನವಾಗಿದ್ದು, ಒಂದೆಡೆ ಕಣ್ಗಾವಲು ವಿಮಾನವಾಗಿ ಕಾರ್ಯನಿರ್ವಹಿಸಿದರೆ, ಇದರಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮುಖಾಂತರ ಇದು ಅಗತ್ಯ ಬಿದ್ದರೆ ಯುದ್ಧ ವಿಮಾನವಾಗಿಯೂ ಮಾರ್ಪಾಟಾಗುತ್ತದೆ.

ವಿಮಾನಕ್ಕೆ ಒಂದು ಇಂಧನ ತುಂಬಿಸಿದರೆ ಬರೊಬ್ಬರಿ 2 ಸಾವಿರ ಕಿ.ಮೀ ವರೆಗೂ ಹಾರಾಟ ನಡೆಸಬಲ್ಲದಾಗಿದೆ. ಇನ್ನು ಪ್ರತೀ ಗಂಟೆಗೆ 907 ಕಿ.ಮೀ ವೇಗದಲ್ಲಿ ಚಲಿಸುವ ಈ ವಿಮಾನ ಶತ್ರುರಾಷ್ಟ್ರದ ಸಬ್ ಮೆರಿನ್ ಗಳ ಮೇಲೆ ಕಣ್ಣಿಡಲು ನೆರವಾಗುತ್ತದೆ. ಶತ್ರುರಾಷ್ಟ್ರದ ಯುದ್ಧ ನೌಕೆಗಳು ಅಥವಾ ಸಬ್ ಮೆರಿನ್ ಗಡಿ ಪ್ರವೇಶಿಸುತ್ತಿವೆ ಎಂದು ಕಮಾಂಡ್ ಸೆಂಟರ್ ಗೆ ತಿಳಿಯುತ್ತಿದ್ದಂತೆಯೇ ಈ ವಿಮಾನ ಎಚ್ಚೆತ್ತುಕೊಳ್ಳುತ್ತದೆ. ಅಲ್ಲದೆ ಶತ್ರುರಾಷ್ಟ್ರದ ಸಬ್ ಮೆರಿನ್ ಗಳು ಮತ್ತು ಯುದ್ಧನೌಕೆಗಳು ಅಪಾಯಕಾರಿಯಾಗುತ್ತಿವೆ ಎಂದೆನಿಸಿದರೆ ಕೂಡಲೇ ಅವುಗಳನ್ನು ಸರ್ವನಾಶ ಮಾಡುತ್ತದೆ.

ಆಕಾಶದಿಂದ ಆಕಾಶ, ಆಕಾಶದಿಂದ ಭೂಮಿ ಮತ್ತು ಆಕಾಶದಿಂದ ಸಮುದ್ರಕ್ಕೆ ದಾಳಿ ಮಾಡುವ ಸಾಮರ್ಥ್ಯವಿರುವ ಈ ವಿಮಾನ, ಶತ್ರುಪಾಳಯದ ಎಂತಹುದೇ ಕ್ಷಿಪಣಿಗಳನ್ನು ರಾಕೆಟ್ ಗಳನ್ನು ಗಾಳಿಯಲ್ಲೇ ಧ್ವಂಸ ಮಾಡುವ ಮೂಲಕ ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳುತ್ತದೆ. ತನ್ನತ್ತ ಬರುವ ಮಿಸೈಲ್ ಗಳನ್ನು ಗುರಿಮುಟ್ಟುವ ಮೊದಲೇ ಹೊಡೆದುರುಳಿಸುತ್ತದೆ. ಅಲ್ಲದೆ ಚಂಡಮಾರುತವಿದ್ದಾಗಲೂ ಈ ವಿಮಾನ ಸರಾಗವಾಗಿ ಹಾರಬಲ್ಲ ಸಾಮರ್ಥ ಹೊಂದಿದೆ. ಇದೇ ಕಾರಣಕ್ಕೆ ಅಮೆರಿಕದ ನೌಕಾಪಡೆಯಲ್ಲಿ ಈ ಪೊಸೈಡನ್ 8ಐಗೆ ವಿಶೇಷ ಸ್ಥಾನವಿದೆ ಮತ್ತು ಅಮೆರಿಕ ನೌಕಾಪಡೆಯ ದೊಡ್ಡ ಶಕ್ತಿ ಕೂಡ ಇದಾಗಿದೆ.

