https://www.youtube.com/watch?v=HOcbzsxi9qM
ವರದಿ- ಯೋಗೀಶ್ ಕುಂಭಾಸಿ
ಉಡುಪಿ: ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿಯೂ ಈಗ ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಹವಾ ಜೋರಾಗಿದೆ. ಖಡಕ್ ಮಾತು, ನೇರ ನುಡಿ ಹಾಗೂ ನಡವಳಿಕೆಯಿಂದಲೇ ರಾಜ್ಯದಲ್ಲಿ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಹುಚ್ಚಾ ವೆಂಕಟ್ ಬಿಗ್ ಬಾಸ್ ರಿಯಾಲಿಟಿ ಶೋಗೆ ಬಂದ ಬಳಿಕ ಇನ್ನಷ್ಟು ಫೇಮಸ್ ಆಗಿದ್ರು. ಅವರ ‘ನನ್ನ ಮಗಂದ್’ ಎನ್ನೋ ಡೈಲಾಗ್ ಕೇಳಿದ್ರೇ ಅವರ ಅಭಿಮಾನಿಗಳಿಗೆ ಎನೋ ಒಂಥರಾ ಥ್ರಿಲ್. ಸದ್ಯ ಆ ಡೈಲಾಗ್ ಸ್ಪರ್ಷ ಯಕ್ಷಗಾನಕ್ಕೂ ತಟ್ಟಿದೆ.


ಹೌದು..ಪ್ರಸಿದ್ದ ಯಕ್ಷಗಾನ ಮೇಳಗಳಲ್ಲೊಂದಾದ ಪೆರ್ಡೂರು ಮೇಳದ ಯಕ್ಷಗಾನದ ಸಂದರ್ಭ ಖ್ಯಾತ ಹಾಸ್ಯ ಕಲಾವಿದ ರವೀಂದ್ರ ದೇವಾಡಿಗ ಅವರ ಹಾಸ್ಯ ನಡೆಯುತ್ತಿತ್ತು. ಇದೇ ವೇಳೆ ರವೀಂದ್ರ ದೇವಾಡಿಗರು ಸಹ ಹಾಸ್ಯ ಕಲಾವಿದರ ಬಳಿ ಮಾತನಾಡುತ್ತಾ, ‘ನನ್ನ ಮಗಂದ್’ ಎನ್ನುವ ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಒಮ್ಮೆ ‘ನನ್ನ ಮಗಂದ್’ ಎಂದ ಕೂಡಲೇ ನೆರೆದ ಅಭಿಮಾನಿಗಳು ಸಿಳ್ಳೆ ಚಪ್ಪಾಳೆ ಹೊಡೆದರು. ಡೈಲಾಗ್ ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆಯೆಂದು ತಿಳಿದದ್ದೇ ಹುಚ್ಚಾ ವೆಂಕಟ್ ಮಾದರಿಯಲ್ಲಿಯೇ ಹಾವಭಾವಗಳನ್ನು ಮಾಡುತ್ತಾ ಮತ್ತೆ ಮೂರ್ನಾಲ್ಕು ಬಾರಿ ಡೈಲಾಗ್ ರಿಪೀಟ್ ಮಾಡಿದ್ರು. ಇನ್ನು ಸನ್ನಿವೇಶಕ್ಕೆ ತಕ್ಕ ಹಾಗೇ ಹುಚ್ಚಾ ವೆಂಕಟ್ ಮಾದರಿಯಲ್ಲಿಯೇ ಕೇಶ ವಿನ್ಯಾಸ ಮಾಡಿಕೊಂಡಿದ್ರು.
ಸುಮಾರು ಒಂದು ನಿಮಿಷವಿರುವ ಈ ಸನ್ನಿವೇಶ ನೆರೆದ ಪ್ರೇಕ್ಷಕರಿಗೆ ಭರಫೂರ್ ಮನೋರಂಜೆ ನೀಡಿತ್ತು. ಸನ್ನಿವೇಶದ ಕೊನೆಯಲ್ಲಿ ದೇವಾಡಿಗರು ತೆರಳುತ್ತಿದ್ದಂತೆಯೇ ಸಹಕಲಾವಿದ ಮಾತು ಮುಂದುವರೆಸಿ ‘ನಾನು ಬರೇ ವೆಂಕ ಇವನು ಹುಚ್ಚಾ….’ ಎಂದು ರಾಗವೆಳೆದಾಗ ಪ್ರೇಕ್ಷಕರು ಇನ್ನಷ್ಟು ಸಿಳ್ಳೆ-ಚಪ್ಪಾಳ್ಖೆ ಹೊಡೆದ್ರು.
ಒಟ್ಟಿನಲ್ಲಿ ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಹಾವಭಾವ ಹಾಗೂ ಮತಿನ ಝಲಕ್ ಯಕ್ಷಗಾನದಲ್ಲಿಯೂ ಪ್ರಖ್ಯಾತಿ ಪಡೆಯುತ್ತಿದೆ. ಅಂದು ಯಕ್ಷಗಾನ ಪ್ರೇಕ್ಷಕರೋರ್ವರು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿಯೂ ಅಪ್-ಲೋಡ್ ಮಾಡಿದ್ದು ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ.
ವೀಡಿಯೋ ವೀಕ್ಷಿಸಿ ನಕ್ಕು ಬಿಡಿ: