ಕನ್ನಡ ವಾರ್ತೆಗಳು

ಪತ್ನಿಗೆ ಕೈ ತಗುಲಿತೆಂದು ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಕಾರ್ಕಳ ಎಸ್‌ಐ; ಖಾಕಿ ದರ್ಪಕ್ಕೆ ಸಾರ್ವಜನಿಕರ ಆಕ್ರೋಷ

Pinterest LinkedIn Tumblr

ಉಡುಪಿ: ಕಾರ್ಕಳ ಪೊಲೀಸ್ ಠಾಣೆ ಪಿ.ಎಸ್.ಐ. ಸಾಹೇಬರ ಪತ್ನಿಗೆ ಅಚಾನಕ್ ಆಗಿ ಯುವಕನೋರ್ವನ ಕೈ ತಗುಲಿದ್ದೇ ನೆಪವಾಗಿಸಿಕೊಂಡ ಎಸ್ಸೈ ಅವರು ಯುವಕನಿಗೆ ಹಿಗ್ಗಾಮುಗ್ಗ ಥಳಿಸಿ ದೌರ್ಜನ್ಯ ನಡೆಸಿದ ಅಮಾನುಷ ಘಟನೆ ಕಾರ್ಕಳದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಕಾರ್ಕಳ ನಗರ ಠಾಣೆ ಎಸ್‌ಐ ಇಮ್ರಾನ್ ಎಂಬವರೇ ಯುವಕನೋರ್ವನ ಮೇಲೆ ದೌರ್ಜನ್ಯ ನಡೆಸಿದವರು. ಕುಕ್ಕುಂದೂರು ಗ್ರಾಮದ ಜಯಂತಿನಗರ ನಿವಾಸಿ ರಾಘವೇಂದ್ರ ಮೊಯ್ಲಿ (28) ದೌರ್ಜನ್ಯ ಕ್ಕೊಳಗಾದ ಯುವಕ.

Karkala_PSI_asault (2)

Karkala_PSI_asault (1)

ರಾಘವೇಂದ್ರ ಮೊಯ್ಲಿ ಅವರು ಮಂಗಳವಾರ ರಾತ್ರಿ ನಗರದ ಸಾಲ್ಮರದ ದಿನಸಿ ಅಂಗಡಿಯೊಂದರಲ್ಲಿ ಸಾಮಾಗ್ರಿ ಖರೀದಿಸುತ್ತಿದ್ದ ಸಂದರ್ಭದಲ್ಲಿ ನಗರ ಠಾಣಾ ಎಸ್‌ಐ ತನ್ನ ಪತ್ನಿಯೊಂದಿಗೆ ಅದೇ ಅಂಗಡಿಯಲ್ಲಿ ಸಾಮಾಗ್ರಿ ಖರೀದಿಸಲು ಬಂದಿದ್ದರೆನ್ನಲಾಗಿದೆ. ಸಾಮಾಗ್ರಿ ಖರೀಧಿಸಿದ ಬಳಿಕ ರಾಘವೇಂದ್ರಅವರು ಅಂಗಡಿಯಾತನಿಗೆ ಹಣ ನೀಡಿ ಹೊರಡುವ ವೇಳೆ ಸಮೀಪ ನಿಂತಿದ್ದ ಎಸ್‌ಐ ಪತ್ನಿಗೆ ಆಕಸ್ಮಾತ್‌ ಕೈ ತಗುಲಿದೆ ಎನ್ನಲಾಗಿದೆ. ಇಷ್ಟಕ್ಕೆ ಸಿಟ್ಟುಗೊಂಡ ಎಸ್.ಐ. ತನ್ನ ಉಘ್ರರೂಪ ತೋರಿಸಿದ್ದಾರೆನ್ನಲಾಗಿದೆ.

