ಕರ್ನಾಟಕ

ಬಿಗ್‍ಬಾಸ್ ಮನೆಯಲ್ಲಿರುವ ಪೂಜಾ ಗಾಂಧಿ ಬಗ್ಗೆ ಮಿಮಿಕ್ರಿ ಮಾಡಿ ಸುದೀಪ್ ರನ್ನು ನಗಿಸಿದ ರವಿ ಮುರೂರ್

Pinterest LinkedIn Tumblr

ravi

ಬೆಂಗಳೂರು: ಗಾಯನದಲ್ಲಿ ಅಪಾರ ಪ್ರತಿಭೆಯುಳ್ಳ ರವಿ ಮುರೂರ್ ತಾವು ಕಾಮಿಡಿ ಕಿಂಗ್ ಕೂಡ ಹೌದು ಎಂಬುದನ್ನು ಬಿಗ್‍ಬಾಸ್ ಮನೆಯಲ್ಲಿ ಸಾಬೀತು ಪಡಿಸಿದ್ದಾರೆ.

ಕಾಣದ ಕಡಲಿಗೆ ಹಂಬಲಿಸಿದೆ ಮನ ಎಂದು ಹಾಡುತ್ತಲೇ ಮನೆಗೆ ಕಾಲಿಟ್ಟ ರವಿ ಮನೆಯಲ್ಲಿ ಇದ್ದಷ್ಟು ದಿನವೂ ಹೊರಗೆ ಬಂದುಬಿಡಬೇಕು ಎಂದು ಚಡಪಡಿಸುತ್ತಿದ್ದರು. ಕೆಲವರ ಕಣ್ಣಿಗೆ ಅವರು ಮೋಸಗಾರ, ನರಿ, ಮತ್ತು ಕಪಟನಂತೆ ಕಂಡರೂ ಇನ್ನೂ ಕೆಲವರಿಗೆ ಪ್ರೀತಿಯ ರವಿ ಮಾಮ ಆಗಿದ್ದರು. ಟಾಸ್ಕ್ ವೇಳೆ ಪೂಜಾಗಾಂಧಿಯನ್ನು ಅನುಕರಿಸಿ ನಕ್ಕು ನಲಿಸಿದ್ದರು ರವಿ.

ಅವರ ಡಾನ್ಸ್ ಟಾಸ್ಕ್‍ನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಬೇರೆಯವರಂತೆ ಕುಣಿಯಲು ಬರದಿದ್ದರೂ ಹುಚ್ಚ ವೆಂಕಟ್‍ರಿಂದ ಹಿಡಿದು ಸಲ್ಮಾನ್ ಖಾನ್‍ರ ವರವರೆಗೆ ನಟರನ್ನು ಅನುಕರಣೆ ಮಾಡಿ ಎಲ್ಲರಿಗೂ ಮನೋರಂಜನೆ ನೀಡಿದ್ದರು. ಹಾಗೆ ಕೊನೆಯ ದಿನ ಸುದೀಪ್‍ರ ಒತ್ತಾಯಕ್ಕೆ ಐಯ್ಯಪ್ಪರಂತೆ ಮತನಾಡಿ ತಾವು ಅತ್ಯುತ್ತಮ ಮಿಮಿಕ್ರಿ ಕಿಂಗ್ ಎಂದು ತೋರಿಸಿಕೊಟ್ಟರು.

ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಬಹುತೇಕ ಸ್ಪರ್ಧಿಗಳಿಗೆ ಚಿತ್ರರಂಗದಲ್ಲಿ ಅವಕಾಶಗಳು ದೊರಕಿರುವ ಉದಾಹರಣೆಗಳಿವೆ. ಅದರಂತೆ ರವಿ ಮುರೂರ್ ಕೂಡ ಗಾಯನದ ಜೊತೆಗೆ ಮುಂದಿನ ದಿನಗಳಲ್ಲಿ ಹಾಸ್ಯ ನಟನಾಗಿ ಮಿಂಚಲಿದ್ದಾರಾ ಎಂದು ಕಾದು ನೋಡಬೆಕು.

Write A Comment