ಅಂತರಾಷ್ಟ್ರೀಯ

ಫೋರ್ಬ್ಸ್ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ ಮೋದಿ

Pinterest LinkedIn Tumblr

modi22

ನ್ಯೂಯಾರ್ಕ್: ಫೋರ್ಬ್ಸ್ ನಿಯತಕಾಲಿಕೆಯ ಈ ವರ್ಷದ 100 ಮಂದಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ 9 ನೇ ಸ್ಥಾನಕ್ಕೇರಿದ್ದಾರೆ. 120 ಕೋಟಿ ಜನರ ಪ್ರಧಾನಿಯಾಗಿರುವ ಮೋದಿ ಬಿಜೆಪಿ ಹಾಗೂ ಸರ್ಕಾರವನ್ನು ಹತೋಟಿಯಲ್ಲಿಟ್ಟುಕೊಂಡಿದ್ದು ಪ್ರಭಾವಿ ಎನಿಸಿಕೊಂಡಿದ್ದಾರೆ ಎಂದು ಫೋರ್ಬ್ಸ್ ಮ್ಯಾಗಜೀನ್ ತಿಳಿಸಿದೆ.

ಕಳೆದ ವರ್ಷ ಈ ಪಟ್ಟಿಯಲ್ಲಿ ಮೋದಿಗೆ 14 ನೇ ಸ್ಥಾನ ನೀಡಲಾಗಿತ್ತು. ಮೊದಲ ಸ್ಥಾನದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್, ನಂತರದ ಸ್ಥಾನಗಳಲ್ಲಿ ಜರ್ಮನಿ ಛಾನ್ಸೆಲರ್ ಎಂಜೆಲಾ ಮಾರ್ಕೆಲ್, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಪೋಪ್ ಫ್ರಾನ್ಸಿಸ್, ಚೀನಾ ಅಧ್ಯಕ್ಷ ಜಿನ್‍ಪಿಂಗ್ ಇದ್ದಾರೆ.

ಭಾರತೀಯ ಮೂಲದ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ 55ನೇ ಸ್ಥಾನದಲ್ಲಿದ್ದರೆ, ಮೈಕ್ರೋಸಾಫ್ಟ್ ಸಿಇಓ ಸತ್ಯಾ ನಾದೆಲ್ಲಾ 61 ನೇ ಸ್ಥಾನದಲ್ಲಿದ್ದಾರೆ.

Write A Comment