ಕುಂದಾಪುರ: ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಗುದ್ದಿದ ಪರಿಣಾಮ ಹಿಂಬದಿ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಶಿಮಠ ಕ್ರಾಸ್ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.

ಮಂಗಳೂರಿನಿಂದ ಅಡುಗೆ ಎಣ್ಣೆ ಪ್ಯಾಕೇಟ್ ತುಂಬಿದ್ದ ಬಾಕ್ಸ್‌ಗಳನ್ನು ಬೀದರ್‌ಗೆ ಸಾಗಿಸುತ್ತಿದ್ದ ಲಾರಿಯ ಚಾಲಕ ಮಹರಾಷ್ಟ್ರ ಮೂಲದ ಲಕ್ಷ್ಮಣ ಮುರಳೀಧರ್ ವಾಗ್ಮೋಡೆ (54)ಎನ್ನುವರು ಅಪಘಾತದಿಂದ ಗಂಭೀರ ಗಾಯಗೊಂಡಿದ್ದು ಸ್ಥಿತಿ ಚಿಂತಾಜನಕವಾಗಿದೆ. ಲಾರಿ ಕ್ಲೀನರ್ ದಯಾನಂದ್ ಎನ್ನುವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಘಟನೆ ವಿವರ: ಹೆಮ್ಮಾಡಿ ಸಮೀಪದ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿಯ ಸೇತುವೆ ಕಾಮಗಾರಿ ಸಲುವಾಗಿ ಬ್ಯಾರಿಕೇಡ್ ಮೂಲಕ ರಸ್ತೆ ತಡೆ ನಿರ್ಮಿಸಿ ರಸ್ತೆಯ ಬಲಕ್ಕೆ ಡೈವರ್ಶನ್ ನೀಡಿದ್ದು ಎದುರಿದ್ದ ಲಾರಿ ನಿಧಾನವಾಗಿದ್ದರಿಂದ ಹಿಂದಿದ್ದ ಲಾರಿ ಚಾಲಕ ಲಕ್ಷ್ಮಣ ಎಂಬಾತ ಅತೀವೇಗ ಹಾಗೂ ಅಜಾಗರುಕತೆಯಿಂದ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಿಂದ ಚಾಲಕ ಲಕ್ಷ್ಮಣ ತಲೆಗೆ ಗಂಭೀರ, ದೇಹದ ಇತರೆ ಭಾಗಗಳಿಗೂ ರಕ್ತಗಾಯ ಅಗಿದೆ. ಅಲ್ಲದೆ ಲಾರಿಯಲ್ಲಿದ್ದ ದಯಾನಂದ ಕೈ ಕಾಲು ಹಾಗೂ ದೇಹದ ಇತರೆ ಭಾಗಗಳಿಗೆ ಗಾಯಗಳಾಗಿದೆ. ಲಕ್ಷ್ಮಣ್ ಅವರಿಗೆ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣೆ ಪಿಎಸ್ಐ ಅನೂಪ್ ನಾಯಕ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.
Comments are closed.