ಮುಂಬಯಿ: ಗೋರೆಗಾಂವ್ ಕರ್ನಾಟಕ ಸಂಘ ಇದರ 67ನೆಯ ನಾಡಹಬ್ಬ ಸಮಾರಂಭ ಹಾಗೂ ವಿಚಾರಗೋಷ್ಠಿ ಸಮಾರಂಭವು ಮಾರ್ಚ್ 1 ರಂದು ಬೆಳಿಗ್ಗೆ ಮಲಾಡ್ ಪಶ್ಚಿಮ ಸುಂದರ ನಗರದ ಹಿಂದಿರುವ ಡಿ. ಜಿ. ಕೇತನ್ ಇಂಟರ್ನ್ಯಾಷನಲ್ ಸಭಾಗೃಹದಲ್ಲಿ ಜರಗಿತು.

ಕಾರ್ಯಕ್ರಮದ ವಿಚಾರಗೋಷ್ಠಿಯ ಉದ್ಘಾಟನೆ ಸಮಾರಂಭವನ್ನು ಸಮಾಜಸೇವಕ ಸತೀಶ್ ಶೆಟ್ಟಿ ಕೊಟ್ರಪಾಡಿ ಉದ್ಘಾಟಿಸಿ ಶುಭ ಹಾರೈಸುತ್ತಾ ಗೊರೆಗಾಂವ್ ಕರ್ನಾಟಕ ಸಂಘದ ನಮ್ಮ ನಾಡಿನ ಬಾಷೆ ಮಾತ್ರವಲ್ಲದೆ ಧರ್ಮ, ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರತವಾಗಿದ್ದು ಈ ಸಂಘಕ್ಕೆ ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಕನ್ನಡ ಪರ ಕಾರ್ಯಕ್ರಮಗಳನ್ನು ಆಗಾಗ ನಡೆಸುತ್ತಾ ತುಳು ಕನ್ನಡಿಗರನ್ನು ಒಂದೆಡೆ ಸೇರಿಸುತ್ತಾ ಬಂದಿರುವ ಗೋರೆಗಾಂವ್ ಕರ್ನಾಟಕ ಸಂಘವು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿ ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ಮಾತನಾಡಿ ಕನ್ನಡದ ಕಾರ್ಯಕ್ರಮಗಳಲ್ಲಿ ಬಾಗವಹಿಸಲು ನನಗೆ ಸಂತೋಷವಾಗುತ್ತಿದೆ . ಕನ್ನಡಿಗರಾದ ನಾವು ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಕಾರ್ಯನಿರತರಾಗಬೇಕು. ಈ ನಿಟ್ಟಿನಲ್ಲಿ ಗೋರೆಗಾಂವ್ ಕರ್ನಾಟಕ ಸಂಘಕ್ಕೆ ಅಭಿನಂದನೆ ಸಲ್ಲಿಸುತ್ತಿರುವೆನು. ದೇಶ ವಿದೇಶಗಳಲ್ಲಿನ ಹೆಚ್ಚಿನ ಎಲ್ಲಾ ಕನ್ನಡ ಸಂಘಟನೆಗಳು ನಾಡಹಬ್ಬವನ್ನು ಆಚರಿಸುತ್ತಿದ್ದು, ನಮ್ಮವರು ಎಲ್ಲಿದ್ದರೂ ಕನ್ನಡವನ್ನು ಮರೆಯುವಂತಿಲ್ಲ. ಕನ್ನಡವನ್ನು ಉಳಿಸುವುದು ನಮ್ಮ ಮುಖ್ಯ ಗುರಿಯಾಗಲಿ. ನಮ್ಮ ಬಾಷೆಯನ್ನು ಪ್ರ್ತಿತಿಸುದರೊಂದಿಗೆ ಇತರ ಬಾಷೆಯನ್ನು ಗೌರವಿಸೋಣ. ಇಂತಹ ಸಂಘಕ್ಕೆ ನನ್ನ ಬೆಂಬಲ ಸದಾ ಇದೆ ಎಂದರು.