ಕೆಂಡಾಮಂಡಲರಾದ ಎಸ್.ಐ.ಯಿಂದ ಥಳಿತ:
ಅಚಾನಕ್ ಆಗಿ ತನ್ನ ಪತ್ನಿಯ ಕೈಗೆ ರಾಘವೇಂದ್ರನ ಕೈ ತಗುಲಿದ್ದೇ ಕೆಂಡಾಮಂಡಲಾರದ ಎಸ್‌ಐ ಅವರು ರಾಘವೇಂದ್ರರನ್ನು ಹಿಡಿದುಕೊಂಡು ಮನಸೋಇಚ್ಚೇ ಕೆನ್ನೆಗೆ ಹೊಡೆಯಲಾರಂಭಿಸಿದ್ದು ಅಂಗಡಿ ಮಾಲಕರು ಹಾಗೂ ಸಮೀಪದಲ್ಲಿದ್ದವರು ಹೊಡೆಯದಂತೆ ಕೋರಿಕೊಂಡರೂ ಕ್ಯಾರೇ ಅನ್ನದ ಎಸ್.ಐ. ಬಳಿಕ ಠಾಣೆಗೆ ಕರೆದು ಕೊಂಡು ಹೋಗಿದ್ದಲ್ಲದೇ ಗಂಟೆಗಳ ಕಾಲ ಲಾಠಿಯಲ್ಲಿ ಮನಬಂದಂತೆ ಹೊಡೆದು ಬಳಿಕ ಹೊರಗೆ ಕಳುಹಿಸಿದ್ದಾರೆ ಎಂದು ರಾಘವೇಂದ್ರ ಆರೋಪಿಸಿದ್ದಾರೆ. ಹೊಡೆತದಿಂದ ರಾಘವೇಂದ್ರ ಅವರ ಬಲಗೈಯ ಹೆಬ್ಬೆರಳಿಗೆ ಪೆಟ್ಟು ಬಿದ್ದಿದ್ದು, ಗುದಕ್ಕೆ ಬಿದ್ದ ಪೆಟ್ಟಿನಿಂದಾಗಿ ಸೊಂಟ ಮತ್ತು ಗುದದ ಭಾಗದ ರಕ್ತ ಹೆಪ್ಪು ಗಟ್ಟಿದೆ. ಗಂಭೀರವಾಗಿ ಥಳಿತಕ್ಕೊಳಗಾದ ರಾಘವೆಂದ್ರ ಬುಧವಾರ ಬೆಳಗ್ಗೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಡ ಕುಟುಂಬ ಕಂಗಾಲು:
ಖಾಸಗಿ ಹಣ ಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ರಾಘವೇಂದ್ರ ಅವರ ತಂದೆ ನಿಧನರಾದ ಬಳಿಕ ಮನೆಗೆ ಆಧಾರಸ್ತಂಭವಾಗಿ ತನ್ನ ತಾಯಿಯೊಂದಿಗೆ ವಾಸವಿದ್ದಾರೆ. ಮಗನ ಮೇಲೆ ನಡೆದ ಪೊಲೀಸ್ ಹಲ್ಲೆಯನ್ನು ಕಂಡು ತಾಯಿ ಆತಂಕಕ್ಕೀಡಾಗಿದ್ದಾರೆ. ದೇಹದಲ್ಲಿ ಒಳಪೆಟ್ಟು ಆದ ಕಾರಣ ಹಲವು ದಿನಗಳ ಕಾಲ ಕೆಲಸ ಮಾಡಲು ಅಸಾದ್ಯ ಎನ್ನಲಾಗುತ್ತಿದೆ.

ದೇವಾಡಿಗ ಸಂಘ ಖಂಡನೆ
ಸಮಾಜದ ಯುವಕ ರಾಘವೇಂದ್ರ ಅವರ ಮೇಲೆ ಪೊಲೀಸರು ನಡೆಸಿರುವ ಅಮಾನುಷ ಕೃತ್ಯವನ್ನು ದೇವಾಡಿಗ ಸಂಘದ ತಾಲೂಕು ಅಧ್ಯಕ್ಷ ರವಿಶಂಕರ್ ಶೇರಿಗಾರ್ ತೀವ್ರವಾಗಿ ಖಂಡಿಸಿದ್ದಾರೆ. ತಕ್ಷಣವೇ ಸಮಾಜದ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಸಿದ್ದು ಇದಕ್ಕೆ ಸ್ಪಂಧಿಸಿದ ಎಸ್ಪಿ ಅವರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಕುಂದಾಪುರದಲ್ಲಿ ಟ್ರಾಫಿಕ್ ಎಸ್ಸೈ ಆಗಿದ್ದ ಇಮ್ರಾನ್ ಅವರು ಇತ್ತೀಚೆಗಷ್ಟೇ ಕಾರ್ಕಳ ಠಾಣೆಗೆ ವರ್ಗಾವಣೆಯಾಗಿದ್ದರು. ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಮಾರಣಾಂತಿಕವಾಗಿ ಅಮಾನುಷವಾಗಿ ಹಲ್ಲೆ ನಡೆಸಿದ ಎಸ್ಸೈ ವಿರುದ್ಧ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದು ಎಸ್ಸೈ ಅವರನ್ನು ಅಮಾನತು ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.

1 Comment

  1. Hiriadka Mohandas

    It’s pathetic. Devadiga Sangha Karkala took up the prompt protest action with the competent Authority. I condemn the arrogant attitude of the Police Personnel and he need to be booked for appropriate legal action . In the meantime, Mr., Raghavendra Moily needs immediate medical attention. Well Done, Mr. Ravi Shankar Sherigar.

Write A Comment