ಅಂತರಾಷ್ಟ್ರೀಯ

ಈ 3 ವರ್ಷದ ಪುಟ್ಟ ಹುಡುಗಿಯೊಬ್ಬಳ ಬುದ್ಧಿಶಕ್ತಿ ನೋಡಿ…ಇಲ್ಲಿದೆ ವೀಡಿಯೋ…

Pinterest LinkedIn Tumblr

brielle-child

ವಾಷಿಂಗ್ಟನ್: ನಮಗೆ ಕೆಲವೊಂದು ಸಲ ನಮ್ಮ ಮೊಬೈಲ್ ಸಂಖ್ಯೆಯೇ ನೆನಪಿಗೆ ಬರುವುದಿಲ್ಲ. ಹೀಗಿರುವಾಗ ಚಿಕ್ಕಂದಿನಲ್ಲಿ ಕಲಿತ ಫಾರ್ಮುಲಾವನ್ನೋ ಪದ್ಯವನ್ನೋ ಹೇಳಿ ಎಂದು ಯರಾದರೂ ಕೇಳಿದರೆ ತಬ್ಬಿಬ್ಬಾಗಿ ಬಿಡುತ್ತೇವೆ. ಆದರೆ 3 ವರ್ಷದ ಪುಟ್ಟ ಹುಡುಗಿಯೊಬ್ಬಳು ಆವರ್ತಕ ಕೋಷ್ಟಕದಲ್ಲಿರುವ(ಪಿರಿಯಾಡಿಕ್ ಟೇಬಲ್) ಎಲ್ಲಾ ಮೂಲವಸ್ತುಗಳನ್ನು ಗುರುತು ಹಿಡಿದು ಪಟ ಪಟನೆ ಹೇಳುತ್ತಾಳೆ.

3 ವರ್ಷದ ಪೋರಿ ಬ್ರೈಲಿ ಇನ್ನೂ ಒದುವುದು ಬರೆಯುವುದನ್ನು ಕಲಿತಿಲ್ಲ. ಆದರೂ ಆವರ್ತಕ ಕೋಷ್ಠಕದಲ್ಲಿರುವ ಪೊಟ್ಯಾಶಿಯಂ, ಹೀಲಿಯಂ, ಸೋಡಿಯಂ ಸೇರಿದಂತೆ ಎಲ್ಲಾ 103 ವಸ್ತುಗಳನ್ನು ಕಂಡುಹಿಡಿದು ಅದರ ವಿಶೆಷತೆಗಳನ್ನೂ ಹೇಳುತ್ತಾಳೆ.

ಅಲ್ಲದೆ ಬ್ರೈಲಿ ತನ್ನ ನಾಯಿಗೆ ನಿಕ್ಕಿ ಎಂದು ಹೆಸರಿಟ್ಟಿದ್ದಾಳಂತೆ. ನಿಕ್ಕಿ ಎಂಬುದು ಕಾಪರ್ನಿಸಿಯಂ ಎಂಬ ಎಲಿಮೆಂಟಿನ ಮತ್ತೊಂದು ಹೆಸರು. ದಿ ಎಲ್ಲೆನ್ ಶೋ ಎಂಬ ಟಿವಿ ಕಾರ್ಯಕ್ರಮದಲ್ಲಿ ಬ್ರೈಲಿ ತನ್ನ ವಿಶೇಷ ಸಾಮಥ್ರ್ಯವನ್ನು ಪ್ರದರ್ಶಿಸಿ ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸಿದಳು. ಇಷ್ಟೇ ಅಲ್ಲದೇ ಈಕೆಗೆ ಆಫ್ರಿಕಾ, ಯುರೋಪ್, ಅಮೆರಿಕ ಖಂಡದಲ್ಲಿರುವ ಎಲ್ಲ ದೇಶಗಳ ಹೆಸರು ಮತ್ತು ಅವುಗಳ ರಾಜಧಾನಿಗಳನ್ನೂ ಸಹ ಪಟಪಟನೆ ಹೇಳುತ್ತಾಳೆ.

Write A Comment