ಮನೋರಂಜನೆ

ವಿಶ್ವ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮಹಾಭಾರತದ ಧೃತರಾಷ್ಟ್ರನಿಗೆ ಚಿನ್ನದ ಪದಕ

Pinterest LinkedIn Tumblr

anoopsingh_0551

ಮಹಾಭಾರತ ಧಾರಾವಾಹಿಯ ಧೃತರಾಷ್ಟ್ರ ಪಾತ್ರಧಾರಿ ಈಗ ಇಡೀ ವಿಶ್ವದ ಗಮನ ಸೆಳಿದಿದದ್ದಾರೆ. 100 ಮಕ್ಕಳ ತಂದೆಯಾಗಿ ಅಲ್ಲ, ವಿಶ್ವ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಠಾಕೂರ್ ಅನೂಪ್ ಸಿಂಗ್ ಚಿನ್ನದ ಪದಕ ಗಳಿಸಿದ್ದಾರೆ.

ಬ್ಯಾಂಕಾಕ್ ನಲ್ಲಿ ನಡೆದ ವಿಶ್ವ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿ ಸ್ವರ್ಣ ಪದಕವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಪೈಲಟ್ ಆಗಿದ್ದ ಠಾಕೂರ್ ಅನೂಪ್ ಸಿಂಗ್ ಮಹಾಭಾರತ ಧಾರಾವಾಹಿಯಲ್ಲಿ ಧೃತರಾಷ್ಟ್ರನ ಪಾತ್ರದಲ್ಲಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದ್ದರು.

ನಂತರ 2008 ರಲ್ಲಿ ಉಂಟಾದ ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಏರ್ ಲೈನ್ಸ್ ಮೇಲೂ ಉಂಟಾಯಿತು. ಹೀಗಾಗಿ ಅನಿವಾರ್ಯವಾಗಿ ಠಾಕೂರ್ ಅನೂಪ್ ಸಿಂಗ್ ಬಾಡಿ ಬಿಲ್ಡಿಂಗ್ ಗೆ ಮಾಡೆಲ್ ಆದರು.

ಆರು ಅಡಿ ಎತ್ತರವಿರುವ ಠಾಕೂರ್ ಅನೂಪ್ ಸಿಂಗ್ ತನ್ನ ಚೆಂದದ ಮೈ ಕಟ್ಟಿನಿಂದ ಎಲ್ಲರ ಮನಸೆಳೆದಿದ್ದಾರೆ. ಕಳೆದ ವಾರ ಬ್ಯಾಂಕಾಕ್ ನಲ್ಲಿ ನಡೆದ ವಿಶ್ವ ದೇಹದಾರ್ಢ್ಯ ಸ್ಪರ್ಧೆಯಲ್ಲಿ 47 ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು.

Write A Comment