ಗೌರವ ಅತಿಥಿಯಾಗಿ ಥಾಣೆ ಬಂಟ್ಸ್ ಅಸೋಷಿಯೇಶನಿನ ಉಪಾಧ್ಯಕ್ಷ ಚಂದ್ರಶೇಖರ ಎಸ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಕೊರುತ್ತಾ ನಾಡಹಬ ಕನ್ನಡಿಗರ ಸಡಗರ. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಕರಾಗಳಿ ಕನ್ನಡಿಗರ ಪಾತ್ರ ಮಹತ್ವದ್ದ್ ಹೊರನಾಡಿನಲ್ಲಿರುವ ಎಲ್ಲಾ ಕನ್ನಡ ಸಂಘಟನೆಗಳು ಕನ್ನಡ ಉಳಿಸುವಲ್ಲಿ ಸದಾ ಕ್ರಿಯಾಶೀಲವಾಗಿದೆ. ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸುವ ಅಗತ್ಯವಿದೆ ಎಂದರು.
ಸಂಘದ ಮುಖವಾಣಿ ಮುಂಬೆಳಕು ವಾರ್ಷಿಕ ಸಂಚಿಕೆಯನ್ನು ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾದ ವಿಶ್ವನಾಥ ಕೆ ಶೆಟ್ಟಿ ಯವರು ವೇದಿಕೆಯಲ್ಲಿದ್ದ ಇತರ ಗಣ್ಯರೊಂದಿಗೆ ಬಿಡುಗಡೆ ಮಾಡಿ
ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಗೂ ಉಪವಿಭಾಗಗಳ ಎಲ್ಲಾ ಕಾರ್ಯಕರ್ತರು ಸಂಘದ ನಾಡಹಬ್ಬ ಸಮಾರಂಭ ಸೇರಿ ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ನಿರಂತರ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘದ ಕಾರ್ಯಲಯವು ಪುನರ್ನಿಮಾಣದ ಹಂತದಲ್ಲಿದ್ದು ಸಂಘಕ್ಕೆ ಯಾವುದೇ ಆದಾಯವಿಲ್ಲದ ಕಾರಣ ನಮಗೆ ದಾನಿಗಳ ಸಹಾಯ ಅನಿವಾರ್ಯವಾಗಿದೆ. ನಮಗೆ ಪ್ರೋತ್ಸ್ದಾಹಿಸುವ ಎಲ್ಲರಿಗೂ ಅಭಿನಂದನೆಗಳು ಎಂದರು.
ರಿಲಯನ್ಸ್ ನ ಕಾರ್ಪೋರೇಟ್ ಮೀಡಿಯಾ ಎಂಡ್ ಕಂಟೆಂಟ್ ವಿಭಾಗದ ಮುಖ್ಯಸ್ಥ, ಪತ್ರಕರ್ತ ದಯಾಸಾಗರ್ ಚೌಟ ಇವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆದಿದ್ದು ಸಾಮಾಜಿಕ, ಶೈಕ್ಷಣಿಕ ನೆಲೆಯಲ್ಲಿ ಕನ್ನಡಿಗರ ಕೊಡುಗೆ ವಿಷಯದಲ್ಲಿ ಅಮೃತಾ ಎ. ಶೆಟ್ಟಿ ಮತ್ತು ಧಾರ್ಮಿಕ, ಸಾಂಸ್ಕೃತಿಕ ನೆಲೆಯಲ್ಲಿ ಕನ್ನಡಿಗರ ಕೊಡುಗೆ ಬಗ್ಗೆ ಜಿ. ಟಿ. ಆಚಾರ್ಯ ಉಪನ್ಯಾಸ ನೀಡಿದರು.
ಅತಿಥಿಗಳನ್ನು ಮತ್ತು ಉಪಾನ್ಯಾಸಕರುಗಳನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಗುಣ ಬಂಗೇರ, ಜೊತೆ ಕಾರ್ಯದರ್ಶಿ ಸಹನಿ ವಿ ಶೆಟ್ಟಿ, ಪೇಟೆಮನೆ ಪ್ರಕಾಶ್ ಶೆಟ್ಟಿ, ಮೇರಿ ಲಿಲ್ಲಿ ಡಿ .ಸೋಜಾ, ರಂಗಸ್ಥಳದ ನಿರ್ದೇಶಕಿ ಲೀಲಾ ಗಣೇಶ್ , ಗ್ರಂಥಾಲಯದ ನಿರ್ದೇಶಕಿ ಶೈಲಾ ನಾಯಕ್ ಪರಿಚಯಿಸಿದರು.