ಅಮೆರಿಕ ಹೊರತು ಪಡಿಸಿದರೆ ಭಾರತ ಬಳಿ ಮಾತ್ರ ಇದೆ ಪೊಸಡಿನ್ ಐ8
ವಿಶ್ವದ ಬಲಿಷ್ಠ ಸೇನೆ ಹೊಂದಿರುವ ಅಮೆರಿಕ ಸೇನೆಯನ್ನು ಹೊರತು ಪಡಿಸಿದರೆ ಇಂತಹ ವಿನಾಶಕಾರಿ ಕಣ್ಗಾವಲು ಯುದ್ಧ ವಿಮಾನವನ್ನು ಹೊಂದಿರುವ ರಾಷ್ಟ್ರವೆಂದರೆ ಅದು ಭಾರತ ಮಾತ್ರ. 2008ರಲ್ಲಿ ಈ ಯುದ್ಧ ವಿಮಾನದ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆ ಪ್ರಕಾರ 2009ರಲ್ಲಿ 2 ಬಿಲಿಯನ್ ಡಾಲರ್ ಒಪ್ಪಂದದಲ್ಲಿ ಈ ಪೊಸೈಡನ್ 8ಐ ಕಣ್ಗಾವಲು ವಿಮಾನ ಖರೀದಿಗೆ ಭಾರತ ಅನುಮೋದನೆ ನೀಡಿತ್ತು. ಅದರಂತೆ ಒಟ್ಟು 8 ವಿಮಾನಗಳ ಖರೀದಿಗೆ ಭಾರತ ಮುಂದಾಗಿತ್ತು. ಪ್ರಸ್ತುತ 6 ವಿಮಾನಗಳು ಈಗಾಗಲೇ ಭಾರತದ ಬತ್ತಳಿಕೆ ಸೇರಿದ್ದು, ಇನ್ನೂ 2 ವಿಮಾನಗಳು ಇನ್ನಷ್ಟೇ ಬರಬೇಕಿದೆ.

ಚೀನಾಗೆ ನಡುಕ ಹುಟ್ಟಿಸುತ್ತಿರುವ ಪೊಸೈಡನ್ 8ಐ
ಹಿಂದೂ ಮಹಾಸಾಗರ ಕೇವಲ ಸಮುದ್ರವಲ್ಲ. ಅಂತೆಯೇ ಕೇವಲ ಜಲಮಾರ್ಗವೂ ಅಲ್ಲ. ವಿಶ್ವದ ಅತಿ ದೊಡ್ಡ ವ್ಯಾಪಾರ ಕೇಂದ್ರಕ್ಕೆ ಇದು ರಹದಾರಿ. ಇದೇ ಕಾರಣಕ್ಕೆ ಚೀನಾ ಇಲ್ಲಿ ಪ್ರಾಬಲ್ಯ ಹೊಂದಲು ಹವಣಿಸುತ್ತಿದೆ. ಇಲ್ಲಿ ಸಾರ್ವಭೌಮ ಪ್ರತಿಷ್ಠಾಪಿಸುವ ದೇಶಕ್ಕೆ ಬರಪೂರ ವಹಿವಾಟು ಕಟ್ಟಿಟ್ಟಬುತ್ತಿ. ಇದೇ ಕಾರಣಕ್ಕೆ ಚೀನಾ ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿದೆ. ಅಂತೆಯೇ ಭಾರತ ಕೂಡ ತನ್ನ ಗಡಿ ಭಾಗವನ್ನು ಮತ್ತೊಂದು ರಾಷ್ಟ್ರ ಕಬಳಿಸುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ.

ಆದರೆ ಈ ಹಿಂದೆ ಚೀನಾದ ಬಲಿಷ್ಠ ಡ್ರ್ಯಾಗನ್ ಸೇನೆಯನ್ನು ಎದುರು ಹಾಕಿಕೊಳ್ಳುವ ಸಾಮರ್ಥ್ಯ ಭಾರತದ ಬಳಿ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದ್ದು, ಭಾರತದ ಬಳಿಯೂ ಇದೀಗ ಪ್ರಬಲ ಸೇನೆ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರದಿಂದಾಗಿ ಈ ವಿವಾದಿತ ಪ್ರದೇಶದಲ್ಲಿ ಭಾರತ ಸೇನೆ ನಿಯೋಜನೆಗೆ ಮುಂದಾಗುವ ಮೂಲಕ ದೇಶದ ಗಡಿ ರಕ್ಷಣೆಗೆ ದಿಟ್ಟ ನಿರ್ಧಾರ ಕೈಗೊಂಡಿದೆ.

