ಬೀಜಿಂಗ್: ಅಲ್ಕೋಹಾಲ್, ವೈನ್‍ಗಳಿಗೆ ಏನೇನೋ ವಸ್ತುಗಳನ್ನು, ಹಣ್ಣುಗಳನ್ನು ಹಾಕಿ ಕುಡಿಯುವುದನ್ನು ನೋಡಿದ್ದೀರಿ. ಆದರೆ ಚೀನಾದಲ್ಲಿ ಜೀವಂತ ಹಾವುಗಳನ್ನು ಹಾಕಿದ ವೈನ್ ಸೇವಿಸುತ್ತಾರೆ.
ಹೌದು, ಚೀನಾ ತನ್ನ ವಿಚಿತ್ರ ವಿಚಿತ್ರ ಘಟನೆಗಳಿಂದ ಪ್ರಸಿದ್ಧಿ ಹೊಂದಿದೆ. ಆದರೆ ಚೀನಾದಲ್ಲಿ ಈಗ ಹಾವನ್ನು ಹಾಕಿದ ವೈನ್ ಟ್ರೆಂಡಿಂಗ್ ಆಗುತ್ತಿದೆ. ವೈನ್ ಇರುವ ದೊಡ್ಡ ಪಾತ್ರೆಗೆ ಜೀವಂತ ಹಾವನ್ನು ಹಾಕುತ್ತಾರೆ. ಜೀವಂತ ಹಾವು ಸಂಪೂರ್ಣವಾಗಿ ಪಾತ್ರೆಯ ಒಳಗಡೆ ಹೋದ ಬಳಿಕ ಅದನ್ನು ಮುಚ್ಚುತ್ತಾರೆ. ಮುಚ್ಚಿದ ಕಲವೇ ಕ್ಷಣದಲ್ಲಿ ಜೀವಂತ ಹಾವು ಪಾತ್ರೆಯಲ್ಲೇ ಸಾವನ್ನಪ್ಪುತ್ತದೆ. ನಂತರ ಪಾತ್ರೆಯಿಂದ ಹಾವನ್ನು ತೆಗೆದು ವೈನ್‍ನ್ನು ಕುಡಿಯುತ್ತಾರೆ.
ಹಾವನ್ನು ಹಾಕಿದ ಈ ವೈನ್ ಉಳಿದ ವೈನ್‍ಗಿಂತಲೂ ಹೆಚ್ಚು ಉತ್ತಮವಾಗಿದ್ದು, ಇದರಿಂದ ಆರೋಗ್ಯ ವೃದ್ಧಿಯಾಗುತ್ತಂತೆ. ಅದರಲ್ಲೂ ಬೆನ್ನು ನೋವು, ಸೊಂಟನೋವು ಸೇರಿದಂತೆ ಇನ್ನಿತರ ರೋಗಗಳು ಶೀಘ್ರವಾಗಿ ಕಡಿಮೆ ಆಗುತ್ತದೆ ಎನ್ನುವ ನಂಬಿಕೆಯಿದ್ದು, ಜನ ಈ ವೈನ್ ಸವಿಯಲು ಜನ ತುಂಬಾನೇ ಇಷ್ಟಪಡುತ್ತಾರಂತೆ. ಹೀಗಾಗಿ ಈ ಸ್ನೇಕ್ ವೈನ್‍ಗೆ ಚೀನಾದಲ್ಲಿ ಭಾರೀ ಬೇಡಿಕೆ ಹೆಚ್ಚಾಗಿದೆಯಂತೆ. ಸದ್ಯ ಈ ರೀತಿಯ ವಿಡಿಯೋವೊಂದು ಯೂಟ್ಯೂಬ್ ಲ್ಲಿ ಹರಿದಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗಿದೆ.
https://youtu.be/XepfwPzdT_A