ಪ್ರಮೀಳಾ ಆಚಾರ್ಯ, ಶಕುಂತಲಾ ಆಚಾರ್ಯ, ಶೋಭಾ ಆಚಾರ್ಯ, ಸುಜಾತ ಆಚಾರ್ಯ ಮತ್ತು ಲೀಲಾ ಗಣೇಶ್ ಸ್ವಾಗತ ಗೀತೆ ಹಾಡಿದರು, ಸೀಮಾ ಕುಲಕರ್ಣಿ, ವಸಂತಿ ಕೋಟೆಕಾರ್, ಶೋಭಾ ಆಚಾರ್ಯ, ಸುಜಾತ ಆಚಾರ್ಯ, ಲೀಲಾ ಗಣೇಶ್ ಉದ್ಘಾಟನಾ ಗೀತೆ ಹಾಡಿದರು, ಸಾಂಸ್ಕೃತಿಕ ಕಾರ್ಯಕ್ರಮವನ್ನು ಸುಧಾಕರ ಎಲ್ಲೂರು ಮತ್ತು ಸಭಾ ಕಾರ್ಯಕ್ರಮವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಶಾಂತಾ ಎನ್. ಶೆಟ್ಟಿ ನಿರ್ವಹಿಸಿದರು ಸಹನಿ ವಿ ಶೆಟ್ಟಿ ವಂದನಾರ್ಪಣೆ ಮಾಡಿದರು.
ಸಂಘದ ಮಹಿಳಾ ಸದಸ್ಯರಿಂದ, ದೇವಾಡಿಗ ಸಂಘ ಮುಂಬಯಿಯ ಸ್ಥಳೀಯ ಸಮಿತಿಯ ಮಹಿಳಾ ಸದಸ್ಯರಿಂದ, ಕರ್ನಾಟಕ ವಿಶ್ವಕರ್ಮಸೋಸಿಯೇಷನ್ ಇದರ ಮಹಿಳಾ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಲ್ಲದೆ ಸಂಗೀತ ಕಾರ್ಯಕ್ರಮ ನಡೆಯಿತು.
ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾದ ವಿಶ್ವನಾಥ ಕೆ ಶೆಟ್ಟಿ, ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಸರಿತಾ ನಾಯಕ್, ಗೌರವ ಪ್ರಧಾನ ಕಾರ್ಯದರ್ಶಿ ಶಾಂತಾ ಎನ್.ಶೆಟ್ಟಿ, ಜೊತೆ ಕೋಶಾಧಿಕಾರಿ ಉಷಾ ಶೆಟ್ಟಿ, ಪಾರುಪತ್ಯಗಾರರುಗಳಾದ ದೇವಲ್ಕುಂದ ಭಾಸ್ಕರ್ ಶೆಟ್ಟಿ, ನಾರಾಯಣ ಮೆಂಡನ್ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷೆ ಸರಿತಾ ಸುರೇಶ್ ನಾಯಕ್, ಸ್ವಾಗತಿಸಿ ಪ್ರಸ್ತಾವಿಕ ನುಡುಗಳನ್ನಾಡಿದರು. ಸೀಮಾ ಕುಲಕರ್ಣಿ, ವಸಂತಿ ಕೋಟೆಕಾರ್ ಮತ್ತು ಶೈಲಾ ನಾಯಕ್ ಪ್ರಾರ್ಥನೆ ಮಾಡಿದರು.
ಸಮಾರೋಪ: ಕಳೆದ 67 ವರ್ಷಗಳಿಂದ ಕನ್ನಡಪರ ಚಟುವಟಿಕೆಗಳಲ್ಲಿ ನಿರತರಾದ ಗೊರೆಗಾಂವ್ ಕರ್ನಾಟಕ ಸಂಘದ ಸ್ಥಾಪಕರಲ್ಲಿ ಪ್ರಮುಖರಾದ ಮೂರೂರು ಸಂಜೀವ ಶೆಟ್ಟಿಯವರು ಸೇರಿ ಎಲ್ಲಾ ಹಿರಿಯರನ್ನು ಸ್ಮರಿಸಬೇಕಾಗಿದೆ. ಇಂದು ನಾಡಿನಲ್ಲಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಗೊರೆಗಾಂವ್ ಕರ್ನಾಟಕ ಸಂಘದಂತಹ ಕನ್ನಡ ಸಂಘಗಳ ಮೂಲಕ ಕನ್ನಡ ಬಾಷೆ, ಸಂಸ್ಕೃತಿ, ಆಚಾರ, ವಿಚಾರ ಹೊರನಾಡಿನಲ್ಲಿ ಶ್ರೀಮಂತವಾಗಿ ಬೆಳೆಯುತ್ತಿರುವುದು ಅಭಿನಂದನೀಯ ಎಂದು ಬಂಟರ ಸಂಘ ಮುಂಬಯಿಯ ಬೊರಿವಲಿ ಶಿಕ್ಷಣ ಸಂಸ್ಥೆಯ ಉಪಕಾರ್ಯಾಧ್ಯಕ್ಷರಾದ ಎಸ್. ನಿತ್ಯಾನಂದ ಹೆಗ್ಡೆ ನುಡಿದರು.
