ಕರಾವಳಿ

ಕುಂದಾಪುರ | ಹೆಮ್ಮಾಡಿ ಸಮೀಪದ ರಾ.ಹೆದ್ದಾರಿ ಕನ್ನಡಕುದ್ರು ಕ್ರಾಸ್ ಬಳಿ ಕಾರು ಢಿಕ್ಕಿಯಾಗಿ ಬೈಕ್ ಸವಾರ ಸಾವು

Pinterest LinkedIn Tumblr

ಕುಂದಾಪುರ: ಬೈಕಿಗೆ ಹಿಂದಿನಿಂದ ಕಾರು ಢಿಕ್ಕಿಯಾಗಿ, ಬೈಕ್ ಸವಾರ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ ರಾ.ಹೆ. 66 ರ ಹೆಮ್ಮಾಡಿ ಸಮೀಪದ ಕನ್ನಡಕುದ್ರು ಕ್ರಾಸ್ ಬಳಿ ಸಂಭವಿಸಿದೆ.

ಹೆಮ್ಮಾಡಿ ಸಂತೋಷನಗರ ನಿವಾಸಿ ನರಸಿಂಹ ಆಚಾರ್ (60) ಮೃತಪಟ್ಟವರು. ಇವರು ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ‌ ವೇಗವಾಗಿ ಹಾಗೂ ಅಜಾಗರೂಕತೆಯಿಂದ ದೀಪಕ್ ಕುಮಾರ್ ಕಾರು ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿರುವುದಾಗಿದೆ. ಪರಿಣಾಮ ಬೈಕ್ ಸಹಿತ ರಸ್ತೆಗೆ ಗಂಭೀರ ಗಾಯಗೊಂಡ ನರಸಿಂಹ ಆಚಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಷ್ಟರೊಳಗೆ ಸಾವನ್ನಪ್ಪಿರುವುದಾಗಿದೆ.

ಸಂಚಾರ ಠಾಣಾ ಪಿಎಸ್ಐ ಅನೂಪ್‌ ನಾಯಕ್ ಹಾಗೂ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ,‌ ಪರಿಶೀಲನೆ ನಡೆಸಿದರು‌.

 

ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.