ಅಂಡಮಾನ್ ನಿಕೋಬಾರ್ ನಲ್ಲಿ ಪ್ರಸ್ತುತ ಭಾರತದ ಮೂರೂ ಸೇನೆಗಳು ನೆಲಯೂರಿವೆ. ವಾಯುಸೇನೆ, ಭೂಸೇನೆ ಮತ್ತು ನೌಕಾಸೇನೆಗಳನ್ನು ಇಲ್ಲಿ ನಿಯೋಜಿಸಲಾಗಿದ್ದು, ಈ ಮೂರೂ ಸೇನೆಗಳು ಒಂದಂಕ್ಕೊಂದು ಬೆಂಬಲವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಈ ಭಾಗದಲ್ಲಿ ಸುಮಾರು 3 ಸಾವಿರ ಸೈನಿಕರು ಕಾರ್ಯನಿರತರಾಗಿದ್ದಾರೆ. ಇದೇ ರೀತಿ ದೇಶಾದ್ಯಂತ ನಮ್ಮ ಸೇನೆ ಕಾರ್ಯ ನಿರ್ವಹಿಸಬೇಕು ಎನ್ನುವುದು ಕೇಂದ್ರ ಸರ್ಕಾರದ ಬಯಕೆ ಕೂಡ ಆಗಿದೆ. ಇದಕ್ಕಾಗಿ ಸೇನೆಯಲ್ಲಿ ಸಾಕಷ್ಟು ಬದಲಾವಣೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸೇನೆಯಲ್ಲಿ ಪರಿಚಯಿಸಲಾಗುತ್ತಿದೆ.

ಅದರ ಒಂದು ಭಾಗವೇ ಪೊಸೈಡನ್ 8ಐ. ಇದರ ಶಕ್ತಿ ಚೀನಾಗೆ ತಿಳಿದಿದೆ. ಈ ಒಂದು ವಿಮಾನ ಹತ್ತು ನೌಕಾ ಹಡುಗುಗಳಿಗೆ ಸಮ. ಅತ್ಯಂತ ವೇಗವಾಗಿ ಚಲಿಸುವುದರಿಂದ ಇದನ್ನು ಹೊಡೆದುರುಳಿಸುವುದು ಕಷ್ಟಸಾಧ್ಯ. ಇದರ ಅತ್ಯಂತ ನಿಖರವಾಗಿದ್ದು, ಯಾವುದೇ ಕಾರಣಕ್ಕೂ ಇದರ ಟಾರ್ಗೆಟ್ ಮಿಸ್ ಆಗಲು ಸಾಧ್ಯವೇ ಇಲ್ಲ. ನಿಖರ ಗುರಿಯನ್ನು ಕ್ಷಣಾರ್ಧದಲ್ಲಿ ತಲುಪುತ್ತದೆ. ಚೀನಾದ ಅತ್ಯಾಧುನಿಕ ವಿಮಾನಗಳಿಗಿಂತ ಇದರ ಶಕ್ತಿ ಹೆಚ್ಚು. ಜಲಾಂತರ್ಗಾಮಿಗಳನ್ನು ಹೊಡೆದುರುಳಿಸುವ ತಂತ್ರಜ್ಞಾನ ಎಲ್ಲ ದೇಶಗಳ ಬಳಿ ಇಲ್ಲ. ಮುಂದುವರೆದ ಸೂಪರ್ ಪವರ್ ರಾಷ್ಟ್ರಗಳಲ್ಲಿ ಮಾತ್ರ ಇದ್ದು, ಈ ವಿಮಾನವನ್ನು ಇದೀಗ ಭಾರತ ಕೂಡ ಖರೀದಿಸಿದೆ. ಅಷ್ಟೇ ಅಲ್ಲದೆ ಹಿಂದೂ ಮಹಾಸಾಗರದಲ್ಲಿ ನಿಯೋಜಿಸಿದೆ.

ಭಾರತದ ನಿರ್ಧಾರಕ್ಕೆ ಬೆಚ್ಚಿ ಬಿದ್ದ ಚೀನಾ
ಪ್ರಸ್ತುತ ಭಾರತ ಖರೀದಿ ಮಾಡಿರುವ ಪೊಸೈಡನ್ 8ಐ ಕಣ್ಗಾವಲು ಯುದ್ಧ ವಿಮಾನದ ಶಕ್ತಿ ಮತ್ತು ಸಾಮರ್ಥ್ಯದ ಪರಿಚಯ ಚೀನಾ ಸೇನೆಗೆ ಇದೆ. ಹೀಗಾಗಿ ಭಾರತ ಸರ್ಕಾರದ ನಿಲುವನ್ನು ಚೀನಾ ಪ್ರಶ್ನಿಸಿದೆ. ನಮ್ಮ ದೇಶದ ಅವಿಭಾಜ್ಯ ಅಂಗವಾಗಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಭಾರತ ಸೇನೆಯನ್ನು ನಿಯೋಜಿಸುವ ಮೂಲಕ ನೇರವಾಗಿ ತನ್ನನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಚೀನಾ ಆರೋಪಿಸಿದೆ.