ಗೋರೆಗಾಂವ್ ಕರ್ನಾಟಕ ಸಂಘದ 67ನೆಯ ನಾಡಹಬ್ಬ ಸಮಾರಂಭ ಹಾಗೂ ವಿಚಾರಗೋಷ್ಠಿ ಸಮಾರಂಭವು ಮಾರ್ಚ್ 1 ರಂದು ಬೆಳಿಗ್ಗೆ ಮಲಾಡ್ ಪಶ್ಚಿಮ ಸುಂದರ ನಗರದ ಹಿಂದಿರುವ ಡಿ. ಜಿ. ಕೇತನ್ ಇಂಟರ್ನ್ಯಾಷನಲ್ ಸ್ಕೂಲಿನ 9ನೇ ಮಾಳಿಗೆಯ ಸಭಾಗೃಹದಲ್ಲಿ ಜರಗಿದ್ದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯುತ್ತಿದೆ. ತುಳು ಕನ್ನಡಿಗರ ವಿಭಿನ್ನ ವ್ಯಕ್ತಿತ್ವದಿಂದಾಗಿ ಹೊರನಾಡಿನಲ್ಲಿ ನಮ್ಮ ನಾಡಿನ ಆಚಾರ ವಿಚಾರಗಳು ಬೆಳೆಯುತ್ತಿದೆ. ಆದುದರಿಂದ ಕನ್ನಡ ಸಂಘಗಳನ್ನು ಹಾಗೂ ಕನ್ನಡಿಗರ ಸಂಘಟನೆಗಳನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕೈಜೋಡಿಸೋಣ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬೊಂಬೆ ಬಂಟ್ಸ್ ಅಸೋಷಿಯೇಶನಿನ ಅಧ್ಯಕ್ಷ ನ್ಯಾ. ಡಿ. ಕೆ. ಶೆಟ್ಟಿ, ಯವರು ಮಾತನಾಡುತ್ತಾ ನನಗೆ ಕನ್ನಡಿಗನೆನ್ನಲು ಅಭಿಮಾನವಾಗುತ್ತಿದೆ. ಗೋರೆಗಾಂವ್ ಕರ್ನಾಟಕ ಸಂಘಕ್ಕೂ ನನಗೂ ನಿಕಟ ಸಂಮಂಧವಿದ್ದು ಇಲ್ಲಿ ಎಲ್ಲರೂ ಒಂದೇ ಕುಟುಂಬದಂತೆ ಕನ್ನಡದ ಸೇವೆಯಲ್ಲಿ ನಿರತರಾಗಿದ್ದಾರೆ. ಸಂಘದ ಚಟುವಟಿಕೆಗಳನ್ನು ನೋಡುವಾಗ ನನಗೂ ಈ ಸಂಘದಲ್ಲಿ ಸೇರಲು ಮನಸ್ಸಾಗುತ್ತಿದೆ. ಆದುದರಿಂದ ಗೋರೆಗಾಂವ್ ಕರ್ನಾಟಕ ಸಂಘವನ್ನು ಕಟ್ಟಿದ ಹಿರಿಯರನ್ನು ಸ್ಮರಿಸಬೇಕಾಗಿದೆ ಎಂದರು.
ಗೌರವ ಅತಿಥಿ ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಮಾಜಿ ಜೊತೆ ಕಾರ್ಯದರ್ಶಿ ಮನೋರಮ ಎಸ್. ಬಿ. ಶೆಟ್ಟಿಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಕರ್ನಾಟಕ ನಮ್ಮ ಹೆಮ್ಮೆಯ ನಾಡು.ನಮ್ಮ ಸಂಸ್ಕಾರ, ಆಚಾರ, ವಿಚಾರಗಳು ನಮ್ಮ ಕರ್ನಾಟಕದಿಂದ ಬಂದದ್ದು. ಇಂತಹ ಸಂಘ ಸಂಸ್ಥೆಗಳಿಂದ ಅದು ಇಲ್ಲಿಯೂ ಉಳಿದು ಬೆಳೆದಿದೆ ಎಂದರು.
