ಅಂತರಾಷ್ಟ್ರೀಯ

ಕೋಳಿಗಳಿಗೂ ಬಂತು ಸ್ವೆಟ್ಟರ್! ಈ ವೀಡಿಯೋ ನೋಡಿ…

Pinterest LinkedIn Tumblr

chicken swtter

ಲಂಡನ್: ಮನೆಯಲ್ಲಿ ಸಾಕುವ ನಾಯಿ ಬೆಕ್ಕುಗಳಿಗೆ ಮಕ್ಕಳಂತೆ ಪೋಷಣೆ ಮಾಡುವುದರಿಂದ ಸ್ವೆಟ್ಟರ್‍ಗಳು ತೊಡಿಸುವುದು ಮಾಮೂಲಿ. ಆದರೆ ಯಾವತ್ತದರೂ ಕೋಳಿಗಳಿಗೆ ಸ್ವೆಟ್ಟರ್ ತೊಡಿಸಿರುವುದನ್ನು ನೋಡಿದ್ದೀರಾ.

ಹೌದು. ಇಂಗ್ಲೆಂಡ್‍ನಲ್ಲಿ ಈಗ ಕೋಳಿಗಳಿಗೂ ಸ್ವೆಟ್ಟರ್ ಬಂದಿದೆ. ಅವುಗಳು ಈಗ ಎಲ್ಲರಂತೆ ಸ್ವೆಟ್ಟರ್ ತೊಟ್ಟು ಚಳಿಯಿಂದ ರಕ್ಷಣೆ ಪಡೆಯುತ್ತಿವೆ. ಇಲ್ಲಿನ ನಿವಾಸಿಗಳಾದ ನಿಕೋಲ್ ಹಾಗೂ ಆಕೆಯ ತಾಯಿ ಬೀದಿಯಲ್ಲಿ ರಕ್ಷಣೆ ಮಾಡಿ ತಂದಂತಹ ಕೋಳಿಗಳಿಗೆ ಸ್ವೆಟ್ಟರ್ ಹೊಲಿದು ಅವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ.

ಈ ಕೋಳಿಗಳ ರಕ್ಷಣೆಗೂ ಮೊದಲು ಪಂಜರದಲ್ಲೇ ಇದ್ದು ಅಭ್ಯಾಸವಂತೆ. ಹೀಗಾಗಿ ಈ ಕೋಳಿಗಳು ಚಳಿ, ಗಾಳಿ, ಮಳೆಯಂತಹ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಂತೆ. ಅದಕ್ಕಾಗಿ ಇವುಗಳಿಗೆ ನಿಕೋಲ್ ಹಾಗೂ ಆಕೆಯ ತಾಯಿ ಅನಾ ಸ್ವೆಟ್ಟರ್ ಹೊಲಿದಿದ್ದಾರಂತೆ.

Write A Comment