ಸೇಲಂ: ಸಮವಸ್ತ್ರಕ್ಕೆ ಅಗೌರವ ಸೂಚಿಸಿ ಜೈಲಿನಲ್ಲಿ ಡ್ಯಾನ್ಸ್ ಮಾಡಿದ ಉಪ ಜೈಲರ್ ಒಬ್ಬರನ್ನು ಅಧಇಕಾರಿಗಳು ಮಂಗಳವಾರ ಅಮಾನತು ಮಾಡಿದ್ದಾರೆ.
ಶಂಕರನ್ (58) ಉಪ ಜೈಲರ್ ಅಮಾನತು ಗೊಂಡವರಾಗಿದ್ದು, ಜನವರಿ 26 ರ ಗಣರಾಜ್ಯೋತ್ಸವ ದಿನದಂದು ಇನ್ನಿತರೆ ಪೊಲೀಸ್ ಸಿಬ್ಬಂದಿಗಳಿದ್ದ ಕೊಠಡಿಯೊಂದರಲ್ಲಿ ಸಮವಸ್ತ್ರಕ್ಕೆ ಗೌರವ ನೀಡದೆ ಪ್ರಜ್ಞೆಇಲ್ಲದೆ ಪೂರ್ವ ಸಿದ್ಧತೆ ಇಲ್ಲದ ನೃತ್ಯವೊಂದನ್ನು ಮಾಡಿದ್ದಾರೆ. ಈ ನೃತ್ಯವನ್ನು ಸ್ಥಳದಲ್ಲಿದ್ದವರಲ್ಲಿದ್ದ ಒಬ್ಬರು ತಮ್ಮ ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಣವನ್ನು ಮಾಡಿದ್ದಾರೆ. ಅಲ್ಲದೆ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಡ್ಯಾನ್ಸ್ ಮಾಡಿದ ಉಪ ಜೈಲರ್ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗುತ್ತಿವೆ.
ಪ್ರಕರಣ ಸಂಬಂಧ ಕೇಂದ್ರ ಕಾರಾಗೃಹ ಅಧೀಕ್ಷಕ ಶನ್ಮುಗಂಸುದರಂ ಅವರು ತನಿಖೆ ಆದೇಶಿಸಿದ್ದರು. ತನಿಖೆ ವೇಳೆ ಉಪ ಜೈಲರ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿತ್ತು. ಶಂಕರನ್ ಈ ಹಿಂದೆ ಜೈಲಿನಲ್ಲಿರು ಖೈದಿಗಳನ್ನು ಬಲವಂತವಾಗಿ ತನ್ನ ತಲೆಯ ಕೂದಲನ್ನು ಕತ್ತರಿಸಿ ಮಸಾಜ್ ಮಾಡುವಂತೆ ಹೇಳುತ್ತಿದ್ದನು. ಹೀಗಾಗಿ ಕೊಯಂಬತ್ತೂರಿಗೆ ಆತ ವರ್ಗಾವಣೆಯಾಗಿದ್ದ ಎಂದು ಹೇಳಲಾಗಿತ್ತು. ಹೀಗಾಗಿ ಶಂಕರನ್ ವಿರುದ್ಧ ಕ್ರಮ ಕೈಗೊಂಡಿರುವ ಇಲಾಖೆಯು ಇದೀಗ ಆತನನ್ನು ಅಮಾನತು ಮಾಡಿದೆ.