ಇನ್ನೋರ್ವ ಗೌರವ ಅತಿಥಿ ರಜಕ ಸಂಘ ಮುಂಬಯಿಯ ಅಧ್ಯಕ್ಷ ಸಿಎ ವಿಜಯ ಕುಂದರ್ ಮಾತನಾಡಿ ಕಳೆದ ಏಳು ದಶಕಗಳಿಂದ ಕನ್ನಡದ ಸೇವೆ ಮಾಡುತ್ತಾ ಬಂದಿರುವ ಸಂಘದ ಸೇವೆ ಶಿಸ್ತು ಮತ್ತು ಏಕತೆಯ ಪ್ರತೀಕ. ಇಲ್ಲಿ ಸಂಘಟಿತ ಮಹಾಶಕ್ತಿ ಇದೆ. ಪ್ರತಿಯೊಬ್ಬನ ನಿಸ್ವಾರ್ಥ ಸೇವೆ ಸಂಘದ ಯಶಸ್ಸಿಗೆ ಕಾರಣ. ಮುಂದಿನ ತಲೆಮಾರಿಗೆ ಗೋರೆಗಾಂವ್ ಕರ್ನಾಟಕ ಸಂಘವು ಉತ್ತಮ ನಿದರ್ಶನವಾಗಲಿ ಎಂದು ಶುಭ ಹಾರೈಸಿದರು.
ಗೌರವ ಅತಿಥಿ ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾ ಬಾಯಂದರ್ ಇದರ ಅಧ್ಯಕ್ಷ ಗೋಪಾಲಕೃಷ್ಣ ಜಿ. ಗಾಣಿಗ, ಮಾತನಾಡುತ್ತಾ ತಾನು ಮುಂಬಯಿಗಾಗಮಿಸಿದ ಸಂದರ್ಭದಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಪ್ರಮುಖ ಸ್ಥಾಪಕರ ಸಹಾಯದಿಂದ ಶಾಲೆಯಲ್ಲಿ ಪ್ರವೇಶ ದೊರಕಿದನ್ನು ಸ್ಮರಿಸಿದರು. ಕನ್ನಡಿಗರಿಂದ ಕನ್ನಡಿಗರಿಗೆ ಸಹಾಯವಾಗಲು ಇಂತಹ ಸಂಘಟನೆಗಳು ಬೇಕು. ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಕನ್ನಡಿಗರಿಂದಲೇ ಕನ್ನಡದ ಉಳಿವು ಸಾಧ್ಯ ಎಂದು ಗೋರೆಗಾಂವ್ ಕರ್ನಾಟಕ ಸಂಘದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗೌರವ ಅತಿಥಿ ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾ ಬಾಯಂದರ್ ಇದರ ಪ್ರಧಾನ ಕಾರ್ಯದರ್ಶಿ ಸೀತಾರಾಮ ಸಿ ಶೆಟ್ಟಿ ಅಮಾಸೇಬೈಲ್ ಅವರು ಮಾತನಾಡುತ್ತಾ ಅತಿಥಿಯಾಗಿ ನಾನು ಯಾವುದೇ ಸಂಘಟನೆಯಲ್ಲಿ ಪಾಲ್ಗೊಳ್ಳುವುದು ವಿರಳ. ಇಲ್ಲಿನ ಕಾರ್ಯಕ್ರಮಗಳನ್ನು ನೋಡುವಾಗ ಮುಂದೆ ಸಭಾಂಗಣದಲ್ಲಿ ಕುಳಿತು ಸಂಘದ ಕಾರ್ಯಕ್ರಮಗಳನ್ನು ವೀಕ್ಷಿಸಲಿಚ್ಚಿಸುವೆನು ಎಂದು ಅಭಿಮಾನದಿಂದ ದುಡಿದರು.