ಈ ಹಿಂದೆ ತನ್ನ ಬಲಾಢ್ಯ ಸೇನೆ ಮುಂದಿಟ್ಟುಕೊಂಡು ಭಾರತವನ್ನು ಹೆದರಿಸುತ್ತಿದ್ದ ಚೀನಾ ತನ್ನ ಕಠಿಣ ನಿರ್ಧಾರಗಳಿಂದ ಭಾರತೀಯ ಸೇನೆಯನ್ನು ಚಿಂತೆಗೀಡುಮಾಡಿತ್ತು. ಆದರೆ ಈಗ ಕಾಲ ಬದಲಾಗಿದ್ದು, ಭಾರತ ಸರ್ಕಾರದ ನಿರ್ಧಾರಗಳು ಈದೀಗ ಚೀನಾವನ್ನು ನಿದ್ದೆಗೆಡುವಂತೆಮಾಡಿದೆ. ಭಾರತದ ಸೇನಾಶಕ್ತಿ ಚೀನಾಕ್ಕೆ ಸವಾಲೆಸೆಯುತ್ತಿದೆ.

ಇದೇ ಕಾರಣಕ್ಕೆ ಚೀನಾ ಭಾರತದ ವಿರುದ್ದ ಅಂತಾರಾಷ್ಟ್ರೀಯ ಸಮುದಾಯದ ಮೊರೆ ಹೋಗಿದ್ದು, ಭಾರತದ ನಿರ್ಧಾರಗಳಿಂದಾಗಿ ಹಿಂದೂ ಮಹಾಸಾಗರದಲ್ಲಿ ಶಾಂತಿಕದಡುವ ಅಪಾಯವಿದೆ. ಹಿಂದೂ ಮಹಾಸಾಗರದಲ್ಲಿ ಯುದ್ಧ ಸನ್ನಿವೇಶ ಉಂಟಾಗಲು ಭಾರತ ಪ್ರಚೋದಿಸುತ್ತಿದೆ ಎಂದು ಆರೋಪಿಸುತ್ತಿದೆ. ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಭಾರತ, ಅಮೆರಿಕ ಮತ್ತು ಜಪಾನ್ ದೇಶಗಳು ಹಿಂದೂ ಮಹಾಸಾಗರದಲ್ಲಿ ಜಂಟಿ ಸಮಾರಾಭ್ಯಾಸ ಮಾಡಿದ್ದವು. ಇದು ಕೂಡ ಚೀನಾದ ಕೆಂಗಣ್ಣಿಗೆ ಗುರಿಯಾಗಿತ್ತು.

ಚೀನಾದ ಪ್ರಬಲ ವೈರಿಗಳಾದ ಅಮೆರಿಕ ಮತ್ತು ಜಪಾನ್ ದೇಶಗಳು ಭಾರತದೊಂದಿಗೆ ಸೇರಿ ಯುದ್ಧಾಭ್ಯಾಸ ಮಾಡಿದ್ದವು. ಇಲ್ಲಿ ಜಗತ್ತಿನ ಶಕ್ತಿಶಾಲಿ ಯುದ್ಧ ವಿಮಾನಗಳು ನೌಕೆಗಳು, ಅತ್ಯಾಧುನಿಕ ಜಲಾಂತರ್ಗಾಮಿಗಳು ಭಾಗಿಯಾಗಿದ್ದವು. ಆ ಮೂಲಕ ಪರೋಕ್ಷವಾಗಿ ಅಮೆರಿಕ ಮತ್ತು ಜಪಾನ್ ದೇಶಗಳು ಭಾರತದೊಂದಿಗೆ ನಾವಿದ್ದೇವೆ ಎಂದು ಸಂದೇಶ ಸಾರಿದ್ದವು.

ಇದೀಗ ಪೊಸೈಡನ್ 8ಐ ಕಣ್ಗಾವಲು ಯುದ್ಧ ವಿಮಾನವನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಭಾರತ ಮತ್ತೆ ಚೀನಾಕ್ಕೆ ಮತ್ತೆ ಟಾಂಗ್ ನೀಡಿದೆ. ಹಿಂದೂ ಮಹಾಸಾಗರದಲ್ಲಿ ಇದೀಗ ಮತ್ತೆ ಭಾರತವೇ ಸಾರ್ವಬೌಮ ಎಂಬುದನ್ನು ಸಾಬೀತು ಮಾಡಿದೆ. ಅತ್ಯಂತ ಶಕ್ತಿ ಶಾಲಿ ಸಬ್ ಮೆರಿನ್ ಗಳನ್ನು ಹೊಂದಿದ್ದ ಚೀನಾ ಈಗ ಕೈಕೈ ಹಿಚುಕಿಕೊಳ್ಳುವಂತಾಗಿದೆ.

Write A Comment