ಅಂತರಾಷ್ಟ್ರೀಯ

ಈ ವೀಡಿಯೋ ನೋಡಿ..ನೀರು ಒಮ್ಮೆಲೇ ಮೇಲೆ ಬಂದಾಗ ಜನ ಹೇಗೆ ದಿಕ್ಕುಪಲಾಗುತ್ತಾರೆಂದು…

Pinterest LinkedIn Tumblr

china

ಬೀಜಿಂಗ್: ಡ್ಯಾಂನಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾದ ನದಿಯ ದೈತ್ಯ ಅಲೆಗೆ ಹೆದರಿ ಪ್ರವಾಸಿಗರು ದಿಕ್ಕಪಾಲಾಗಿ ಪ್ರಾಣಭಯದಿಂದ ಓಡಿ ಹೋದ ಘಟನೆ ಚೀನಾದಲ್ಲಿ ನಡೆದಿದೆ.

ಅಕ್ಟೋಬರ್ 28 ರಂದು ಪ್ರಸಿದ್ಧ ಪ್ರವಾಸಿ ತಾಣವಾದ ಹಾಂಗ್‍ಜೌ ನಗರದ ಮೈನ್ ಅಣೆಕಟ್ಟಿನ ದಂಡೆಯಲ್ಲಿ ಕಿಯಾನ್‍ಟಾಂಗ್ ನದಿಯ ಸೌಂದರ್ಯವನ್ನು ಸವಿಯುತ್ತ ಪ್ರವಾಸಿಗಳು ನಿಂತಿದ್ದರು.

ನದಿಯ ನಯನಮನೋಹರ ದೃಶ್ಯವನ್ನು ನೋಡುತ್ತಿದ್ದಂತೆ, ನಿಧಾನವಾಗಿ ಮೇಲೆ ಏಳುತ್ತಿದ್ದ ಅಲೆ ಒಮ್ಮಿದೊಮ್ಮೆ ದಂಡೆಯ ಮೇಲೆ ಬಂದಿದೆ. ದೊಡ್ಡದಾದ ಅಲೆ ಉಕ್ಕುತ್ತಿರುವುದನ್ನು ಆಶ್ಚರ್ಯದಿಂದ ನೋಡುತ್ತಲೇ ನಿಂತಿದ್ದವರು, ಕೂಡಲೇ ಅಲೆ ತಮ್ಮತ್ತ ನುಗ್ಗಿ ಬಂದಾಗ ಜೀವವನ್ನು ಉಳಿಸಿಕೊಳ್ಳಲು ಗಾಬರಿಯಿಂದ ಓಡಿದ್ದಾರೆ. ಈ ಘಟನೆಯಲ್ಲಿ 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸಿಸಿಟಿವಿಯಲ್ಲಿ ದೈತ್ಯ ಅಲೆಯ ದೃಶ್ಯ ಸೆರೆಯಾಗಿದೆ.

ಕಳೆದ 413 ದಿನಗಳಿಂದ ಚಂದ್ರ ಭೂಮಿಯ ಅತ್ಯಂತ ಸಮೀಪದಲ್ಲಿದ್ದ ದೈತ್ಯ ಅಲೆ ಮೂಡಲು ಕಾರಣವಾಗಿದೆ ಎಂದು ತಿಳಿದುಬಂದಿದೆ. ಭೂಮಿ ಮತ್ತು ಚಂದ್ರನ ನಡುವೆ ಗುರುತ್ವಾಕರ್ಷಣೆ ಹೆಚ್ಚಾದಂತೆಲ್ಲಾ ಅಲೆಯ ಏರಿಳಿತ ಹೆಚ್ಚಾಗುತ್ತಿರುತ್ತದೆ.

Write A Comment