ಸಂಘದ ಅಧ್ಯಕ್ಷರಾದ ವಿಶ್ವನಾಥ ಕೆ ಶೆಟ್ಟಿ ಯವರು ಎಲ್ಲರನ್ನು ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಶಾಂತಾ ಎನ್.ಶೆಟ್ಟಿ ಸಂಘದ ಚಟುವಟಿಕೆಗಳ ಮಾಹಿತಿಯಿತ್ತರು.
ಉಷಾ ಯಸ್. ಶೆಟ್ಟಿ, ಚಂದ್ರಾವತಿ ಬಿ ಶೆಟ್ಟಿ, ಯಶೋಧ ಶೆಟ್ಟಿ, ಸಹನಿ ಶೆಟ್ಟಿ, ಶಾಲಿನಿ ನಾಯಕ್ಮ ಮತ್ತು ಸುಜ್ನಾನಿ ಬಿರಾದರ ಸ್ವಾಗತ ಗೀತೆಯನ್ನಾಡಿದರು.
ಪರಿಸರದ ಕನ್ನಡ ಶಾಲಾ ಮಕ್ಕಳಿಗೆ ಸಂಘದ ವಿವಿಧ ದತ್ತಿನಿಧಿಯನ್ನು ವಿತರಿಸಲಾಯಿತು. ಶೈಲಾ ನಾಯಕ್ ಮತ್ತು ಸುಜ್ ನಾನಿ ಬಿರ್ದಾರ್ ಮಕ್ಕಳ ಯಾದಿಯನ್ನು ವಾಚಿಸಿದರು.
ಸಂಘದ ಮಾಜಿ ಅಧ್ಯಕ್ಷ ಹಾಗೂ ನಿಕಟಪೂರ್ವ ಪಾರುಪತ್ಯಗಾರರಾದ ಜಿ. ಟಿ. ಆಚಾರ್ಯ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಪಾರುಪತ್ಯಗಾರರಾದ ದೇವಲ್ಕುಂದ ಭಾಸ್ಕರ ಶೆಟ್ಟಿಯವರು ಜಿ. ಟಿ. ಆಚಾರ್ಯ ಅವರ ಸಮಾಜ ಸೇವೆ ಬಗ್ಗೆ ಮಾಹಿತಿಯಿತ್ತರು, ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಜಿ. ಟಿ. ಆಚಾರ್ಯ ಅವರು ಮುಂಬಯಿಯಲ್ಲಿ ಸುಧೀರ್ಘ್ಹ ಸಮಾಜ ಸೇವೆಯ ನಂತರ ಊರಲ್ಲಿ ಇದ್ದರೂ, ರಕ್ತ ಸಂಮಂಧ ಇಲ್ಲದಿದ್ದರೂ ಹೃದಯ ಸಂಮಂಧ ದಿಂದಾಗಿ ಸಂಘದ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರಯತ್ನಿಸುತ್ತಿರುವೆನು. ನಮ್ಮಲ್ಲಿನ ಸಂಮಂಧ ಅದು ನಾನು ಎಲ್ಲಿ ಇದ್ದರೂ ಅದು ಸಮೀಪಕ್ಕೆ ಸೆಳೆಯುತ್ತಿದೆ. ನಿಸ್ವಾರ್ಥ ಸೇವೆಯಿಂದ ಸಂಘ ನಮ್ಮನ್ನು ಸ್ಮರಿಸುತ್ತದೆ. ಸಂಘದಿಂದ ನಾನು ಗಳಿಸಿದ್ದು ಅಪಾರ. ಹಿರಿಯರಿಂದ ಬಹಳಷ್ಠನ್ನು ಕಲಿತ್ತಿದ್ದು ಶಿಸ್ತಿಗೆ ಹೆಸರಾದಂತಹ ಸಂಘವು ನನ್ನ ಮೇಲೆ ತೋರಿಸಿದ ಪ್ರೀತಿಗೆ ಅಭಾರಿಯಾಗಿದ್ದೇನೆ ಎಂದರು.
ವೇದಿಕೆಯ ಗಣ್ಯರನ್ನು ಶಿವಾನಂದ ಶೆಟ್ಟಿ, ಉಷಾ ಬಿ. ಶೆಟ್ಟಿ ಉಷಾ ಎಸ್. ಶೆಟ್ಟಿ, ಸುಜಾತಾ ಆಚಾರ್ಯ, ಪ್ರಮೀಳಾ ಆಚಾರ್ಯ, ಶಕುಂತಳಾ ಆಚಾರ್ಯ ಪರಿಚಯಿಸಿದರು.
