ಕುಂದಾಪುರ: ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್ ಅವರ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸಂತಾಪ ಸೂಚಿಸಿದ್ದಾರೆ.

‘ಪಿಎಸ್ಐ ಅವರ ನಿಧನದ ಸುದ್ದಿ ಕೇಳಿ ಅತೀವ ನೋವಾಯಿತು. ನಾನು ಕಂಡ ಅತ್ಯಂತ ಸೌಜನ್ಯಯುತ ಮತ್ತು ಮಾನವೀಯ ಅಧಿಕಾರಿಗಳಲ್ಲಿ ಇವರೂ ಒಬ್ಬರು. ಪ್ರತಿಯೊಬ್ಬರಿಗೂ ಗೌರವ ನೀಡಿ, ಅಹಂಕಾರವಿಲ್ಲದೆ ಮಾತನಾಡಿಸುವ ಇವರ ಗುಣ ಎಲ್ಲರಿಗೂ ಮಾದರಿಯಾಗಿತ್ತು’.
‘ಖಾಕಿ ಸಮವಸ್ತ್ರದ ಹಿಂದಿದ್ದ ಒಬ್ಬ ದಕ್ಷ ಅಧಿಕಾರಿಯನ್ನು ಮತ್ತು ಅದಕ್ಕಿಂತ ಮಿಗಿಲಾಗಿ ಒಬ್ಬ ಒಳ್ಳೆ ಮನುಷ್ಯನನ್ನು ಇಂದು ನಾವು ಕಳೆದುಕೊಂಡಿದ್ದೇವೆ. ತಮ್ಮ ದೀರ್ಘಕಾಲದ ಸೇವಾವಧಿಯನ್ನು ಮುಗಿಸಿ, ಇನ್ನೇನು ನಿವೃತ್ತ ಜೀವನದ ನೆಮ್ಮದಿಯನ್ನು ಕಾಣಬೇಕಾಗಿದ್ದ ಸಮಯದಲ್ಲಿ, ವಿಧಿ ಅನಿವಾರ್ಯವಾಗಿ ಇವರನ್ನು ನಮ್ಮಿಂದ ದೂರ ಮಾಡಿರುವುದು ನಿಜಕ್ಕೂದುರದೃಷ್ಟಕರ. ನಿಮ್ಮ ಅಗಲಿಕೆ ಇಡೀ ಉಡುಪಿ ಜಿಲ್ಲೆಗೆ ಮತ್ತು ನಮಗೆಲ್ಲಾ ತುಂಬಲಾರದ ನಷ್ಟ. ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲಿ.. ಓಂ ಶಾಂತಿ’ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
Comments are closed.