ವಾಣಿ ಶೆಟ್ಟಿಯವರು ಕಾರ್ಯಕ್ರಮವನ್ನು ನಿರ್ವಹಿಸಿದ್ದು ಹರಿಶ್ಚಂದ್ರ ಆಚಾರ್ಯ ವಂದನಾರ್ಪಣೆ ಮಾಡಿದರು.
ಮನೋರಂಜನೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಘದ ರಂಗಸ್ಥಳದ ವತಿಯಿಂದ ಪ್ರಶಸ್ತಿ ವಿಜೇತ ಕಿರುನಾಟಕ “ನಮ ಒಂಜಿ ಎನ್ನಿಯಡಾ…” ಪ್ರದರ್ಶನವಿತ್ತು. ಸತೀಶ್ ಶೆಟ್ಟಿ ಕಣಂಜಾರ್ ರಚಿಸಿ ನಿರ್ದೇಶಿಸಿದ ಈ ನಾಟಕದಲ್ಲಿ ಪ್ರತಿಮಾ ಬಂಗೇರ, ಉಷಾ ಸತೀಶ್ ಶೆಟ್ಟಿ, ಲೀಲಾ ಗಣೇಶ್ ಕಾರ್ಕಳ, ವಾಣಿ ಶೆಟ್ಟಿ, ಸಹಾನಿ ಶೆಟ್ಟಿ, ಮತ್ತು ಸಂಧ್ಯಾ ಅಭಿನಯಿಸಿದ್ದು ರಾಜೇಶ್ ಹೆರ್ಮುಂಡೆ ಸಂಗೀತ ನೀಡಿದ್ದಾರೆ.
ದಿನಪೂರ್ತಿ ನಡೆದ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಂಘದ ಇತರ ಸದಸ್ಯರೊಂದಿಗೆ ಪಾರುಪತ್ಯಗಾರರಾದ ನಾರಾಯಣ ಆರ್. ಮೆಂಡನ್, ನಿತ್ಯಾನಂದ ಡಿ. ಕೋಟ್ಯಾನ್, ಉಪಾಧ್ಯಕ್ಷೆ ಸರಿತಾ ಸುರೇಶ್ ನಾಯಕ್, ಗೌರವ ಕೋಶಾಧಿಕಾರಿ ಕರುಣಾಕರ ಕೆ. ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷೆ ವಿಶಾಲಾಕ್ಷಿ ಊಳೂವಾರ, ಸಮಿತಿಯ ಸದಸ್ಯರಾದ ಎಂ. ಆನಂದ ಶೆಟ್ಟಿ, ಸುರೇಶ್ ಪೂಜಾರಿ, ಪೇಟೆಮನೆ ಪ್ರಕಾಶ್ ಶೆಟ್ಟಿ, ಸಚ್ಚೀಂದ್ರ ಕೆ. ಕೋಟ್ಯಾನ್, ಸುಧಾಕರ ಎಲ್ಲೂರು, ವಿಶೇಷ ಆಮಂತ್ರಿತರಾದ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ರಮೇಶ್ ಶೆಟ್ಟಿ ಪಯ್ಯಾರ್, ಪದ್ಮಜಾ ಮಣ್ನೂರು, ಸುಚಲತ ಪೂಜಾರಿ, ಭಾಸ್ಕರ ಟಿ. ಸಫಲಿಗ, ಗುಣೋದಯ ಎಸ್. ಐಲ್, ವನಿತಾ ಪಾಲನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಗುಣಾ ಎಸ್. ಬಂಗೇರ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಶಿವಾನಿ ಎಚ್. ಆಚಾರ್ಯ, ಗ್ರಂಥಾಯನದ ನಿರ್ದೇಶಕಿ ಶೈಲಾ ಎಸ್ ನಾಯಕ್, ರಂಗಸ್ಥಳದ ನಿರ್ದೇಶಕಿ ಲೀಲಾ ಗಣೇಶ್ ಕಾರ್ಕಳ ಉಪಸಮಿತಿಗಳ ಇತರ ಪದಾಧಿಕಾರಿಗಳು, ಸಂಚಾಲಕರು ಮತ್ತು ಸದಸ್ಯರುಗಳು ಸಹಕರಿಸಿದರು.
ವರದಿ : ಈಶ್ವರ ಎಂ. ಐಲ್
Comments are closed.